ಚಿಕ್ಕಬಳ್ಳಾಪುರ:- ಗಂಡಸರ ದುಡ್ಡು ಕಿತ್ತು ಹೆಂಗಸರಿಗೆ ಕೊಡ್ತಿದ್ದಾರೆ ಎಂದು ಹೇಳುವ ಮೂಲಕ ಗ್ಯಾರಂಟಿ ಬಗ್ಗೆ ಅಶೋಕ್ ಟೀಕೆ! ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬರಗಾಲ ದಾರಿದ್ರ್ಯ ಬಂದಿದೆ ಅಂತ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಬಿಜೆಪಿ ಇದ್ರೆ ಮಳೆ ಬರುತ್ತೆ, ಕಾಂಗ್ರೆಸ್ ಬಂದ್ರೆ ಮಳೆ ಹೋಗುತ್ತೆ ಅಂತ ಅಶೋಕ್ ವ್ಯಂಗ್ಯವಾಡಿದ್ರು
ಹೆಣ್ಣು ಮಕ್ಕಳಿಗೆ ಕೊಡ್ತಿರೋ ದುಡ್ಡು ಯಾರದು? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮನೆ ದುಡ್ಡು ಅಲ್ಲ, ಬದಲಾಗಿ ಗಂಡನ ದುಡ್ಡು ಕಿತ್ತು ಹೆಂಡತಿಗೆ ಕೊಡ್ತಿದ್ದಾರೆ ಅಂತ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಶೋಕ್ ವ್ಯಂಗ್ಯವಾಡಿದ್ರು.
ಕಾಂಗ್ರೆಸ್ನ ಆಟ ಮುಗಿಸಿ, ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಅಶೋಕ್ ಮನವಿ ಮಾಡಿದ್ರು. ಭ್ರಷ್ಟ ಕಾಂಗ್ರೆಸ್ ಹಾಗೂ ದುರಂಹಕಾರಿ ಸಿದ್ದರಾಮಯ್ಯಗೆ ಬುದ್ದಿ ಕಲಿಸುವಂತೆ ಕರೆ ಕೊಟ್ಟರು.
ನರೇಂದ್ರ ಮೋದಿ 20ರಂದು ಬರ್ತಿದ್ದಾರೆ. ನರೇಂದ್ರ ಮೋದಿ ಸಿಂಹ, ಅವರು ದೇಶ ಕಾಯುವ ಕಾವಲುಗಾರ. ನರೇಂದ್ರ ಮೋದಿ ನೋಡಲು ನೀವೂ ಬನ್ನಿ ಅಂತ ಚಿಕ್ಕಬಳ್ಳಾಪುರ ಮತದಾರರಿಗೆ ಮನವಿ ಮಾಡಿದ್ರು.