ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.
ಚೆನ್ನೈ-ಆರ್ಸಿಬಿ ಪಂದ್ಯಕ್ಕೆ ಮಳೆ ಕಾಟ.. ಹವಾಮಾನ ಇಲಾಖೆ ಕೊಟ್ಟ ಎಚ್ಚರಿ ಏನು ಗೊತ್ತಾ..!?
ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕು. ಬಾಯಾರಿದಾಗಲೆಲ್ಲ ದೇಹಕ್ಕೆ ನೀರು ಕೊಡಲೇಬೇಖು. ಬೇಸಿಗೆಯ ಧಗೆ ಬಾಯಾರುವುದೂ ಕೂಡಾ ಹೆಚ್ಚು. ಇಂಥ ಸಂದರ್ಭದಲ್ಲಿ ಸಕ್ಕರೆ ಹೆಚ್ಚಿರುವ ಜ್ಯೂಸ್ಗಳ ಮೊರೆ ಹೋಗುವ ಬದಲು ಹೆಚ್ಚಾಗಿ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ದಿನಕ್ಕೆ ಕಡಿಮೆಯೆಂದರೂ ಎಂಟರಿಂದ ಹತ್ತು ಗ್ಲಾಸ್ ನೀರನ್ನು ನಾವು ಸೇವಸಲೇಬೇಕು
ಬೇಸಿಗೆಯಲ್ಲಿ ಹಣ್ಣು ತಂದು ಹಣ್ಣಿಗೆ ಒಂದಷ್ಟು ಸಕ್ಕರೆ ಸುರಿದು ಜ್ಯೂಸ್ ಮಾಡಿ ಕುಡಿಯುವ ಬದಲು ಹಣ್ಣನ್ನು ಹಾಗೆಯೇ ಸೇವಿಸಿ. ಅಥವಾ ಹಣ್ಣಿನ ರಸ ಹಿಂಡಿಯೂ ಸೇವಿಸಬಹುದು. ಆದರೆ, ಈ ಆಯ್ಕೆಯನ್ನು ಮಾಡುವಾಗ ರಸಭರಿತ, ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ, ಬೇಸಿಗೆ ಬಂದ ಕೂಡಲೇ ಮಾರುಕಟ್ಟೆಗೆ ಬರುವ ಕಲ್ಲಂಗಡಿ, ಖರ್ಬೂಜ, ಲಿಚಿ, ಮಾವು, ಹಲಸು, ನಿಂಬೆ ಮತ್ತಿತರ ಹಣ್ಣುಗಳು. ಜೊತೆಗೆ ಸೌತೆಕಾಯಿಯಂತಹ ತರಕಾರಿಗಳು. ಇವುಗಳಲ್ಲಿ ಹೆಚ್ಚು ನೀರಿನಂಶ ಇದ್ದು, ಇವು ದೇಹವನ್ನು ತಂಪಾಗಿರಿಸುತ್ತವೆ. ಜೊತೆಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ
ದೇಹವನ್ನು ತಂಪಾಗಿರಿಸಲು, ಕೆಲವು ಮೂಲಿಕೆಗಳೂ ಸಹಾಯ ಮಾಡುತ್ತವೆ. ಉದಾಹರಣೆಗೆ ಪುದಿನ, ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಬಡೇಸೋಂಪು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳಲ್ಲಿ ತಂಪುಕಾರಕ ಗುಣಗಳಿವೆ. ಇವುಗಳನ್ನು ಆಹಾರಗಳನ್ನು ಬಳಸಿ. ಚಹಾ ಮಾಡಿ ಕುಡಿಯಿರಿ. ಮಜ್ಜಿಗೆ ಅಥವಾ ಇತರ ತಂಪು ಪೇಯಗಳಿಗೆ ಹಾಕಿ.
ಮಸಾಲೆಯುಕ್ತ ಆಹಾರಗಳು ದೇಹವನ್ನು ಬಿಸಿಯಾಗಿಸುತ್ತವೆ. ಆದರೂ ನಿಮಗೆ ಇಂತಹ ಆಹಾರಗಳು ಬೇಕೆನಿಸಿದರೆ, ಕೊಂಚ ಕಡಿಮೆ ಮಸಾಲೆಯ ಆಹಾರಗಳನ್ನು ಬಳಸಿ. ಆದರೆ, ಖಾರವಾದ ತಿನಿಸುಗಳು ಅಥವಾ ಅತಿಯಾದ ಮಸಾಲೆ ಹಾಕಿದ ಊಟ ಬೇಸಿಗೆಯಲ್ಲಿ ಒಳ್ಳೆಯದಲ್ಲ
ಎಲೆಕ್ಟ್ರೋಲೈಟ್ಗಳಾದ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ, ಬಾಳೆಹಣ್ಣು, ಎಳನೀರು, ಸೊಪ್ಪು, ಮೊಸರು, ಮಜ್ಜಿಗೆ ಮತ್ತಿತರ ಆಹಾರಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಶಕ್ತಿ ಸಾಮರ್ಥ್ಯವೂ ಹೆಚ್ಚುತ್ತದೆ
ಎಲೆಕ್ಟ್ರೋಲೈಟ್ಗಳಾದ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ, ಬಾಳೆಹಣ್ಣು, ಎಳನೀರು, ಸೊಪ್ಪು, ಮೊಸರು, ಮಜ್ಜಿಗೆ ಮತ್ತಿತರ ಆಹಾರಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಶಕ್ತಿ ಸಾಮರ್ಥ್ಯವೂ ಹೆಚ್ಚುತ್ತದೆ
ಬೇಸಿಗೆಯಲ್ಲಿ ಕೆಫೀನ್ಯುಕ್ತ ಪೇಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಆಲ್ಕೋಹಾಲ್ ಬಿಟ್ಟರೆ ಒಳ್ಳೆಯದು. ನೀರು, ಹರ್ಬಲ್ ಚಹಾಗಳು, ಕಷಾಯ, ಹಣ್ಣಿನ ಪಾನಕಗಳು ಇತ್ಯಾದಿಗಳನ್ನು ಸೇವಿಸಿ. ರಾಗಿ ಅಂಬಲಿ, ಬಾರ್ಲಿ ನೀರು, ಬಾದಾಮಿ ಹಾಲು, ಮಜ್ಜಿಗೆ ನೀರು ಇತ್ಯಾದಿಗಳು ದೇಹವನ್ನು ತಂಪು ಮಾಡುತ್ತವೆ
![](https://ainlivenews.com/wp-content/uploads/2024/01/Ad-Banner-copy-scaled.jpg)