ಮಳೆಗಾಲದಲ್ಲಿ ಹೆಚ್ಚಾಗಿ ನೆನೆಯುವ ಅಂಗ ಎಂದರೆ ಕಾಲು. ಮಳೆಯಲ್ಲಿ ಓಡಾಡುವಾಗ ಕಾಲು ನೆನೆಯುತ್ತದೆ. ಪಾದಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆರಳು ಸಂಧಿಗಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಾಲಿನ ಬೆರಳಲ್ಲಿ ಕಾಣಿಸಿಕೊಳ್ಳುವ ಟೋನಲ್ ಫಂಗಲ್ಇನ್ಫೆಕ್ಷನ್ ಬೆರಳೇ ಎದ್ದು ಬಂದ ಹಾಗೆ, ಕೀವು ತುಂಬಿಕೊAಡು ಹಳದಿ ಬೆರಳಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ವೈಜ್ಞಾನಿಕವಾಗಿ ಒನಿಕೊಮಿಕೊಸಿಸ್ ಎನ್ನುತ್ತಾರೆ.
ಒನಿಕೊಮಿಕೊಸಿಸ್ಎಂದರೇನು
ಕಾಲಿನ ಹೆಬ್ಬರಳಲ್ಲಿ ಹಳದಿ ಅಥವಾ ಬ್ರೌನ್ ಬಣ್ಣಕ್ಕೆ ತಿರುಗಿ ಉಗುರು ದಪ್ಪವಾಗುತ್ತದೆ. ಕೆಲವೊಮ್ಮೆ ಉಗುರು ಮುರಿದು ಹೋಗಲೂಬಹುದು. ಇದಕ್ಕೆ ಕಾರಣ ಕಾಲು ನೀರಿನಲ್ಲಿ ಅತಿಯಾಗಿ ಇರುವುದರಿಂದಲೂ, ಮಣ್ಣ ಅಥವಾ ಕೊಳೆಯ ಪ್ರಮಾಣ ಉಗುರಿನಲ್ಲಿ, ಸಂದುಗಳಲ್ಲಿ ಕೂರುವುದರಿಂದಲೂ ಹೀಗೆ ಆಗುತ್ತವೆ. ಕೆಲವೊಮ್ಮೆ ಇದು ಕಿರಿಕಿರಿ ಎನಿಸಿ ನಡೆಯುವುದಕ್ಕೂ ತೊಂದರೆಯಾಗುತ್ತದೆ. ಇದಕ್ಕೆ ಮೆಡಿಸಿನ್ಗಳಿವೆ. ಆದರೆ ಅದರಿಂದ ಹಲವು ರೀತಿಯಲ್ಲಿ ಸೈಡ್ ಎಫೆಕ್ಟ್ ಪ್ರಮಾಣ ಹೆಚ್ಚು. ಹೊಟ್ಟೆ ನೋವು, ಜಾಂಡೀಸ್, ಚರ್ಮ ರೋಗದ ಸಮಸ್ಯೆ, ಬೆರಳಿನಲ್ಲಿ ಊತ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
![Demo](https://ainlivenews.com/wp-content/uploads/2023/12/spoorthi-1.jpg)
ಮನೆಮದ್ದು
ಕಾಲು ಬೆರಳಿನಲ್ಲಿ ಕಾಣಿಸಿಕೊಳ್ಳುವ ಈ ಟೋನಲ್ ಫಂಗಲ್ ಇನ್ಫೆಕ್ಷನ್ಗೆ ಮೆಡಿಸಿನ್ ಇದ್ದರೂ ಅದೊಂದು ಡ್ರಗ್ಸ್ ಆಗಿರುವುದರಿಂದ ಸೈಡ್ ಎಫೆಕ್ಟ್ಗಳು ಇವೆ. ಅದೇ ರೀತಿ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿದರೆ ಇನ್ಫೆಕ್ಷನ್ ಕಡಿಮೆ ಮಾಡಬಹುದಾಗಿದೆ. ಮನೆಮದ್ದಿಗಿರುವ ಟಿಪ್ಸ್ಗಳು ಇಲ್ಲಿವೆ.
ವಿಕ್ಸ್ ವೇಪೋರಬ್ ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡುತ್ತದೆ. ಅಷ್ಟೇ ಅಲ್ಲದೆ ರಬ್ ಯುಕಲಿಪ್ಟಸ್ ಮತ್ತು ಕರ್ಪೂರವನ್ನು ಒಳಗೊಂಡಿರುತ್ತದೆ. ಇದು ಶೀತ ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೊತೆಗೆ ಕಾಲಿನ ಹೆಬ್ಬರಳಿನಲ್ಲಾದ ಫಂಗಸ್ ಇನ್ಫೆಕ್ಷನ್ ಅನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದನ್ನು ದಿನಕ್ಕೆ ಎರಡು ಭಾರಿ ಫಂಗಸ್ ಆದ ಜಾಗದಲ್ಲಿ ಹಚ್ಚಿದರೆ ಬಹು ಬೇಗ ಕಡಿಮೆ ಆಗುತ್ತದೆ.
ಮೆಲಲೂಕಾ ಎಂಬುದು ಫಂಗಸ್ ಇನ್ಫೆಕ್ಷನ್ಗೆ ಇರುವ ಉತ್ತಮ ಔಷಧ ಹಾಗೂ ಇದರಲ್ಲಿ ನಂಜು ನಿರೋಧಕ ಮತ್ತು ಆಂಟಿಫAಗಲ್ ಗುಣಲಕ್ಷಣವಿದೆ. ಇದನ್ನು ಟೀ ಟ್ರೀ ಎಣ್ಣೆಎಂದೂ ಕರೆಯುತ್ತಾರೆ. ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆAಟರಿ ಆಯಂಡ್ ಇಂಟಿಗ್ರಿಟಿವ್ ಹೆಲ್ತ್ ಅವರ ಅಧ್ಯಯನದ ಪ್ರಕಾರ ಟೋನಲ್ ಇನ್ಫೆಕ್ಷನ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ದಿನದಲ್ಲಿ ಎರಡು ಭಾರಿ ಹಚ್ಚಿದರೆ ಬಹುಬೇಗ ಫಲಿತಾಂಶ ಪಡೆಯಬಹುದು.
ಸನ್ಫ್ಲವರ್ ಕುಟುಂಬಕ್ಕೆ ಸೇರಿದ ಅಜರ್ಟೈನ್ ಎಕ್ಸಟ್ರಾಕ್ಟ್ ಫಂಗಲ್ ಇನ್ಫೆಕ್ಷನ್ಗೆ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ. ಫಂಗಲ್ ಇನ್ಫೆಕ್ಷನ್ ಆದ ಜಾಗದಲ್ಲಿ ಇದನ್ನು ಹಾಕಿದರೆ ಸಿಕ್ಲೋಪಿರಾಕ್ಸ್ ರೀತಿ ಕೆಲಸ ಮಾಡುತ್ತದೆ. ಪ್ರತಿ ಮೂರು ದಿನಗಳಿಗೊಮ್ಮೆ ಆದ ಗಾಯಕ್ಕೆ ಅಜರ್ಟೈನ್ ಹಚ್ಚಬೇಕು. ಈ ರೀತಿ ಕೆಲ ತಿಂಗಳ ಕಾಲ ಟ್ರೀಟ್ಮೆಂಟ್ ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು.
ಆಲಿವ್ ಎಲೆಗಳಲ್ಲಿಕಂಡುಬರುವ ಅತ್ಯಮೂಲ್ಯ ಘಟಕಗಳಲ್ಲಿ ಒಂದಾದ ಒಲ್ಯುರೋಪಪೈನ್, ಆಂಟಿಮೈಕ್ರೊಬಿಯಲ್ ಮತ್ತು ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಬಹು ಮುಖ್ಯವಾಗಿ, ಕಾಲಿನ ಉಗುರು ಶಿಲೀಂಧ್ರಕ್ಕೆ ಸಹಾಯ ಮಾಡುವ ಆಂಟಿಫAಗಲ್ ಗುಣಲಕ್ಷಣಗಳನ್ನೂ ನೀಡುತ್ತದೆ. ಇದನ್ನು ಆಹಾರ ರೂಪದಲ್ಲಿದಿನದಲ್ಲಿ ಎರಡು ಭಾರಿ ಅಥವಾ ಡೈರೆಕ್ಟ್ ಆಗಿ ಫಂಗಸ್ ಆದ ಬೆರಳಿಗೆ ಹಚ್ಚಬೇಕು. ಇದನ್ನು ಉಪಪಯೋಗಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ನೀರುಕುಡಿಯಬೇಕು.
ಸನ್ಫ್ಲವರ್ ಎಣ್ಣೆಓಝೋನ್ ಯೀಸ್ಟ್, ಫಂಗಸ್ ಮತ್ತು ಬ್ಯಾಕ್ಟೀರಿಯಾದಂತಹಸಣ್ಣ ಜೀವಿಗಳ ಮೇಲೆ ಅದರ ಬಲವಾದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಕೆಟೊಕೊನಜೋಲ್ ನಂತಹ ಔಷಧಿಗಳಿಗಿಂತ ಓಝೋನೇಟೆಡ್ ಎಣ್ಣೆಯು ಕಾಲ್ಬೆರಳ ಉಗುರು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇದನ್ನು ದಿನದಲ್ಲಿ ಎರಡು ಬಾರಿ ಹಚ್ಚಿದರೆ ಟೋನಲ್ ಇನ್ಫೆಕ್ಷನ್ ಕಡಿಮೆಯಾಗುತ್ತದೆ.
ಅಡುಗೆ ಮನೆಯಲ್ಲಿರುವ ವಿನೆಗರ್ ಸಹ ಹಲವು ವಿಷಯಕ್ಕೆ ಮನೆಮದ್ದಾಗಿದೆ. ವಿನೆಗರ್ ಅನ್ನು ಬಳಸುವುದರಿಂದ ಚರ್ಮದ ಬಹುತೇಕ ಕಾಯಿಲೆಗಳು ಗುಣವಾಗುತ್ತವೆ. ಅದರಲ್ಲೂ ಕಾಲಿನಲ್ಲಾದ ಫಂಗಲ್ ಇನ್ಫೆಕ್ಷನ್ ಭಾಗವನ್ನು ದಿನಕ್ಕೆ 30 ನಿಮಿಷಗಳ ಕಾಲ ವಿನೆಗರ್ನಲ್ಲಿ ನೆನೆಸಬೇಕು. ಹೀಗೆ ಮಾಡುವ ಮೊದಲ ಬೆಚ್ಚಗಿನ ನೀರಿನಲ್ಲಿ ಎರಡು ಭಾಗಗಳೊಂದಿಗೆ ವಿನೆಗರ್ ಅನ್ನು ಮಿಶ್ರಣ ಮಾಡಿಕೊಳ್ಳಬೇಕು.
ಮೌತ್ ಫ್ಲಶ್ಗೆ ಬಳಸುವ ಲಿಸ್ಟರಿನ್ ಅನ್ನು ಹಲವು ಗಾಯಗಳಿಗೆ ಉಪಯೋಗಿಸಲಾಗುತ್ತದೆ. ಇದು ತಣ್ಣಗೆ ಂಆಡುವ ಶಕ್ತಿ ಹೊಂದಿದೆ. ಏಕೆಂದರೆ ಇದರಲ್ಲಿ ಮಿಂಥಾಲ್, ಥೈಮಾಲ್, ಯುಕಲಿಪ್ಟಸ್ ಅಂಶಗಳನ್ನು ಬಳಸಲಾಗಿದೆ. ಇವು ಆಂಟಿಫAಗಲ್ ಜೊತೆ ಹೋರಾಡುವ ಗುಣಗಳನ್ನು ಹೊಂದಿದೆ. ಫಂಗಸ್ ಆದ ಜಾಗವನ್ನು ದಿನಕ್ಕೆ 30 ನಿಮಿಷಗಳ ಕಾಲ ಲಿಸ್ಟರಿನ್ ನಲ್ಲಿ ನೆನೆಸಿಡಬೇಕು.
![](https://ainlivenews.com/wp-content/uploads/2024/01/Ad-Banner-copy-scaled.jpg)