ಬೆಂಗಳೂರು: ಪರೀಕ್ಷೆ ಅನ್ನೋದನ್ನು ಹೇಗೆ ಹಬ್ಬದಂತೆ ಆಚರಿಸಿ ಎಂದು ಹೇಳಲಾಗುತ್ತದೋ ಹಾಗೇ ಚುನಾವಣೆ ಅನ್ನೋದು ಕೂಡ ದೊಡ್ಡ ಪರೀಕ್ಷೆಯೇ, ಇದು ದೇಶದ ಪರೀಕ್ಷೆ. ನಾಳೆ ಲೋಕಸಭಾ ಚುನಾವಣಾ ಹಬ್ಬ ಆರಂಭವಾಗಲಿದ್ದು ಈಗಾಗಲೇ ಎಲ್ಲ ತಯಾರಿ ನಡೆದಿದೆ. ಹಾಗಾದ್ರೆ ಹೇಗಿದೆ ಸಿದ್ದತೆ ಅಂತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.. ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಭರಾಟೆ ಮುಗಿಯಿತು. ಇನ್ನೇನಿದ್ರೂ ಮತದಾನದತ್ತ ಇದೀಗ ಎಲ್ಲರ ಚಿತ್ತ. ಈ ಕಾರಣಕ್ಕೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಮೂರು ಕ್ಷೇತ್ರದಲ್ಲಿ ವೋಟಿಂಗ್ಗೆ ಸಕಲ ಸಿದ್ಧತೆ ನಡೆದಿದೆ.
ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನೆರಡೇ ದಿನ ಬಾಕಿ. ಈ ಹಿನ್ನೆಲೆ ರಾಜ್ಯ ಚುನಾವಣೆ ಅಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಮತದಾರ ಪ್ರಭು ತನ್ನ ಹಕ್ಕು ಚಲಾಯಿಸಲು ಬೇಕಾದ ಸಕಲ ಸಿದ್ಧತೆಗಳನ್ನು ಆಯೋಗ ಮಾಡಿಕೊಂಡಿದೆ.ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲ್ಲಿದೆ. ಬೆಳಗ್ಗೆ 7 ಗಂಟೆಯಿಂದ ವೋಟಿಂಗ್ಗೆ ಅವಕಾಶ ಇರಲಿದೆ. ಇದಕ್ಕೆ ಬೇಕಾದ ಕೊನೆ ಕ್ಷಣದ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಮತದಾನ ಕಾರ್ಯಕ್ಕೆ ಬೇಕದ ಸುಮಾರು 52 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8984 ಮತಗಟ್ಟಿಗಳು ಇದ್ದು, 2003 ಮತಗಟ್ಟಿಗಳು ಸೂಕ್ಷ್ಮ ಹಾಗೂ 253 ಅತಿಸೂಕ್ಷ್ಮ ಮತಗಟ್ಟಿಗಳು ಅಂತ ಘೋಷಣೆ ಮಾಡಲಾಗಿದೆ. ಇನ್ನು ಈ ಮತಗಟ್ಟಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಒಟ್ಟು 305 ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದೆ.
ಸಕ್ಷಮ್ ಆಯಪ್ ಮೂಲಕ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ನೋಂದಣಿ ಮಾಡಿಕೊಂಡು ಉಚಿತ ಸಾರಿಗೆ ಸೌಲಭ್ಯ ಪಡೆಯಬಹುದು. ಇನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಖಿ ಮತಗಟ್ಟೆ, ಪಿಂಕ್ ಬೂತ್ ಸೇರಿದಂತೆ ವಿವಿಧ ಬಗೆಯ ಮತಗಟ್ಟಿಗಳನ್ನು ಸ್ಥಾಪನೆ ಮಾಡಲಾಗ್ತಿದೆ. ಒಟ್ಟಾರೆ.. ಕಳೆದ ಬಾರಿ ಶೇ 55 ರಷ್ಟು ಮತದಾನ ಆಗಿತ್ತು. ಈ ಬಾರಿ ಈ ಪ್ರಮಾಣ ಹೆಚ್ಚಾಗಬೇಕಿದೆ. ಇದಕ್ಕಾಗಿ ಸಾಕಷ್ಟು ಜಾಗೃತಿ ಕಾರ್ಯ ಮಾಡಲಾಗಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಮತದಾರರಾದ ನೀವು ಭಾಗಿಯಾಗಿ ವೋಟ್ ಮಾಡಿ ಎಂದು ಪ್ರಜಾ ಟಿವಿ ಮನವಿ ಮಾಡಿಕೊಳ್ಳುತ್ತದೆ.