ಬೆಂಗಳೂರು ತಂಡ ಸಿಎಸ್ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಖುಷಿಯನ್ನು ಅಭಿಮಾನಿಗಳು ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಸಂಭ್ರಮಿಸಿದರು. ಮಧ್ಯರಾತ್ರಿ 1:30 ವರೆಗೆ ಆರ್ಸಿಬಿ ಹೊರಡುವ ತನಕ ಫ್ಯಾನ್ಸ್ ಚಿನ್ನಸ್ವಾಮಿಯಲ್ಲಿ ಕಾದುಕುಳಿತಿದ್ದರು.
IPL 2024: ಪ್ಲೇ ಆಫ್ ಗೆ ಲಗ್ಗೆ ಇಟ್ಟ RCB…. ಮಗುವಿನಂತೆ ಮೈದಾನದಲ್ಲೇ ಕಣ್ಣೀರು ಹಾಕಿದ ಕಿಂಗ್ ಕೊಹ್ಲಿ!
ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತು ಪ್ಲೇಆಫ್ನಲ್ಲಿ ಸ್ಥಾನ ಕಾಯ್ದುಕೊಂಡಿರುವ ಘಟನೆ ಇದುವರೆಗೆ ನಡೆದಿಲ್ಲ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಇತಿಹಾಸವನ್ನು ಸೃಷ್ಟಿಸಿ ಪ್ಲೇ ಆಫ್ಗೆ ಪ್ರವೇಶ ಪಡೆಯಿತು. ಆರ್ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಅಭಿಮಾನಿಗಳು ಈ ವಿಜಯದ ಅರ್ಥವನ್ನು ಎತ್ತಿ ತೋರಿಸಿದರು. ಮಧ್ಯರಾತ್ರಿ ಆರ್ಸಿಬಿ ಫ್ಯಾನ್ಸ್ ಬೆಂಗಳೂರು ನಗರದ ಬೀದಿಗಿಳಿದರು. ಉತ್ಸಾಹದಿಂದ ಸಂಭ್ರಮಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)