ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಪಡೆ 474 ರನ್ಗಳ ಬೃಹತ್ ಮೊತ್ತ ಕಲೆಹಾಕಿದ ತಂಡ ಇದೀಗ 11 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಭಾರತ ಈಗ ಸಂಕಷ್ಟಕ್ಕೆ ಸಿಲುಕಿದೆ.
ಮೂರನೇ ಟೆಸ್ಟ್ ಕ್ರಿಕೆಟಿನ ಎರಡನೇ ದಿನ ಆಸ್ಟ್ರೇಲಿಯಾವನ್ನು 474 ರನ್ಗಳಿಗೆ ನಿಯಂತ್ರಿಸಿದ ಭಾರತ ಈಗ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ತನ್ನ ಸರದಿ ಆರಂಭಿಸಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 8 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟಾದರೆ 51 ರನ್ ಗಳಿಸಿದ್ದಾಗ ರಾಹುಲ್ ಔಟಾದರು. ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟಿಗೆ 102 ರನ್ ಜೊತೆಯಾಟವಾಡಿದರು.
Pearl Farming: ರೈತರೇ ಗಮನಿಸಿ.. ಮುತ್ತು ಕೃಷಿಯಲ್ಲಿದೆ ಭರ್ಜರಿ ಲಾಭ..! ವರ್ಷಕ್ಕೆ 10 ಲಕ್ಷ ಗಳಿಸಬಹುದು
ತಂಡದ ಮೊತ್ತ 153 ಆಗಿದ್ದಾಗ ಜೈಸ್ವಾಲ್ ರನೌಟ್ ಆದರು. ಕೊಹ್ಲಿ ಮತ್ತು ಜೈಸ್ವಾಲ್ ಮಧ್ಯೆ ಸಂವಹನ ಕೊರತೆಯಿಂದ 82 ರನ್ ಗಳಿಸಿದ್ದ ಜೈಸ್ವಾಲ್ ವಿಕೆಟ್ ಒಪ್ಪಿಸಬೇಕಾಯಿತು. ಜೈಸ್ವಾಲ್ ಔಟಾದ ಬೆನ್ನಲ್ಲೇ 36 ರನ್ ಗಳಿಸಿದ್ದ ಕೊಹ್ಲಿ ಕ್ಯಾಚ್ ನೀಡಿ ಹೊರನಡೆದರು. ನಂತರ ಬಂದ ಆಕಾಶ್ ದೀಪ್ ಶೂನ್ಯ ಸುತ್ತಿದರು.
ಸದ್ಯ 6 ರನ್ ಹೊಡೆದಿರುವ ರಿಷಭ್ ಪಂತ್ ಮತ್ತು 4 ರನ್ ಹೊಡೆದಿರುವ ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದಾರೆ. ಮೊದಲ ದಿನ 6 ವಿಕೆಟ್ ನಷ್ಟಕ್ಕೆ 311 ರನ್ಗಳಿಸಿದ್ದ ಆಸ್ಟ್ರೇಲಿಯಾ ಇಂದು 163 ಸೇರಿಸಿ 474 ರನ್ಗಳಿಗೆ ಆಲೌಟ್ ಆಯ್ತು. ಸ್ಟೀವ್ ಸ್ಮಿತ್ 140 ರನ್ಗಳಿಸಿ ಔಟಾದರೆ ನಾಯಕ ಪ್ಯಾಟ್ ಕಮ್ಮಿನ್ಸ್ 49 ರನ್ ಹೊಡೆದು ಔಟಾದರು. ಇತರೇ ರೂಪದಲ್ಲಿ ಭಾರತ 27 ರನ್ (ಲೆಗ್ ಬೈ 11, ನೋಬಾಲ್ 6, ವೈಡ್ 10) ಕೊಟ್ಟಿದೆ.