ನವದೆಹಲಿ: ಅಗ್ನಿವೀರ್ ಯೋಜನೆಗೆ ಪ್ರತಿಪಕ್ಷಗಳ ಜೊತೆಗೆ ಎನ್ಡಿಎ ಒಕ್ಕೂಟದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಯೋಜನೆಯಲ್ಲಿ ಪರಿಷ್ಕರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಸೇನೆಯಲ್ಲಿ ಅಗ್ನಿವೀರ್ ಸಂಖ್ಯೆ ಹೆಚ್ಚಿಸಲು ವೇತನ ಮತ್ತು ಅರ್ಹತೆಗಳನ್ನು ಬದಲಾವಣೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಅದು ಶಿಫಾರಸು ಮಾಡಿದೆ.
ಅಗ್ನಿಪಥ್ ಯೋಜನೆಯಲ್ಲಿ ಪರಿಷ್ಕರಣೆ ಮಾಡಿರುವ ಕೇಂದ್ರ ರಕ್ಷಣಾ ಇಲಾಖೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಪ್ರಸ್ತುತ ಕೇವಲ 25 ಪ್ರತಿಶತದಷ್ಟು ಅಗ್ನಿವೀರರನ್ನು ಅವರ ಆರಂಭಿಕ ಸೇವಾ ಅವಧಿಯ ನಂತರ ಉಳಿಸಿಕೊಳ್ಳಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 50% ಅಗ್ನಿವೀರ್ ಸಂಖ್ಯೆ ಹೆಚ್ಚಿಸಬೇಕಿದ್ದು ಬದಲಾವಣೆ ಅಗತ್ಯ ಎಂದು ಹೇಳಿದೆ.
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ವಿವಿಧ ಘಟಕಗಳು ಮತ್ತು ರಚನೆಗಳಲ್ಲಿ ನಡೆಸಿದ ಆಂತರಿಕ ಪ್ರತಿಕ್ರಿಯೆ ಮತ್ತು ಸಮೀಕ್ಷೆಗಳನ್ನು ಅನುಸರಿಸಿ ಸೇನೆಯು ಈ ಸಂಭಾವ್ಯ ಬದಲಾವಣೆಗಳ ಕುರಿತು ಸರ್ಕಾರಕ್ಕೆ ಈಗಾಗಲೇ ಶಿಫಾರಸುಗಳನ್ನು ಸಲ್ಲಿಸಿದೆ. ಪ್ರಕ್ರಿಯೆಯು ಸಮಯ ತೆಗೆದುಕೊಳ್ಳಬಹುದಾದರೂ, ಅಗ್ನಿಪಥ್ ಯೋಜನೆಯನ್ನು ಹೆಚ್ಚಿಸಲು ಅಗತ್ಯ ಪರಿಷ್ಕರಣೆಗಳನ್ನು ಮಾಡಲಾಗುವುದು ಎಂದು ಉನ್ನತ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ರಕ್ಷಣಾ ವಲಯದ ಪಿಂಚಣಿ ಬಿಲ್ ಕಡಿಮೆ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು 2022 ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಯೋಜನೆಯ ಪ್ರಕಾರ, ಅಗ್ನಿವೀರ್ಸ್ ಎಂದು ಕರೆಯಲ್ಪಡುವ ಸಿಬ್ಬಂದಿಯನ್ನು ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಸಿಬ್ಬಂದಿಯನ್ನು ಮಾತ್ರ ಶಾಶ್ವತವಾಗಿ ಮುಂದುವರಿಯಲು ಅನುಮತಿಸಲಾಗಿದೆ.