ಕೇವಲ 21 ವರ್ಷ ವಯಸ್ಸಿನಲ್ಲೇ ಭಾರತದ ಉದಯೋನ್ಮುಖ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಹಳೆಯ ಕ್ರೀಡಾಂಗಣಗಳಲ್ಲಿ ಒಂದಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ತಮ್ಮ ವೃತ್ತಿಜೀವನದ ನಾಲ್ಕನೇ ಟೆಸ್ಟ್ನಲ್ಲಿ ನಿತೀಶ್ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.
ಇದೀಗ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿಸಿ ಬಂದಿರುವ ನಿತೀಶ್ ಕುಮಾರ್ ರೆಡ್ಡಿ ಕುಟುಂಬ ಸದಸ್ಯರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ತೆರಳಿದ್ದರು. ಈ ವೇಳೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲೂರಿ ಮೆಟ್ಟಿಲು ಹತ್ತಿದರು. ಸಾಮಾನ್ಯವಾಗಿ ತಿರುಮಲ ಶ್ರೀವಾರಿ ದರ್ಶನಕ್ಕೆ ಬರುವವರು ಭಕ್ತರು ಪರ್ವತವನ್ನು ಸಮೀಪಿಸುತ್ತಿದ್ದಂತೆ ಮೊಣಕಾಲುಗಳ ಮೇಲೆ ಮೆಟ್ಟಿಲುಗಳನ್ನು ಏರುತ್ತಾರೆ.
ಅತಿಯಾಗಿ ಹಾಲು ಕುಡಿಯುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತವೆಯೇ..? ಈ ಸ್ಟೋರಿ ನೋಡಿ
ಇದೀಗ ನಿತೀಶ್ ಕುಮಾರ್ ರೆಡ್ಡಿ ಕೂಡ ಮೊಣಕಾಲೂರಿ ಮೆಟ್ಟಿಲು ಹತ್ತಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾ ಆಟಗಾರನ ಭಕ್ತಿ ಪ್ರಧಾನ ವಿಡಿಯೋ ಭಾರೀ ವೈರಲ್ ಆಗಿದೆ.
ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರನಿಗೆ ಟಿಟಿಡಿ ಆಡಳಿತ ಮಂಡಳಿ ಶ್ರೀಗಳ ನಾಮಸ್ಮರಣೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದೆ. ಅಲ್ಲದೆ ನಿತೀಶ್ ಕುಟುಂಬಕ್ಕೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
https://x.com/BluntIndianGal/status/1878857782298132525?ref_src=twsrc%5Etfw%7Ctwcamp%5Etweetembed%7Ctwterm%5E1878857782298132525%7Ctwgr%5E6c1becfbc4b35afd756638f1af63e57c0ab06539%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fnitish-kumar-reddy-climbs-tirupati-stairs-on-knees-watch-video-kannada-news-zp-963754.html
ಅದರಂತೆ ಮಂಗಳವಾರ (ಜನವರಿ 14) ಬೆಳಗ್ಗೆ ನಿತೀಶ್ ಕುಮಾರ್ ರೆಡ್ಡಿ ಕುಟುಂಬಸ್ಥರು ಸನ್ನಿಧಿಗೆ ತೆರಳಿ ತಿರುಮಲ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇದೀಗ ಮೊಣಕಾಲಿನಲ್ಲೇ ತಿರುಮಲ ಮೆಟ್ಟಿಲು ಹತ್ತುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.