ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನಿದ್ರೆ ಮಾಡುವುದು ತುಂಬಾ ಮುಖ್ಯ ಆಗುತ್ತದೆ. ರಾತ್ರಿ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಆರೋಗ್ಯವನ್ನು ಚೆನ್ನಾಗಿ ಇರಿಸಲು ಸಹಾಯ ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡದೆ ಹೋದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಳ್ಳೆಯ ನಿದ್ದೆ ನಿಮಗೆ ದಿನವಿಡೀ ತುಂಬಾ ಉಲ್ಲಾಸಮಯ ಮನಸ್ಸು ನೀಡುತ್ತದೆ. ಆದರೆ ಇಲ್ಲೋರ್ವ ರೈತ ನಿದ್ದೆ ಮಾಡಿಲ್ಲ ಅಂದ್ರೆ ನೀವು ನಂಬ್ತೀರಾ?
ಹೌದು ಇಲ್ಲೋರ್ವ ಮನುಷ್ಯ ಬರೋಬ್ಬರಿ 63 ವರ್ಷಗಳಿಂದ ವರ್ಷಗಳಿಂದ ನಿದ್ದೆ ಮಾಡಿಲ್ಲ. ಈತ ಪ್ರತಿದಿನ ನಿದ್ದೆ ಮಾಡದೆ ಕೆಲಸ ಮಾಡುತ್ತಿದ್ದಾನೆ.. ಅಚ್ಚರಿ ವಿಷಯ ಅಂದ್ರೆ ಇನ್ನೂ ಆರೋಗ್ಯವಾಗಿದ್ದಾನೆ. ಸುಮಾರು 81 ವರ್ಷ ವಯಸ್ಸಿನ ಈ ವ್ಯಕ್ತಿ ವೃತ್ತಿಯಲ್ಲಿ ರೈತ. ಇವರು ಕೊನೆಯ ಬಾರಿಗೆ ನಿದ್ರಿಸಿದಾಗ ಇವರಿಗೆ 17 ವರ್ಷ ವಯಸ್ಸಾಗಿತ್ತು.. ಅಂದಿನಿಂದ ಇಂದಿನ ವರೆಗೆ ನಿದ್ದೆ ಮಾಡಿಲ್ಲ.
ಈ ಹಿಂದೆ ಈ ರೈತ ಮಲೇರಿಯಾ ಸೋಂಕಿಗೆ ಒಳಗಾಗಿದ್ದನಂತೆ.. ಆಗ ಅವನಿಗೆ ನಿದ್ರಾಹೀನತೆ ಎದುರಾಯಿತಂತೆ… ಅನೇಕ ವೈದ್ಯರ ಬಳಿ ಹೋದರೂ, ಔಷಧಿ ತೆಗೆದುಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ. ಈ ವ್ಯಕ್ತಿ ವಿಯೆಟ್ನಾಂನ ಎಂಬತ್ತರ ಹರೆಯದ ಥಾಯ್ ನೋಕ್.
ಈ ವಯಸ್ಸಿನಲ್ಲೂ ಸಹ ಇವರಿಗೆ ಇನ್ನೂ ನಿದ್ದೆ ಬರುತ್ತಿಲ್ಲ. ಆದರೂ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ನೋಕ್ ಇನ್ನೂ 50 ಕೆಜಿ ತೂಕದ ಚೀಲವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 4 ಕಿ.ಮೀ ನಡೆಯಬಲ್ಲರು. ಅವರು ದಣಿದಿದ್ದನ್ನು ನಾನು ಇನ್ನೂ ನೋಡಿಲ್ಲ ಅಂತಾರೆ.. ಕುಟುಂಬಸ್ಥರು..
1962 ರ ವಿಯೆಟ್ನಾಂ ಯುದ್ಧದ ನಂತರ ಥಾಯ್ ನೋಕ್ ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಹಲವರು ಹೇಳುತ್ತಾರೆ. ಆದರೂ, ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯಸಿಲ್ಲ. ಆದರೆ ಒಬ್ಬ ವ್ಯಕ್ತಿಯು 63 ವರ್ಷಗಳ ಕಾಲ ನಿದ್ದೆ ಮಾಡದೆ ಹೇಗೆ ಆರೋಗ್ಯವಾಗಿರಲು ಸಾಧ್ಯ ಎಂದು ವೈದ್ಯರು ಕೂಡ ಆಶ್ಚರ್ಯ ಪಟ್ಟಿದ್ದಾರೆ.