ಗಸಗಸೆ ಇದು ಜೀವಕ್ಕೆ ತಂಪು ಉಂಟುಮಾಡುವ ಪಾಯಸ ಆಗಿದೆ. ನಿದ್ರೆ ಸಮಸ್ಯೆ ಇದ್ದವರು ಇದನ್ನು ಕುಡಿಯಬಹುದು. ತುಂಬಾ ಚೆನ್ನಾಗಿ ನಿದ್ರೆ ಬರುತ್ತದೆ. ನಿಮಗೆ ನಿದ್ರೆ ಮಾಡುವಾಗ ಸಮಸ್ಯೆ ಆಗುತ್ತಿದ್ದರೆ ಈ ಪಾಯಸವನ್ನೊಮ್ಮೆ ಟೇಸ್ಟ್ ಮಾಡಿ, ಟ್ರೈ ಮಾಡಿ ಆಮೇಲೆ ಮ್ಯಾಜಿಕ್ ನೋಡಿ ಇದನ್ನು ಮಾಡುವ ವಿಧಾನವನ್ನೂ ನೀಡಿದ್ದೇವೆ.
ಮನೆಯಲ್ಲಿ ಪೂಜೆ ಇದ್ದರೆ ಇದನ್ನು ಮಾಡಿ ಇದು ಮಂಗಳಕರವೂ ಹೌದು. ಮೊದಲು ಗಸಗಸೆ ತೆಗೆದುಕೊಂಡು ಅದನ್ನು ಫ್ರೈ ಮಾಡಿಕೊಳ್ಳಬೇಕು ಅದನ್ನು ಹುರಿಯುವಾಗ ಸಣ್ಣ ಉರಿ ಇಟ್ಟುಕೊಳ್ಳಿ. ತುಪ್ಪ ಹಾಕಿ ಹುರಿದುಕೊಳ್ಳಿ. ಸಣ್ಣ ಉರಿ ಇಟ್ಟುಕೊಂಡು ಕಲರ್ ಚೇಂಜ್ ಆಗುವವರೆಗೆ ಹೊರಿದುಕೊಳ್ಳಿ, ಐದು ನಿಮಿಷ ಹೀಗೆ ಮಾಡಿ. ನಂತರ ಅದರಿಂದ ಪರಿಮಳ ಬರುತ್ತದೆ. ನಂತರ ಅದನ್ನು ಮಿಕ್ಸಿಗೆ ಹಾಕಿ. ಇನ್ನೊಂದು ಕಡೆ ಕಾಯಿ ತುರಿ ತೆಗೆದಿಟ್ಟುಕೊಳ್ಳಿ. ಒಂದು ಸ್ವಲ್ಪ ಒಣ ಹಾಗೂ ಇನ್ನೊಂದು ಸ್ವಲ್ಪ ಹಸಿ ತೆಂಗಿನ ತುರಿ ಹಾಕಿ ಕಡೆಯಿರಿ. ಡ್ರೈ ಪ್ರೂಟ್ಸ್ಅನ್ನೂ ಹಾಕಿ ಮಿಕ್ಸಿಯಲ್ಲಿ ರುಬ್ಬಿ. 4 ಸ್ಪೂನ್ ಬೆಲ್ಲಾ ತಗೋಳಿ. ಇಲ್ಲ ಅಂದ್ರೆ ಸಕ್ಕರೆಯನ್ನು ಕೂಡ ಉಪಯೋಗಿಸಬಹುದು. ಬೆಲ್ಲವನ್ನಾದರೆ ಕರಗಿಸಿಕೊಳ್ಳಬೇಕು. ನಂತರ ರುಬ್ಬಿದ ಮಿಕ್ಸ್ಗೆ ಗಸಗಸೆ ಹಾಕಬೇಕು. ಕೈಯಾಡಿಸುತ್ತಾ ಕುದಿಸಬೇಕು. ಸ್ವಲ್ಪ ಬೇಯಿಸಬೇಕು. ಮಿಕ್ಸಿಗೆ ನೀರು ಹಾಕಿ ಮತ್ತೆ ಅದನ್ನೂ ಇದಕ್ಕೆ ಸೇರಿಸಿಕೊಳ್ಳಿ. ಚಿಟಿಕೆಯಷ್ಟು ತೀರಾ ಕಮ್ಮಿ ಉಪ್ಪನ್ನು ಹಾಕಿ. ಇದು ಇನ್ನೂ ಹೆಚ್ಚು ರುಚಿ ಕೊಡುತ್ತದೆ. ಅದು ಕುದಿಸಿದ ನಂತರ ಹಾಲು ಹಾಕಿಕೊಳ್ಳಿ.
ಕುದಿ ಬಂದ ನಂತರ ಸ್ಟವ್ ಆಫ್ ಮಾಡಿ. ಏಕೆಂದರೆ ಜಾಸ್ತಿ ಹೊತ್ತು ಕುದಿಸಿದರೆ ಹಾಲು ಕೆಡುತ್ತದೆ. ಬೆಲ್ಲ ಹಾಕಿದ ಕಾರಣ. ನಿತ್ಯವೂ ನೀವು ಇದನ್ನು ಮಾಡಿಕೊಳ್ಳಬಹುದು. ಇದು ಬಹಳ ಬೇಗ ರೆಡಿ ಆಗುತ್ತದೆ. ಹಾಲು, ಗಸಗಸೆ, ಗೋಡಂಬಿ, ಬಾದಾಮಿ, ಅಕ್ಕಿ, ಏಲಕ್ಕಿ, ಹಸಿ ಕೊಬ್ಬರಿ, ತುಪ್ಪ. ಬೆಲ್ಲ ಇವೆಲ್ಲಾ ಇದ್ದರೆ ಸಾಕು. ಗಸಗಸೆ ಬೀಜಗಳು ಮತ್ತು ಅವುಗಳ ಎಣ್ಣೆಯು ಸ್ತ್ರೀಯರ ಫಲವತ್ತತೆಯನ್ನು ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿಯಾಗಿದೆ ಹಾಗಾಗಿ ಈ ಸಮಸ್ಯೆ ಇದ್ದವರೂ ಸಹ ಪಾಯಸ ಸವಿಯಬಹುದು
ನಾವು ಹೇಳಿದ ರೀತಿಯಲ್ಲೇ ಒಮ್ಮೆ ಪಾಯಸ ಮಾಡಿ ಮನೆಯಲ್ಲಿ ಟ್ರೈ ಮಾಡಿ. ತುಂಬಾ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ಅಷ್ಟೇ ಸಹಕಾರಿಯಾಗಿರುತ್ತದೆ. ಅಳುವ ಶಿಶುಗಳನ್ನು ಶಾಂತಗೊಳಿಸಲು, ನಿದ್ರೆಗೆ ಸಹಾಯ ಮಾಡಲು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಸಮಸ್ಯೆಗಳನ್ನು ಸುಧಾರಿಸಲು ಸಹ ಇದನ್ನು ತುಂಬಾ ಬಳಕೆ ಮಾಡಲಾಗುತ್ತದೆ