ಚಳಿಗಾಲ ಬಂತೆಂದರೆ ನಮಗೆ ಹೇರಳವಾಗಿ ಸಿಗುವ ತರಕಾರಿಗಳಲ್ಲಿ ಬಿಳಿ ಬಣ್ಣದ ಮೂಲಂಗಿ ಕೂಡಾ ಒಂದು. ಮೂಲಂಗಿಯು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಹಲವಾರು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಉತ್ತಮ ತರಕಾರಿ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ಅನೇಕ ಜನರು ಇದನ್ನು ಚಳಿಗಾಲದಲ್ಲಿ ಸೇವಿಸಲು ಇಷ್ಟಪಡುತ್ತಾರೆ.
ಮೂಲಂಗಿಯನ್ನು ಪಲ್ಯದ ರೀತಿ ತಯಾರಿಸಿ ಚಪಾತಿಯೊಂದಿಗೆ ಸವಿಯಬಹುದು. ಜನರು ಈ ತರಕಾರಿಯೊಂದಿಗೆ ಉಪ್ಪಿನಕಾಯಿಯನ್ನು ಸಹ ಮಾಡುತ್ತಾರೆ ಮತ್ತು ಇದು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
ಈ ತರಕಾರಿ ಎಷ್ಟು ರುಚಿಕರ ಮತ್ತು ಪೌಷ್ಟಿಕವಾಗಿದ್ದರೂ ಈ ತರಕಾರಿಯನ್ನು ಸೇವಿಸುವಾಗ ಕೆಲವು ಆಹಾರ ಮತ್ತು ಪಾನೀಯಗಳನ್ನು ಸೇವಿಸಬಾರದು. ಏಕೆಂದರೆ ಅವು ವ್ಯಕ್ತಿಯ ಆರೋಗ್ಯಕ್ಕೆ ಮಾರಕವಾಗಬಹುದು.
ಹಾಲು
ಮೂಲಂಗಿ ತಿಂದ ತಕ್ಷಣ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಏಕೆಂದರೆ ಮೂಲಂಗಿಯು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅದನ್ನು ಹಾಲಿನೊಂದಿಗೆ ಸೇವಿಸುವುದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಮತ್ತು ಹೊಟ್ಟೆ ನೋವನ್ನು ಪ್ರಚೋದಿಸುತ್ತದೆ. ಹೀಗಾಗಿ, ಈ ಎರಡು ಆಹಾರಗಳ ಸೇವನೆಯ ನಡುವೆ ಕೆಲವು ಗಂಟೆಗಳ ಅಂತರವನ್ನು ಇಟ್ಟುಕೊಳ್ಳುವುದು ಉತ್ತಮ.
ಹಾಗಲಕಾಯಿ
ನೀವು ಯಾವುದೇ ರೀತಿಯಲ್ಲಿ ಮೂಲಂಗಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ಸೇವಿಸುತ್ತಿದ್ದರೆ ಎಚ್ಚರದಿಂದಿರಬೇಕು. ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಈ ಎರಡರಲ್ಲೂ ಕಂಡುಬರುವ ನೈಸರ್ಗಿಕ ಅಂಶಗಳು ಪರಸ್ಪರ ವರ್ತಿಸುವ ಮೂಲಕ ನಿಮ್ಮ ಆರೋಗ್ಯವನ್ನು ಹಾಳುಮಾಡಬಹುದು. ಇದು ನಿಮಗೆ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು ಅಲ್ಲದೆ ಹೃದಯಕ್ಕೂ ಮಾರಕವಾಗಿದೆ.
ಸೌತೆಕಾಯಿ
ಸೌತೆಕಾಯಿ ಮತ್ತು ಮೂಲಂಗಿಯನ್ನು ಯಾವತ್ತೂ ಒಟ್ಟಿಗೆ ಸೇವಿಸಬಾರದು. ಏಕೆಂದರೆ ಸೌತೆಕಾಯಿಯು ಆಸ್ಕೋರ್ಬೇಟ್ ಅನ್ನು ಹೊಂದಿರುತ್ತದೆ, ಇದು ವಿಟಮಿನ್ ಸಿ ಹೀರಿಕೊಳ್ಳಲು ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕಾಗಿ, ಸೌತೆಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು.
ಟೀ
ಈ ಸಂಯೋಜನೆಯು ಅತ್ಯಂತ ಅಪಾಯಕಾರಿ ಏಕೆಂದರೆ ಇದು ಮಲಬದ್ಧತೆ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಏಕೆಂದರೆ ಮೂಲಂಗಿ ಪ್ರಕೃತಿಯಲ್ಲಿ ತಂಪಾಗಿರುತ್ತದೆ ಮತ್ತು ಚಹಾವು ಬೆಚ್ಚಗಿರುತ್ತದೆ. ಇವೆರಡೂ ಪರಸ್ಪರ ವಿರುದ್ಧವಾಗಿರುತ್ತವೆ. ಈ ಕಾರಣಕ್ಕಾಗಿಯೇ ಚಹಾ ಮತ್ತು ಮೂಲಂಗಿಯ ಸಂಯೋಜನೆಯು ಹೊಂದಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಕಿತ್ತಳೆ
ಮೂಲಂಗಿಯ ಜೊತೆಗೆ ಕಿತ್ತಳೆಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುತ್ತದೆ. ಈ ಎರಡರ ಸಂಯೋಜನೆ ನಿಮಗೆ ವಿಷದಂತಿದೆ. ಇದು ನಿಮಗೆ ಹೊಟ್ಟೆಯ ಸಮಸ್ಯೆಗಳನ್ನುಂಟು ಮಾಡುವುದಲ್ಲದೆ. ಹೆಚ್ಚಿನ ಕಾಯಿಲೆಗಳನ್ನು ನೀಡುತ್ತದೆ.