ಜಗತ್ತಿನ 20 ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಆದರೆ ವಿಷಾದಕರ ಅಂದರೆ ಆ 20 ನಗರಗಳ ಪಟ್ಟಿಯಲ್ಲಿ ನಮ್ಮ ಭಾರತದ 13 ನಗರಗಳೇ ಇವೆ..
Kamala Harris: ಕ್ಯಾಲಿಫೋರ್ನಿಯಾ ಗವರ್ನರ್ ರೇಸ್’ನಲ್ಲಿ ಕಮಲಾ ಹ್ಯಾರಿಸ್..!? ಸ್ಪರ್ಧೆಯ ಬಗ್ಗೆ ಅವರು ಹೇಳಿದ್ದೇನು?
ಹೌದು.. ಗಾಳಿಯಲ್ಲಿನ ಮಾಲಿನ್ಯಕರ ಅಂಶವನ್ನು ಮಾಪನ ಮಾಡುವ ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂಏರ್ನ ವಿಶ್ವ ವಾಯು ಗುಣಮಟ್ಟ ವರದಿ 2024ರ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳು ಭಾರತದಲ್ಲಿವೆ. ಜಗತ್ತಿನ 20 ಅತ್ಯಂತ ಕಲುಷಿತ ನಗರಗಳಲ್ಲಿ 13 ಭಾರತದಲ್ಲೇ ಇವೆ. ಮೇಘಾಲಯದ ಬರ್ನಿಹತ್ ನಗರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ರೆ, ದೆಹಲಿ ಇನ್ನೂ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ನಾಚಿಕೆಗೇಡಿನ ಪಟ್ಟಿಯಿಂದ ಹೊರಬಂದಿಲ್ಲ ಅನ್ನೋದು ವಿಷಾಧನೀಯ.
ವರದಿಯಲ್ಲಿ ಏನಿದೆ ಅನ್ನೋದನ್ನ ನೋಡೋದಾದರೆ , 2024 ರ ವೇಳೆಗೆ ಭಾರತದಲ್ಲಿ PM2.5 ಮಟ್ಟವು ಶೇ.7 ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳುತ್ತದೆ. 2024 ರಲ್ಲಿ, ಇದು ಪ್ರತಿ ಘನ ಮೀಟರ್ಗೆ ಸರಾಸರಿ 50.6 ಮೈಕ್ರೋಗ್ರಾಂಗಳಷ್ಟಿದ್ದರೆ, 2023 ರಲ್ಲಿ ಇದು ಪ್ರತಿ ಘನ ಮೀಟರ್ಗೆ 54.4 ಮೈಕ್ರೋಗ್ರಾಂಗಳಷ್ಟಿತ್ತು. ಆದರೂ, ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ.
ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ದಾಖಲಾಗಿದೆ. ಇಲ್ಲಿ ವಾರ್ಷಿಕ ಸರಾಸರಿ PM2.5 ಮಟ್ಟವು ಪ್ರತಿ ಘನ ಮೀಟರ್ಗೆ 91.6 ಮೈಕ್ರೋಗ್ರಾಂಗಳಷ್ಟಿತ್ತು. 2023 ರ ಪ್ರತಿ ಘನ ಮೀಟರ್ಗೆ 92.7 ಮೈಕ್ರೋಗ್ರಾಂಗಳ ಅಂಕಿ ಅಂಶಕ್ಕೆ ಹೋಲಿಸಿದರೆ ಇದು ಬಹುತೇಕ ಬದಲಾಗಿಲ್ಲ.
ಬರ್ನಿಹತ್, ದೆಹಲಿ, ಪಂಜಾಬ್ನ ಮುಲ್ಲನ್ಪುರ, ಫರಿದಾಬಾದ್, ಲೋನಿ, ನವದೆಹಲಿ, ಗುರಗಾಂವ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್ನಗರ, ಹನುಮಾನ್ಗಢ ಮತ್ತು ನೋಯ್ಡಾ ಸೇರಿದೆ. ಆದರೆ ಇದರಲ್ಲಿ ಸಮಾಧಾನಕರ ಸಂಗತಿ ಎಂದರೆ ಕರ್ನಾಟಕದ ಬೆಂಗಳೂರು ಈ ಪಟ್ಟಿಯಲ್ಲಿಲ್ಲ. ಒಟ್ಟಾರೆಯಾಗಿ, ಭಾರತದ ಶೇ. 35ರಷ್ಟು ನಗರಗಳು ವಾರ್ಷಿಕ PM2.5 ಮಟ್ಟವನ್ನು WHO ಮಿತಿಯಾದ ಪ್ರತಿ ಘನ ಮೀಟರ್ಗೆ 5 ಮೈಕ್ರೋಗ್ರಾಂಗಳಿಗಿಂತ 10 ಪಟ್ಟು ಹೆಚ್ಚು ದಾಖಲಿಸಿವೆ. ವಾಯು ಮಾಲಿನ್ಯವು ಭಾರತದಲ್ಲಿ ಆರೋಗ್ಯಕ್ಕೆ ಗಂಭೀರ ಬೆದರಿಕೆಯಾಗಿ ಮುಂದುವರೆದಿದ್ದು, ಅಂದಾಜು ಜೀವಿತಾವಧಿ 5.2 ವರ್ಷಗಳಷ್ಟು ಕಡಿಮೆಯಾಗುತ್ತಿದೆ. ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಸ್ಟಡಿ ಪ್ರಕಾರ, 2009 ರಿಂದ 2019 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಸಾವುಗಳು PM2.5 ಮಾಲಿನ್ಯಕ್ಕೆ ದೀರ್ಘಕಾಲೀನ ಒಡ್ಡಿಕೊಳ್ಳುವಿಕೆಯಿಂದ ಸಂಭವಿಸಿವೆ.
PM2.5 ಎಂದರೆ ಗಾಳಿಯಲ್ಲಿ 2.5 ಮೈಕ್ರಾನ್ಗಳಿಗಿಂತ ಚಿಕ್ಕದಾದ ಸೂಕ್ಷ್ಮ ಮಾಲಿನ್ಯ ಕಣಗಳು. ಈ ಕಣಗಳು ಶ್ವಾಸಕೋಶ ಮತ್ತು ರಕ್ತಪ್ರವಾಹವನ್ನು ಪ್ರವೇಶಿಸಿ ಉಸಿರಾಟದ ತೊಂದರೆಗಳು, ಹೃದ್ರೋಗ ಮತ್ತು ಕ್ಯಾನ್ಸರ್ಗೆ ಕಾರಣವಾಗಬಹುದು. ಇದರ ಮೂಲಗಳಲ್ಲಿ ವಾಹನಗಳಿಂದ ಬರುವ ಹೊಗೆ, ಕೈಗಾರಿಕಾ ಹೊರಸೂಸುವಿಕೆ ಮತ್ತು ಮರ ಅಥವಾ ಕೃಷಿ ತ್ಯಾಜ್ಯಗಳನ್ನು ಸುಡುವುದು ಸೇರಿವೆ.