ನವದೆಹಲಿ:- ರಾಷ್ಟ್ರ ರಾಜಧಾನಿಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸರಾಸರಿ 90 ರೂ.ಗೆ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತಲೆಬಿಸಿಯಾಗಿತ್ತು.
Kitchen Hacks : ಮನೆಯಲ್ಲಿ ಜಿರಳೆ ಕಾಟವೇ? ಹಾಗಿದ್ರೆ, ಈ ಟ್ರಿಕ್ಸ್ ಫಾಲೋ ಮಾಡಿ!
ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸುವ ಮತ್ತು ಮಧ್ಯವರ್ತಿಗಳಿಂದ ಅಧಿಕ ಲಾಭವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂದು ದೆಹಲಿಯಲ್ಲಿ ಪ್ರತಿ ಕೆಜಿಗೆ 65 ರೂ.ಗಳ ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಹಣ್ಣಿನ ಮಾರಾಟವನ್ನು ಪ್ರಾರಂಭಿಸಿದೆ.
ಕಡಿಮೆ ದರದಲ್ಲಿ ಟೊಮ್ಯಾಟೊ ಮಾರಾಟಕ್ಕೆ ಅನುಕೂಲವಾಗುವಂತೆ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಗರದಾದ್ಯಂತ ಮೊಬೈಲ್ ವ್ಯಾನ್ಗಳನ್ನು ನಿಯೋಜಿಸಿದೆ. ಈ ಯೋಜನೆಯನ್ನು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಅವರು ಅಧಿಕೃತವಾಗಿ ಪ್ರಾರಂಭಿಸಿದರು. ಅವರು NCCF ವ್ಯಾನ್ಗಳನ್ನು ಫ್ಲ್ಯಾಗ್ಆಫ್ ಮಾಡಿದರು.
ನಾವು ಟೊಮ್ಯಾಟೊ ಬೆಲೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮಾರುಕಟ್ಟೆ ಮಧ್ಯಸ್ಥಿಕೆಯೊಂದಿಗೆ ಮುಂದಿನ 3-4 ದಿನಗಳಲ್ಲಿ ಟೊಮ್ಯಾಟೊ ಬೆಲೆಗಳು ಕಡಿಮೆಯಾಗುತ್ತವೆ” ಎಂದು ನಿಧಿ ಖರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.