ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಔಟ್ ಕೊಟ್ಟ ಅಂಪೈರ್ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಸೊಂಟದ ಎತ್ತರಕ್ಕಿಂತ ಮೇಲಿದ್ದ ಕಾರಣ ಅದು ನೋ ಬಾಲ್ ಎಂದು ಕೆಲವರು ವಾದಿಸಿದರೆ, ಅವರು ಕ್ರೀಸ್ ಬಿಟ್ಟು ಮುಂದೆ ಬಂದಿದ್ದ ಕಾರಣ ಅದು ನೋ ಬಾಲ್ ಅಲ್ಲ, ಔಟ್ ಕೊಟ್ಟಿದ್ದು ನ್ಯಾಯವಾಗಿದೆ ಎಂದು ವಾದಿಸುತ್ತಿದ್ದಾರೆ.
ಆಕಸ್ಮಿಕವಾಗಿ ಕಾರು ಹರಿದು 1 ವರೆ ವರ್ಷದ ಪುಟ್ಟ ಕಂದಮ್ಮ ಸಾವು!
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಈಗ ಐಪಿಎಲ್ ಅಂಪೈರಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಧೋನಿ ಇಬ್ಬರಿಗೂ ಎರಡು ವಿಭಿನ್ನ ಅಂಪೈರಿಂಗ್ ನಿರ್ಣಯಗಳ ಬಗ್ಗೆ ಫೋಟೊ ಹಂಚಿಕೊಂಡಿರುವ ಅವರು, ಕಳಪೆ ಅಂಪೈರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, “ಕೊಹ್ಲಿ ಮತ್ತು ಧೋನಿ ಫೋಟೊ ಹಂಚಿಕೊಂಡಿರುವ ಅವರು, ಸಷ್ಟವಾದ ಆಡಲಾಗದ ಬೀಮರ್ ಎಸೆತದಲ್ಲಿ ಕೊಹ್ಲಿಯನ್ನು ಔಟ್ ಎಂದು ಘೋಷಿಸಲಾಗಿದೆ ಮತ್ತು ಧೋನಿಯ ಬ್ಯಾಟ್ ಅಡಿಯಲ್ಲಿ ಹಾದುಹೋದ ಚೆಂಡು ವೈಡ್ ಎಂದು ಘೋಷಿಸಿತು. ಕ್ಯಾಮೆರಾಗಳು, ರಿಪ್ಲೇಗಳು, ತಂತ್ರಜ್ಞಾನ ಇದ್ದರೂ ಇಂತಹ ತಪ್ಪುಗಳನ್ನು ಮಾಡಲಾಗುತ್ತಿದೆ. ಕಳಪೆ ಅಂಪೈರಿಂಗ್.” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಹ್ಲಿಯನ್ನು ಔಟ್ ಕೊಟ್ಟ ಅಂಪೈರ್ ನಿರ್ಣಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಔಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಔಟ್ ಎಂದು ಹೇಳಿದ್ದಾರೆ.