ತೆಲಂಗಾಣ: 2018ರಲ್ಲಿ ಇಡೀ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಪ್ರಣಯ್ ಹತ್ಯೆ ಕೇಸ್.. ಈ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಇದೀಗ 7 ವರ್ಷಗಳ ಬಳಿಕ ಕೋರ್ಟ್ ತೀರ್ಪು ಪ್ರಕಟಿಸಿದೆ.. ಓರ್ವನಿಗೆ ಮರಣದಂಡನೆ ಮತ್ತು ಆರು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ..
ಅಷ್ಟಕ್ಕೂ ಏನಿದು ಪ್ರಕರಣ ಅನ್ನೋದನ್ನು ನೋಡೋದಾದರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 2018ರಲ್ಲಿ ಮರ್ಯಾದೆಗೇಡು ಹತ್ಯೆಯೊಂದು ನಡೆದಿತ್ತು.is.ಅಂತರ್ಜಾತಿ ವಿವಾಹವಾಗಿದ್ದ ಪ್ರಣಯ್ನನ್ನು ಪತ್ನಿ ಅಮೃತ ಪೋಷಕರು ಭೀಕರವಾಗಿ ಹತ್ಯೆ ಮಾಡಿದ್ದರು.
ಈ ಯೋಜನೆಯಡಿ ಕೇವಲ 50 ರೂ. ಕಟ್ಟಿದರೆ ನಿಮ್ಮ ಕೈಗೆ ಸಿಗುತ್ತೆ ಲಕ್ಷ, ಲಕ್ಷ! ಇದು ಯಾವ ಸ್ಕೀಮ್ ಗೊತ್ತಾ..?
ಅಮೃತಾಳನ್ನು ಮತ್ತು ಪ್ರಣಯ್ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮೇಲ್ಜಾತಿಯವರಾಗಿದ್ದ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಅಮೃತಾಳ ತಂದೆ ಮಾರುತಿ ರಾವ್ ಅಳಿಯನ ಹತ್ಯೆಗೆ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದರು.
ಆ ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದರು. 2018ರ ಸೆ. 14ರಂದು ಮಿದ್ಯಾಲಗೂಡದಲ್ಲಿ ತನ್ನ ತಾಯಿಯ ಜೊತೆಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ದುಷ್ಕರ್ಮಿಗಳು ಪ್ರಣಯ್ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಂದಿದ್ದರು. ಈ ಪ್ರಕರಣ ತೆಲಂಗಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಇದೀಗ ಏಳು ವರ್ಷಗಳ ನಂತರ ಶಿಕ್ಷೆ ಪ್ರಕಟಿಸಿರುವ ಕೋರ್ಟ್ ಪ್ರಕರಣದ ಎ2 ಆರೋಪಿ ಸುಭಾಷ್ ಕುಮಾರ್ ಶರ್ಮಾ ಗೆ ಕ್ರೂರ ಕೊಲೆಯಲ್ಲಿನ ಪಾತ್ರಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಉಳಿದ ಐದು ಆರೋಪಿಗಳಾದ ಅಜ್ಗರ್ ಅಲಿ , ಅಬ್ದುಲ್ ಭಾರಿ , ಕರೀಮ್ , ಶಿವ , ಮತ್ತು ನದೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನೂ ಪ್ರಕರಣದ ಎ1 ಆರೋಪಿಯಾಗಿದ್ದ ಅಮೃತಾ ತಂದೆ ಮಾರುತಿರಾವ್ , ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಅಂಧರೆ 2020 ರ ಮಾರ್ಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.