ಒಂದು ಕಡೆ ಗೆಲ್ತಿದ್ರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಟೆನ್ಶನ್ ಶುರುವಾಗಿದೆ.
IPL 2024: ಹ್ಯಾಟ್ರಿಕ್ ಸೋಲಿನ ಬಳಿಕ ಪಂಜಾಬ್ ವಿರುದ್ಧ ಗೆದ್ದು ಬೀಗಿದ CSK..
ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿ ಆದವು. ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಆದರೆ ಮೊದಲು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡಕ್ಕೆ ಆರಂಭದಿಂದಲೂ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಯಿತು. ಈ ಮೂಲಕ ಗುಜರಾತ್ ತಂಡವು 19.3 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಸಿಡಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 13.4 ಓವರ್ಗೆ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಇನ್ನು, 148 ರನ್ ಟಾರ್ಗೆಟ್ ಬೆನ್ನಟ್ಟಿದ ತಂಡ ಆರಂಭದಿಂದಲೇ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿತು. ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ವಿರಾಟ್ ಕೊಹ್ಲಿ ಸೇರಿ 5,5 ಓವರ್ಗೆ 92 ರನ್ ಸಿಡಿಸಿದರು. ಫಾಫ್ ಡುಪ್ಲೇಸಿಸ್ 23 ಎಸೆತದಲ್ಲಿ 3 ಸಿಕ್ಸ್ ಮತ್ತು 10 ಫೋರ್ ಮೂಲಕ 64 ರನ್ ಸಿಡಿಸಿದರು. ವಿರಾಟ್ ಕೊಹ್ಲಿ 27 ಎಸೆತದಲ್ಲಿ 4 ಸಿಕ್ಸ್ ಹಾಗೂ 2 ಬೌಂಡರಿ ಮೂಲಕ 42 ರನ್ ಗಳಿಸಿ ಮಿಂಚಿದರು. ವಿಲ್ ಜ್ಯಾಕ್ಸ್ 1 ರನ್, ರಜತ್ ಪಾಟಿದಾರ್ 2 ರನ್, ಗ್ಲೇನ್ ಮ್ಯಾಕ್ಸ್ವೆಲ್ 4 ರನ್, ಕ್ಯಾಮರೂನ್ ಗ್ರೀನ್ 1 ರನ್ ಗಳಿಸಿದರೆ ಕೊನೆಯಲ್ಲಿ ದಿನೇಶ್ ಕಾರ್ತಿಕ್ 21 ರನ್ ಹಾಗೂ ಸ್ವಪ್ನಿಲ್ ಸಿಂಗ್ 15 ರನ್ ಸಿಡಿಸಿದರು. ಒಂದು ಕಡೆ ಗೆಲ್ತಿದ್ರೂ ಆರ್ಸಿಬಿ ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಟೆನ್ಶನ್ ಮಾತ್ರ ಹೆಚ್ಚಾಗ್ತಿದೆ. ಯಾಕಂದ್ರೆ ಮೊದಲ ವಿಕೆಟ್ ಬಿದ್ರೆ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳು ಬಿಳುತ್ತಿವೆ. ಇದನ್ನು ನೋಡಿ ಅಭಿಮಾನಿಗಳು ಟೆನ್ಶನ್ ಆಗಿದ್ದಾರೆ.
ಆಡುದ್ರೆ ಚೆನ್ನಾಗಿ ಆಡ್ತಾರೆ, ಇಲ್ಲ ಅಂದ್ರೆ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿ ಔಟ್ ಆಗ್ತಾರೆ. ಈ ಥರ ಆದ್ರೆ ಮುಂದೆ ಇನ್ನೂ ಕಷ್ಟ. ಇನ್ಮುಂದೆಯಾದ್ರೂ ಚೂರು ನಿಧಾನಕ್ಕೆ ಆಡೋದನ್ನು ಕಲಿತುಕೊಳ್ಳಿ ಅಂತ ಅಭಿಮಾನಿಗಳು ಟಿಪ್ಸ್ ಕೊಡುತ್ತಿದ್ದಾರೆ. ಇನ್ನು, ಆರ್ಸಿಬಿ ಬೌಲರ್ಗಳಲ್ಲಿ ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯಕುಮಾರ್ ತಲಾ 2 ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ ಮತ್ತು ಕರಣ್ ಶರ್ಮಾ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು