ನವದೆಹಲಿ:- ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಇದ್ದ ಎಎಪಿಗೆ ಶಾಕ್ ಉಂಟಾಗಿದೆ.
ಇದೊಂದು ಬಾರಿ ಕ್ಷಮಿಸಿ: ಅಭಿಮಾನಿಗಳ ಬಳಿ ಕೈ ಮುಗಿದು ಬೇಡಿಕೊಂಡ ದರ್ಶನ್
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿತು. ಬಿಜೆಪಿಗೆ ರಾಜಧಾನಿಯ ಅಧಿಕಾರ ಸಿಕ್ಕಿದೆ.
ಬಿಜೆಪಿಯ ಕೆಲ ನಾಯಕರು ಗೆಲುವಿನ ಭಾಷಣ ನೀಡುತ್ತಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರೆ, ಇತ್ತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ಮಾತನಾಡಿ, “ಕೇಂದ್ರ ನಾಯಕತ್ವವು ಸಿಎಂ ಮುಖವನ್ನು ನಿರ್ಧರಿಸುತ್ತದೆ. ನೀವು ಸಾರ್ವಜನಿಕರೊಂದಿಗೆ ಅಪ್ರಾಮಾಣಿಕರಾಗಿದ್ದರೆ, ಸಾರ್ವಜನಿಕರು ಇದೇ ರೀತಿಯ ಫಲಿತಾಂಶವನ್ನು ನೀಡುತ್ತಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ದೆಹಲಿಯಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗುತ್ತದೆ” ಎನ್ನುವ ಮೂಲಕ ಆಪ್ ನಾಯಕರನ್ನು ಟೀಕಿಸಿದ್ದಾರೆ.
ದೆಹಲಿಯಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಪಾಡಿಕೊಂಡಿದೆ. ದೆಹಲಿ ವಿಧಾನಸಭೆ ಚುನಾವಣೆಯ ಮ್ಯಾಜಿಕ್ ಸಂಖ್ಯೆ /ಬಹುಮತ 36 ಆಗಿದೆ. ಇನ್ನು ದೆಹಲಿಯಲ್ಲಿ ಎಎಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಅರವಿಂದ್ ಕೇಜ್ರಿವಾ ಅವರಿಗೇ ಭಾರೀ ಹಿನ್ನಡೆಯಾಗಿರುವುದು ಮುಜುಗರಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ದೆಹಲಿ ವಿಧಾನಸಭೆ ಚುನಾವಣೆಯ ರಿಸಲ್ಟ್ನ ಬಗ್ಗೆ ಮಾತನಾಡಿದ್ದಾರೆ.
ದೆಹಲಿಯಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ. ಅರವಿಂದ್ ಕ್ರೇಜಿವಾಲ್ ಅವರು ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ. ಅಣ್ಣಾ ಹಜಾರೆ ಹೋರಾಟವನ್ನು ಬಳಸಿಕೊಂಡು ಅರವಿಂದ್ ಕ್ರೇಜಿವಾಲ್ ಅವರು ಅಧಿಕಾರಕ್ಕೆ ಬಂದಿದ್ದರು. ಕಳೆದ ಎರಡು ಅವಧಿಯಲ್ಲಿ ಕೇಜ್ರಿವಾಲ್ ಅವರ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದರಿಂದ ಜನರು ನಿರಾಸೆಗೆ ಒಳಗಾಗಿದ್ದಾರೆ. ಹೀಗಾಗಿ, ದೆಹಲಿಯಲ್ಲಿ ಜನ ಬಿಜೆಪಿ ಕೈ ಹಿಡಿದಿದ್ದಾರೆ.