ಕಲಬುರಗಿ: ಟಂ ಟಂ ಪಲ್ಟಿಯಾಗಿ ಓರ್ವ ವೃದ್ಧೆ ಸ್ಥಳದಲ್ಲೆ ಸಾವನ್ನಪ್ಪಿದ್ದು ಐವರಿಗೆ ಗಂಭೀರ ಗಾಯಗಳಾದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಘಟನೆ ನಡೆದಿದ್ದು 60 ವರ್ಷದ ಕಲ್ಲವ್ವ ಮೃತ ದುದೈವಿಯಾಗಿದ್ದಾಳೆ..
ಇದೇವೇಳೆ ಗಂಭೀರವಾಗಿ ಗಾಯಗೊಂಡವರನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೂಲಿ ಕೆಲಸಕ್ಕೆಂದು ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ..ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ