ಬೆಂಗಳೂರು: ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ (JDS) ಸ್ಪರ್ಧೆ ಮಾಡಲಿದೆ ಅಂತ ಸ್ಪಷ್ಟಪಡಿಸಿದರು. ಚುನಾವಣಾ ಉಸ್ತುವಾರಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ರು. ಕೆಲವು ಸೂಚನೆ ಕೊಡೋಕೆ ಕರೆದು ಚರ್ಚೆ ಮಾಡಿದ್ದೇನೆ. ಆ ಸಭೆಯಲ್ಲಿ ನಮ್ಮ ಪ್ರಮುಖರು ಅಭಿಪ್ರಾಯ ಹೇಳಿದ್ದಾರೆ. ನಮ್ಮ ಉದ್ದೇಶ ಇರೋದು ಕಾಂಗ್ರೆಸ್ ಅವರು ಜೆಡಿಎಸ್ ಮುಗಿಸ್ತೀವಿ ಅನ್ನೋ ಹೇಳಿಕೆ. 28 ಕ್ಷೇತ್ರ ಗೆಲ್ತೀವಿ ಅನ್ನೋ ಹೇಳಿಕೆಗಳ ವಿರುದ್ಧ ನಾವು ಗುರಿ ಮುಟ್ಟಬೇಕು. ನಮ್ಮ ಸಹಕಾರ ಇರೋ ರೀತಿ ಬಿಜೆಪಿಯಿಂದಲೂ ಸಹಕಾರ ಇರಬೇಕು. ಅದನ್ನ ಸರಿ ಮಾಡೋ ನಿಟ್ಟಿನಲ್ಲಿ ಕೆಲವು ಸೂಚನೆ ಬಿಜೆಪಿ ಅವರಿಗೆ ನೀಡಬೇಕು ಅಂತ ಕೆಲವರು ಹೇಳಿದ್ದಾರೆ. ಎರಡು ಪಕ್ಷದ ನಾಯಕರ ಸಭೆಗಳು, ಚುನಾವಣೆ ಪ್ರಚಾರದಲ್ಲಿ ಎರಡು ಪಕ್ಷಗಳು ಹೇಗೆ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಹೇಗೆ ಕಾರ್ಯಕರ್ತರು ಕೆಲಸ ಮಾಡಬೇಕು ಅಂತ ಸಲಹೆ ಕೊಡಬೇಕು ಅಂತ ಹೇಳಿದ್ದಾರೆ.
ಬಿಜೆಪಿ- ಜೆಡಿಎಸ್ ಲೋಕಸಭಾ ಮೈತ್ರಿಯಲ್ಲಿ ಬಿರುಕು: 3 ಸೀಟ್ ಬಿಟ್ಟುಕೊಡದಿದ್ರೆ ಮೈತ್ರಿ ಬೇಡವೆಂದ ದಳಪತಿ…
ಉತ್ತರ ಕರ್ನಾಟಕದ (Uttara Karnataka) ಕೆಲವು ಕ್ಷೇತ್ರಗಳ ವಿಜಯಪುರ, ಕಲಬುರಗಿಯಲ್ಲಿ ಬಿಜೆಪಿಗಿಂತ ಜೆಡಿಎಸ್ ಪ್ರಬಲವಾಗಿದೆ. ಇಂತಹ ಕ್ಷೇತ್ರದಲ್ಲಿ ನಮ್ಮ ನಾಯಕರನ್ನ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಆಗಬೇಕು ಅಂತ ಪ್ರಮುಖರು ಹೇಳಿದ್ದಾರೆ. ನಮಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು, ಕಡೆಗಣಿಸಬಾರದು. ಅದರಿಂದ ಆಗೋ ಎಫೆಕ್ಟ್ ಅನ್ನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸೌಹಾರ್ದಯುತವಾಗಿ ಒಟ್ಟಾಗಿ ಕೆಲಸ ಮಾಡೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ ಎಂದರು.