ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದೆ ಪ್ರಕರಣ ಸಂಬಂಧ ಕಳೆದ ಒಂದು ತಿಂಗಳಲ್ಲಿ 563 ಜನರನ್ನು ಬಂಧಿಸಲಾಗಿದ್ದು, ಒಟ್ಟು 182 ಪ್ರಕರಣಗಳು ದಾಖಲಾಗಿದೆ.
Lokasabha Election: ಇವಿಎಂ ಹಾಗೂ ಮತಗಟ್ಟೆ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗಾಹುತಿ!
ಅತಿ ಹೆಚ್ಚು (48) ಜೂಜಾಟಕ್ಕೆ ಸಂಬಂಧಿಸಿದ್ದಾಗಿವೆ. ನಂತರದ ಸ್ಥಾನದಲ್ಲಿ ಮಾದಕ ದ್ರವ್ಯಗಳ (NDPS) ನಿಷೇಧ ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳು (41), ಮತ್ತು ಕ್ರಿಕೆಟ್ ಬೆಟ್ಟಿಂಗ್ (25) ಪ್ರಕರಣಗಳು ಸೇರಿವೆ ಎಂದು ಹೇಳಲಾಗಿದೆ.
ಎನ್ಡಿಪಿಎಸ್ ಪ್ರಕರಣಗಳಲ್ಲಿ ಎಂಟು ವಿದೇಶಿ ಪ್ರಜೆಗಳು ಸೇರಿದಂತೆ 51 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು 131.325 ಕೆಜಿ ಗಾಂಜಾ, 1.245 ಕೆಜಿ ಕೊಕೇನ್, 6.275 ಕೆಜಿ ಎಂಡಿಎಂಎ, 0.066 ಗ್ರಾಂ ಚರಸ್ ಮತ್ತು 109 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.