ನವದೆಹಲಿ: ಶ್ರೀಮಂತರಿಂದ ತೆರಿಗೆ ಪಡೆದು ಬಡವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶ್ರೀಮಂತರಿಂದ ತೆರಿಗೆ ಪಡೆದು ಬಡವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ. ಅದಕ್ಕೆ ತಕ್ಕಂತೆ ಸರ್ಕಾರವು ತನ್ನದೇ ಆದ ಮಿತಿಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
WhatsApp ಹೊಸ ವೈಶಿಷ್ಟ್ಯ: ಬಳಕೆದಾರರು ಫುಲ್ ಫಿದಾ – ಏನದು ಅಂತೀರಾ..?
ಸರಕು ಮತ್ತು ಸೇವಾ ತೆರಿಗೆ ಮತ್ತು ಇತರ ಯಾವುದೇ ತೆರಿಗೆಗಳನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೇಳಬೇಡಿ. ಇದು ನಿರಂತರ ಪ್ರಕ್ರಿಯೆ ಆಗಿದೆ. ನಾವು ತೆರಿಗೆ ಕಡಿಮೆ ಮಾಡಿದ್ರೆ ನೀವು ಇನ್ನೂ ಹೆಚ್ಚಿನದ್ದನ್ನು ಕೇಳ್ತೀರಿ. ನಾವು ತೆರಿಗೆ ಕಡಿಮೆ ಮಾಡಿದ್ರೆ ಬಡವರ ಯೋಜನೆಗಳಿಗೆ ತೊಂದರೆಯಾಗುತ್ತೆ. ಯಾವುದೇ ಸರ್ಕಾರ ತೆರಿಗೆ ಇಲ್ಲದೇ ಕಲ್ಯಾಣ ರಾಜ್ಯ ನಡೆಸಲು ಸಾಧ್ಯವಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.