ಸಾಮಾನ್ಯವಾಗಿ ತಾಯಿಯಾಗುವುದು ಮಹಿಳೆಯರ ಬಹು ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಬ್ಬ ಹೆಣ್ಮಕ್ಕಳು ಮದುವೆಯಾದ ಬಳಿಕ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಆದರೆ ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಇದೊಂದು ದೊಡ್ಡ ಆತಂಕದ ವಿವಾರವೇ ಸರಿ. ಇದರಿಂದ ಮಹಿಳೆಯರು ಹೊರಬರುವುದು ಬಹಳ ಕಷ್ಟಕರವಾದ ಕೂಡ ಕಷ್ಟ.
ಒಂದು ಹೆಣ್ಣಿಗೆ ಮಕ್ಕಳಾದ್ರೆ ಒಂದು ಹೆಣ್ಣಿನ ಜೀವನ ಪರಿಪೂರ್ಣ ಎಂದು ಹೇಳಲಾಗುತ್ತೆ. ಅಂತೆಯೇ ಒಂದು ಹೆಣ್ಣು ತಾಯಿಯಾದ್ರೆ ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.
ಭ್ರೂಣದಲ್ಲಿರುವ ಮಗುವಿನ ಆರೈಕೆ ಜಾಗರೂಕತೆಯಿಂದ ಮಾಡಬೇಕು. ಅದೇ ರೀತಿ ಯಾವ ವಯಸ್ಸಿನಲ್ಲಿ ಗರ್ಭ ಧರಿಸಿದ್ರೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಬೇಕು.
ತಾಯಿಯಾಗಲು ಅಥವಾ ಗರ್ಭಿಣಿಯಾಗಲು ಉತ್ತಮ ವಯಸ್ಸು 25 ರಿಂದ 30 ವರ್ಷಗಳು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದು ಅತ್ಯುತ್ತಮ ವಯಸ್ಸು. ಈ ವಯಸ್ಸಿನಲ್ಲಿ ಮಹಿಳೆಯರ ಫಲವತ್ತತೆ ಸಾಕಷ್ಟು ಉತ್ತಮವಾಗಿರುತ್ತದೆ. ಮಹಿಳೆಯರ ದೇಹದ ಇತರ ಭಾಗಗಳೂ ಯೌವನ ಪಡೆಯುವ ವಯಸ್ಸು ಇದು. 30 ವರ್ಷಕ್ಕಿಂತ ಮೊದಲು ಗರ್ಭಧರಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
30 ವರ್ಷ ವಯಸ್ಸಿನ ನಂತರವೂ ಸಹ ನೈಸರ್ಗಿಕವಾಗಿ ಗರ್ಭಧರಿಸಬಹುದು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡಬಹುದು ಎಂದು ವೈದ್ಯರು ಹೇಳುತ್ತಾರೆ, ಆದರೆ ವಯಸ್ಸು ಹೆಚ್ಚಾದಂತೆ, ವಿಶೇಷವಾಗಿ 35 ವರ್ಷ ವಯಸ್ಸಿನ ನಂತರ, ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರಲ್ಲಿ ಮೊಟ್ಟೆಯ ಗುಣಮಟ್ಟ ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನೀವು ತಡವಾಗಿ ಗರ್ಭಧಾರಣೆಯನ್ನು ಯೋಜಿಸುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ:-
ಮಹಿಳೆಯರು ಹೆಚ್ಚು ತೂಕ ಹೆಚ್ಚಿಸಬಾರದು.
ನಿಮ್ಮ ಆಹಾರದಲ್ಲಿ ಪ್ರೋಟೀನ್ ಅನ್ನು ಸೇರಿಸಿ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಕಡಿಮೆ ಮಾಡಿ.
ಕೆಲಸದ ವೇಳಾಪಟ್ಟಿಗಳ ನಡುವೆ 6-8 ಗಂಟೆಗಳ ನಿದ್ರೆಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
ಕಾಲಕಾಲಕ್ಕೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುತ್ತಿರಿ.