ಕಾಲ ಕೆಟ್ಟೋಯ್ತಾ ಅಥವಾ ಮನುಷ್ಯರೇ ಕೆಟ್ಟಿದ್ರಾ ಎಂಬ ಪ್ರಶ್ನೆ ಈ ಸ್ಟೋರಿ ನೋಡಿದ್ರೆ ಗೊತ್ತಗತ್ತೆ. ಮೊಬೈಲ್ ಎಂಬ ಜಗತ್ತು ಎಷ್ಟರ ಮಟ್ಟಿಗೆ ಬೆಳೆದಿದೆ ಅಂದ್ರೆ. ಒಬ್ಬರನ್ನು ಬೆಳೆಸಲು ಬಹುದು ಹಾಗೆಯೇ ತುಳಿಯಲು ಬಹುದು.
ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸೂತಕದ ಛಾಯೆ: ಥಿನ್ನರ್ ಸೇವಿಸಿ ಬಾಲಕ ದುರ್ಮರಣ!
ಎಸ್, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪಾಠ ಹೇಳುವ ಲೇಡಿ ಪ್ರೊಫೆಸರ್ ಮದುವೆ ಆಗಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಗೆ ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ವಿಶ್ವವಿದ್ಯಾಲಯದ ಪ್ಯಾಡ್ನಲ್ಲಿ ಗಂಡ ಮತ್ತು ಹೆಂಡತಿಯ ಲಿಖಿತ ಒಪ್ಪಂದವಿದೆ ಅನ್ನೋದು ಗಮನಾರ್ಹ.
ಮದುವೆ ಹಿನ್ನೆಲೆಯಲ್ಲಿ ಲೇಡಿ ಪ್ರೊಫೆಸರ್ ವಧುವಿನಂತೆ ಅಲಂಕಾರ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿದಂತೆ ತೋರುತ್ತದೆ. ಮದುವೆಗೆ ಅವರೊಬ್ಬರೇ ಅಲ್ಲ.. ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರೂ ಪಾಲ್ಗೊಂಡಿದ್ದರು. ಮದುಮಗ ವಿದ್ಯಾರ್ಥಿಯು ಶಿಕ್ಷಕಿಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಮಂಡಿಯೂರಿ ಕುಳಿತು ಗುಲಾಬಿ ಹೂವನ್ನು ನೀಡಿದ್ದ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿಡಿಯೊ ಹರಿದಾಡುತ್ತಿದ್ದಂತೆ ವಿವಿ ಅಧಿಕಾರಿಗಳು ತನಿಖೆಗೆ ಆದೇಶಿಸಿಸಿದ್ದರು. ಅಲ್ಲದೇ ಪ್ರಾಧ್ಯಾಪಕಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದರು. ಆದರೆ ಇದೀಗ ವೈರಲ್ ಆಗಿರೋ ವಿಡಿಯೋಯಿಂದ ಮನನೊಂದಿರುವ ಆ ಪ್ರಾಧ್ಯಾಪಕಿ, ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ನಿಜ, ಫೆಬ್ರುವರಿ 1ರಂದು ಕುಲಸಚಿವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿರುವ ಪ್ರಾಧ್ಯಾಪಕಿ ಘಟನೆಯ ನಂತರ ನಡೆದ ವಿದ್ಯಮಾನಗಳು ಮನಸ್ಸಿಗೆ ನೋವುಂಟು ಮಾಡಿವೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಐದು ವರ್ಷ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ಇದೊಂದು ಮನಸ್ಸಿಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿರುವ ನಾಟಕದ ದೃಶ್ಯವಾಗಿದೆ. ಪಠ್ಯದ ಭಾಗವಾಗಿ ಈ ಸನ್ನಿವೇಶವನ್ನು ಸೃಷ್ಟಿಲಾಗಿತ್ತೇ ಹೊರತು ಯಾವುದೂ ನಿಜವಲ್ಲ. ಆಂತರಿಕ ದಾಖಲೆಗಾಗಿ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು, ಆದರೆ ಅದು ಸೋರಿಕೆಯಾಗಿದೆ ಎಂದಿದ್ದಾರೆ. ಘಟನೆಯ ತನಿಖೆ ಮುಗಿಯುವವರೆಗೆ ಪ್ರಾಧ್ಯಾಪಕಿಗೆ ರಜೆಯ ಮೇಲೆ ತೆರಳುವಂತೆ ಹಾಗೂ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದಂತೆ ವಿವಿ ಅಧಿಕಾರಿಗಳು ಸೂಚಿಸಿದ್ದಾರೆ.