ಮೊಟ್ಟೆ ಬೇಯಿಸುವಾಗ ಅನೇಕ ಮಂದಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊಟ್ಟೆ ಬೇಯ್ಯುವಾಗ ಎಷ್ಟೋ ಬಾರಿ ಮೊಟ್ಟೆ ಮೇಲಿನ ಸಿಪ್ಪೆ ಒಡೆದು ಹೋಗುತ್ತದೆ. ಇದರ ಪರಿಣಾಮ ಮೊಟ್ಟೆಯ ಬಿಳಿಭಾಗವು ಬಿರುಕುಗೊಂಡು ಮೊಟ್ಟೆಯೊಳಗಿನ ಲೋಳೆ ಹೊರಗೆ ಬಂದು, ನೀರಿನೊಂದಿಗೆ ಮಿಶ್ರಣವಾಗಿ ಬಿಡುತ್ತದೆ. ಇದರಿಂದ ಕೊನೆಗೆ ಮೊಟ್ಟೆ ತಿನ್ನಲು ಆಗದೇ ಬಿಸಾಡಬೇಕಾಗುತ್ತದೆ.
Joshi: ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು – ಜೋಶಿ..!
ಸಾಮಾನ್ಯವಾಗಿ ಬೇಯಿಸಿದ ಮೊಟ್ಟೆಗಳು ತಿನ್ನಲು ತುಂಬಾ ಟೇಸ್ಟಿಯಾಗಿರುತ್ತದೆ ಮತ್ತು ಇದು ಆರೋಗ್ಯಕರ ಆಹಾರವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಮೊಟ್ಟೆ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಈ ಮೊಟ್ಟೆಗಳನ್ನು ಬೇಯಿಸುವಾಗ ಆಗಾಗ ಸಮಸ್ಯೆಗಳು ಉಂಟಾಗುತ್ತವೆ. ಒಂದು ವೇಳೆ ಮೊಟ್ಟೆ ಸರಿಯಾಗಿ ಬೆಂದಿಲ್ಲದಿದ್ದರೆ, ಸಿಪ್ಪೆ ತೆಗೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಎಷ್ಟೋ ಬಾರಿ ಮೊಟ್ಟೆ ಒಡೆದು ಹೋಗುತ್ತದೆ. ಹಾಗಾದ್ರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದರ ಕುರಿತು ಕೆಲ ಟಿಪ್ಸ್ ಈ ಕೆಳಗಿನಂತಿದೆ
ಸಾಮಾನ್ಯ ತಾಪಮಾನ ಅತ್ಯಗತ್ಯ: ಅನೇಕ ಮಂದಿ ಫ್ರಿಜ್ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿರುತ್ತಾರೆ. ತಮಗೆ ಅಗತ್ಯವಿದ್ದಾಗ ಹೊರ ತೆಗೆದು ನಂತರ ನೇರವಾಗಿ ಬೇಯಿಸುತ್ತಾರೆ. ಆದರೆ ಹೀಗೆ ಮಾಡುವುದು ದೊಡ್ಡ ತಪ್ಪು. ಅಡುಗೆ ಮಾಡುವ ಮುನ್ನ ಮೊಟ್ಟೆಗಳನ್ನು ರೆಫ್ರಿಜರೇಟರ್ನಿಂದ ಹೊರತೆಗೆಯಬೇಕು. ಇದರಿಂದ ಅದು ಸಾಮಾನ್ಯ ಕೋಣೆಯ ಉಷ್ಣಾಂಶಕ್ಕೆ ಬರಬಹುದು. ಇಲ್ಲದಿದ್ದರೆ, ಫ್ರಿಜ್ನಿಂದ ನೇರವಾಗಿ ಕುದಿಯುವ ನೀರಿಗೆ ತಣ್ಣನೆಯ ಮೊಟ್ಟೆಗಳನ್ನು ಹಾಕಿದರೆ, ಅವು ಒಡೆಯುವ ಸಾಧ್ಯತೆ ಹೆಚ್ಚು.. ಒಂದೇ ಬಾರಿಗೆ ಹೆಚ್ಚು ಮೊಟ್ಟೆಗಳನ್ನು ತೆಗೆದುಕೊಳ್ಳಬೇಡಿ: ನೀರು ಕುದಿಯುವಾಗ ಒಂದೇ ಬಾರಿಗೆ ಹೆಚ್ಚು ಮೊಟ್ಟೆಗಳನ್ನು ಹಾಕಬೇಡಿ. ನೀರು ಕುದಿಯುತ್ತಿದ್ದರೆ ಒಂದು ಮೊಟ್ಟೆ ಇನ್ನೊಂದು ಮೊಟ್ಟೆಗೆ ಹೊಡೆಯುತ್ತದೆ. ಅದರಲ್ಲೂ ನೀವು ಚಿಕ್ಕ ಪಾತ್ರೆಗಳಲ್ಲಿ ಬೇಯಿಸುತ್ತಿದ್ದರೆ, ಅದರಲ್ಲಿ 3-4 ಮೊಟ್ಟೆಗಳಿಗಿಂತ ಹೆಚ್ಚು ಮೊಟ್ಟೆಯನ್ನು ಬೇಯಿಸಿಬೇಡಿ. ಒಂದು ವೇಳೆ ಹೆಚ್ಚು ಮೊಟ್ಟೆಗಳನ್ನು ಬೇಯಿಸಬೇಕು ಅಂದುಕೊಂಡಿದ್ದರೆ, ದೊಡ್ಡ ಪಾತ್ರೆಗಳನ್ನು ಮಾತ್ರ ಬಳಸಿ.
ವಿನೆಗರ್: ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕಾಗಿ ನೀವು ಪಾತ್ರೆಯಲ್ಲಿ ನೀರನ್ನು ತುಂಬಿಸಬೇಕು. ಅದರಲ್ಲಿ ನಿಮಗೆ ಅಗತ್ಯವಿರುವಷ್ಟು ಮೊಟ್ಟೆಗಳನ್ನು ಹಾಕಿ, ಈಗ ಈ ನೀರಿಗೆ ಒಂದು ಚಮಚ ವಿನೆಗರ್ ಬೆರೆಸಿ. ನಂತರ ಪಾತ್ರೆಯನ್ನು ಸ್ಟವ್ ಮೇಲಿಟ್ಟು ಮೊಟ್ಟೆಗಳನ್ನು ಬೇಯ್ಯಲು ಬಿಡಿ. ಮೊಟ್ಟೆಗಳನ್ನು ಕುದಿಸಲು ಸರಿಯಾದ ಮಾರ್ಗವೆಂದರೆ ಪಾತ್ರೆಯ ಅರ್ಧದಷ್ಟು ನೀರನ್ನು ತುಂಬಿಸುವುದು. ನಂತರ ಅದನ್ನು ಸ್ಟವ್ ಮೇಲೆ ಇಡಬೇಕು. ಈಗ ಇದಕ್ಕೆ ಉಪ್ಪು ಅಥವಾ ವಿನೆಗರ್ ಬೆರೆಸಿ, ಕುದಿಯಲು ಬಿಡಿ. ಸ್ವಲ್ಪ ನೀರು ಕುದಿಯಲು ಆರಂಭಿಸುತ್ತಿದ್ದಂತೆಯೇ ಮೊಟ್ಟೆಗಳನ್ನು ನಿಧಾನವಾಗಿ ಸೇರಿಸಿ. ನಂತರ ಕಂಟೇನರ್ ಮೇಲೆ ಮುಚ್ಚಳವನ್ನು ಮುಚ್ಚಿ. ಇದನ್ನು 10-12 ನಿಮಿಷಗಳ ಕಾಲ ಬಿಡಿ. ಆದರೆ ಅಡುಗೆ ಮಾಡುವಾಗ ಬೆಂಕಿಯನ್ನು ಮಧ್ಯಮ ಉರಿಯಲ್ಲಿ ಇಡಬೇಕು.. ಬಳಿಕ ಮೊಟ್ಟೆ ಸಿಪ್ಪೆ ಹದವಾಗಿ ಬರಲಿದೆ