ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾಧಿ ಅಥವಾ ಪೈಲ್ಸ್ ಬಹುತೇಕರ ನೋವಿನ ಸಮಸ್ಯೆಯಾಗಿದೆ. ಪ್ರತಿನಿತ್ಯ ಈ ನೋವು ಹೈರಾಣಾಗಿಸುತ್ತದೆ. ಎಷ್ಟೇ ಗುಳಿಗೆಗಳನ್ನು ತೆಗೆದುಕೊಂಡರೂ ವಾಸಿಯಾಗದೇ ಇರಬಹುದು. ಯಾವುದು ತಿನ್ನಬೇಕು? ಯಾವುದು ತಿನ್ನಬಾರದು ಎಂಬ ಗೊಂದಲಕ್ಕೆ ಮೂಲವ್ಯಾಧಿ ಹೊಂದಿರುವವರು ಅನುಭವಿಸಬಹುದು.
IPL 2025: ಲಕ್ನೋ ಆಫರ್ ತಿರಸ್ಕರಿಸಿದ ರಾಹುಲ್: ಕನ್ನಡಿಗ RCB ಸೇರೋದು ಪಕ್ಕಾನಾ!?
ಇದಕ್ಕೆ ತಕ್ಷಣ ಪರಿಹಾರ:-
ಹುರುಳಿ ಕಾಳು ಕರುಳಿಗೆ ತುಂಬಾ ಆರೋಗ್ಯಕರ. ಇದು ಪೈಲ್ಸ್ ನೋವಿನಿಂದ ಪರಿಹಾರವನ್ನು ಒದಗಿಸುವ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.
ಹುರುಳಿ ಕಾಳು ಕಿಡ್ನಿ ಕಲ್ಲುಗಳು ಮತ್ತು ಮೂತ್ರದ ಸೋಂಕಿನಿಂದ ಉಂಟಾಗುವ ತೊಂದರೆಗಳನ್ನೂ ಸಹ ಕಡಿಮೆ ಮಾಡುತ್ತದೆ. ಶತಮಾನಗಳಿಂದಲೂ ಆಯುರ್ವೇದದಲ್ಲಿ ಪೈಲ್ಸ್ಗೆ ಹುರುಳಿ ಕಾಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಿಜ್ಞಾನವೂ ಸಹ ಇದರ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿದೆ.
ಹುರುಳಿ ಕಾಳು ಪ್ರೋಟೀನ್ ಮತ್ತು ಫೈಬರ್ನಿಂದ ತುಂಬಿರುತ್ತದೆ. 100 ಗ್ರಾಂ ಹುರುಳಿ ಕಾಳಿನಲ್ಲಿ 22 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿದ್ದು, ಪ್ರೊಟೀನ್ ಮತ್ತು ನಾರಿನ ಹೊರತಾಗಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹುರುಳಿ ಕಾಳಿನ ಸೇವನೆಯಿಂದ ಅಪೌಷ್ಟಿಕತೆಯನ್ನು ಗುಣಪಡಿಸಬಹುದು. ಇದು ಸಾಕಷ್ಟು ಪ್ರಮಾಣದ ಫೈಬರ್ ಹೊಂದಿರುತ್ತದೆ, ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.
ಕಳಪೆ ಜೀರ್ಣಕ್ರಿಯೆಯಿಂದ ಮಲವು ತುಂಬಾ ಗಟ್ಟಿಯಾಗುತ್ತದೆ. ಮಲಬದ್ಧತೆಯ ಸಂದರ್ಭದಲ್ಲಿ ಪೈಲ್ಸ್ ಸಮಸ್ಯೆ ಉಲ್ಬಣಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದ ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ. ಇದರಿಂದ ನೋವು ಮತ್ತಷ್ಟು ಹೆಚ್ಚಾಗುತ್ತದೆ. ಹುರುಳಿ ಕಾಳು ಮಲವನ್ನು ಮೃದುವಾಗಿಸುತ್ತದೆ, ಇದರಿಂದ ಮಲ ಹೊರಹೋಗಲು ಯಾವುದೇ ತೊಂದರೆ ಆಗುವುದಿಲ್ಲ.
ಹುರುಳಿ ಕಾಳನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸಬಹುದು. ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಬಹುದು. ನೀವು ಸುಲಭವಾಗಿ ಹುರುಳಿ ಕಾಳನ್ನು ಬಳಸಬಹುದು. ಇದನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸಾರು-ಉಸುಲಿ ಮಾಡಿಕೊಂಡು ತಿನ್ನಬಹುದು. ನೀವು ಹುರುಳಿ ಕಾಳು ಬೇಯಿಸಿದ ನೀರನ್ನು ಸಹ ಕುಡಿಯಬಹುದು, ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಮೊದಲು ಹುರುಳಿ ಕಾಳನ್ನು ನೀರಿನಲ್ಲಿ ನೆನೆಯಲು ಬಿಡಬೇಕು. ಬೆಳಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಿರಿ. ಸ್ವಲ್ಪ ಸಮಯದ ನಂತರ ನೀವು ಪರಿಹಾರವನ್ನು ಕಾಣಲು ಪ್ರಾರಂಭಿಸುತ್ತೀರಿ.