ಲಕ್ನೋ:- ಕಾಂಗ್ರೆಸ್ ಕಚೇರಿಯಲ್ಲಿ ಯುವಕನ ಶವ ಪತ್ತೆ ಆಗಿರುವ ಘಟನೆ ಲಕ್ನೋದಲ್ಲಿ ಜರುಗಿದೆ.
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ಸತ್ಯ: ಸಚಿವ ಕೃಷ್ಣಬೈರೇಗೌಡ!
ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಗೋರಖ್ಪುರದಿಂದ ಲಕ್ನೋಗೆ ಬಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಗೋರಖ್ಪುರದ ನಿವಾಸಿ ಪ್ರಭಾತ್ ಪಾಂಡೆ ಅವರು ಕಾಂಗ್ರೆಸ್ ಕಚೇರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ
ಪ್ರಭಾತ್ ಪಾಂಡೆ ಸಾವಿನ ಸುದ್ದಿ ತಿಳಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮತ್ತು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಆಸ್ಪತ್ರೆಗೆ ಆಗಮಿಸಿದರು. ಪ್ರಭಾತ್ ಸಾವಿಗೆ ನಿಜವಾದ ಕಾರಣ ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ ಎಂದು ಬ್ರಜೇಶ್ ಪಾಠಕ್ ಈ ವೇಳೆ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಜಯ್ ರೈ, ಸರಕಾರ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.