ಹುಬ್ಬಳ್ಳಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದು ದೇಶ ಕಂಡ ಅಪರೂಪದ ನಾಯಕನಿಗೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಆಪ್ತರು, ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಆರ್ಥಿಕ ಸುಧಾರಣೆಗೆ ಹೆಸರಾಗಿದ್ದ ಮನಮೋಹನ್ ಸಿಂಗ್ ಸಂಬಂಧಿಕರು ಹುಬ್ಬಳ್ಳಿಯಲ್ಲೂ ವಾಸವಿದ್ದಾರೆ. ಮಾಜಿ ಪ್ರಧಾನಿಯ ನಿಧನದ ಸುದ್ದಿ ತಿಳಿದು ಅವರ ಮನೆಯಲ್ಲೂ ನೀರವ ಮೌನ ಆವರಿಸಿದೆ.
Pearl Farming: ರೈತರೇ ಗಮನಿಸಿ.. ಮುತ್ತು ಕೃಷಿಯಲ್ಲಿದೆ ಭರ್ಜರಿ ಲಾಭ..! ವರ್ಷಕ್ಕೆ 10 ಲಕ್ಷ ಗಳಿಸಬಹುದು
ಹುಬ್ಬಳ್ಳಿಯಲ್ಲಿ ಮನಮೋಹನ ಸಿಂಗ್ ಪತ್ನಿ ಅವರ ಸಂಬಂಧಿಕರು ವಾಸವಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನಮೋಹನ್ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬದವರು ವಾಸವಿದ್ದಾರೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬುವರ ಜೊತೆ ಹರ್ಪ್ರೀತ್ ಕೌರ್ ವಿವಾಹವಾಗಿದ್ದರು.
ದಾಬಾ ನಡೆಸುತ್ತಿರುವ ಕುಟುಂಬ
ಹರ್ನಾಮ್ ಸಿಂಗ್ ಕೊಹ್ಲಿ ಅವರು ಹುಬ್ಬಳ್ಳಿಯಲ್ಲಿ ಆಟೋಮೊಬೈಲ್ ಶಾಪ್ ಹೊಂದಿದ್ದಾರೆ. ಸದ್ಯ ಹರ್ಪ್ರೀತ್ ಕುಟುಂಬಸ್ಥರು ಹುಬ್ಬಳ್ಳಿಯ ಹೊರವಲಯದಲ್ಲಿ ದಾಬಾ ನಡೆಸುತ್ತಿದ್ದಾರೆ. ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ 14 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಕೌರ್ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ. ಮಾಜಿ ಪ್ರಧಾನಿಯ ಸುದ್ದಿ ತಿಳಿದು ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ