ಕೆಲವರು ಎಸಿ ಆನ್ ಮಾಡಿ ಕಾರು ಸ್ಟಾರ್ಟ್ ಮಾಡುತ್ತಾರೆ. ಅಥವಾ ಕಾರು ಸ್ಟಾರ್ಟ್ ಆದ ತಕ್ಷಣ ಎಸಿ ಆನ್ ಮಾಡುತ್ತಾರೆ. ಹಾಗಿದ್ರೆ ಈ ರೀತಿ ಮಾಡುವುದು ಎಷ್ಟು ಸರಿ? ಎಷ್ಟು ತಪ್ಪು? ಎಂಬುದಕ್ಕೆ ಉತ್ತರ ಇಲ್ಲಿದೆ
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ: ನಾಳೆ ಕೊಡಗಿಗೆ ಸಿಎಂ ಸಿದ್ದರಾಮಯ್ಯ ಭೇಟಿ
ಹೊಸ ಕಾರಿನಲ್ಲಿ, ಇಂಜಿನ್ ಸ್ಟಾರ್ಟ್ ಆದ ತಕ್ಷಣ ಎಸಿ ಆನ್ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಹಳೆಯ ಕಾರುಗಳು ಅಥವಾ ಸರಿಯಾಗಿರದ ಕಾರುಗಳಲ್ಲಿ ಈ ರೀತಿ ಮಾಡಿದ್ರೆ, ಸಮಸ್ಯೆ ಆಗೋದು ಗ್ಯಾರಂಟಿ. ಎಸಿ ಸ್ಟಾರ್ಟ್ ಮಾಡಿದ ತಕ್ಷಣ ಆನ್ ಮಾಡಿದರೆ ಕೆಲವು ಭಾಗಗಳು ಹಾಳಾಗಬಹುದು.
ಇನ್ನು ಎಸಿ ಆನ್ ಇರುವ ಯಾವುದೇ ವಾಹನದ ಇಂಜಿನ್ ಅನ್ನು ತಕ್ಷಣ ಸ್ಟಾರ್ಟ್ ಮಾಡಬೇಡಿ. ಅಥವಾ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಎಸಿ ಆನ್ ಮಾಡಿದರೆ ಇಂಜಿನ್ ಮೇಲೆ ಒತ್ತಡ ಬೀಳಬಹುದು. ಇದರಿಂದ ಇಂಜಿನ್ ಮೇಲೆ ಒತ್ತಡ ಬೀಳಬಹುದು ಮತ್ತು ಪೆಟ್ರೋಲ್ ಬೇಗ ಖಾಲಿಯಾಗುವ ಸಾಧ್ಯತೆ ಇರುತ್ತದೆ.
ಎಸಿ ಯಾವಾಗ ಆನ್ ಮಾಡಬೇಕು? ಈಗಿನ ಕೆಲವೊಂದು ಕಾರುಗಳು ಆಟೋಮೆಟಿಕ್ ಎಸಿಯನ್ನು ಹೊಂದಿರುತ್ತದೆ. ಇದು ಅವಶ್ಯಕತೆಗೆ ತಕ್ಕಂತೆ ಕಾರಿನಲ್ಲಿ ಎಸಿ ಆಣ್ ಮಾಡುತ್ತದೆ. ಆದ್ರೆ ಮ್ಯಾನ್ಯುವಲ್ ಸಿಸ್ಟಂನ ಸಂದರ್ಭದಲ್ಲಿ, ಕಾರು ಸ್ಟಾರ್ಟ್ ಮಾಡಿದ ನಂತರ, ರನ್ನಿಂಗ್ನಲ್ಲಿ ಎಸಿ ಆನ್ ಮಾಡಬೇಕು ಮತ್ತು ಫ್ಯಾನ್ ವೇಗವನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗಿದೆ.
ನಂತರ ಕ್ರಮೇಣ ಎಸಿ ವೇಗವನ್ನು ಹೆಚ್ಚಿಸಿ. ಇದು ಎಂಜಿನ್ ಮೇಲೆ ಹಠಾತ್ ಲೋಡ್ ಆಗುವುದಿಲ್ಲ. ವಾಹನದಲ್ಲಿ AC ಸ್ವಿಚ್ ಆನ್ ಮಾಡಿದಾಗ, ಲೈಟ್ ಅಥವಾ ರೇಡಿಯೋದಂತಹ ಇತರ ವಿದ್ಯುತ್ ಸಾಧನಗಳನ್ನು ಸ್ವಿಚ್ ಆಫ್ ಮಾಡುವುದು ಸೂಕ್ತ.
ಕಾರ್ ಎಸಿ ಅಥವಾ ಇಂಜಿನ್ನಲ್ಲಿ ಯಾವುದೇ ತೊಂದರೆಗಳು ಕಂಡುಬಂದರೆ, ತಕ್ಷಣ ಶೋ ರೂಮ್ಗೆ ಕೊಂಡೊಯ್ಯಬೇಕು. ಈ ಮೂಲಕ ಕಾರಿನ ಎಸಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮತ್ತು ಇಂಜಿನ್ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಬಹುದು.