Author: AIN Author

ವಿಜಯಪುರ:- ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲೇ ಎಣ್ಣೆ ಪಾರ್ಟಿ ನಡೆದಿದ್ದು, ಸ್ಥಳೀಯರು ಆಕ್ರೋಶ ಹೊರ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳ್ಳಿಯಲ್ಲಿ ಜರುಗಿದೆ. https://ainlivenews.com/the-siddaramaiah-government-has-completed-1-year-by-giving-a-guarantee-as-promised/ ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಅವರು ತಮ್ಮ ಸ್ನೇಹಿತನ ಜೊತೆ ನಿನ್ನೆ ರಾತ್ರಿ ಮದ್ಯ ಸೇವನೆ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಕಚೇರಿಯ ಆವರಣದಲ್ಲೇ ಮದ್ಯ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಅವರ ನಡೆಯ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದ್ದು ತಾನು ಏನೂ ತಪ್ಪು ಮಾಡಿಲ್ಲ ಎಂದು ಜೆಇ ಸಾಹೇಬ್ರು ವಾದ ಮಾಡಿದ್ದಾರೆ. ನಮ್ಮ ಕಚೇರಿ ಆವರಣದಲ್ಲಿ ಮದ್ಯ ಸೇವನೆಗೆ ಅವಕಾಶವಿದೆ ಎಂದಿದ್ದಾರೆ. ಇಂತ ಆಧಿಕಾರಿ ವಿರುದ್ದ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ದೇವರ ಹಸುವನ್ನು ಭವ್ಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂದೆಯೇ ಅಂತ್ಯಕ್ರಿಯೆ ಮಾಡಿರುವ ಅಪರೂಪದ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ನಡೆದಿದೆ. ಗ್ರಾಮದ ಆರಾಧ್ಯ ದೈವ ಶ್ರೀ…

Read More

ಬೆಂಗಳೂರು:- ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಈ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿತು. ಹಾಗೆ ಚುನಾವಣೆ ಪೂರ್ವದಲ್ಲಿ ತಾನು ಘೋಷಿಸಿದ್ದ ಹಲವು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಒಂದು ವರ್ಷ ಪೂರೈಸಿದ ಸಂತಸದಲ್ಲಿರುವ ಸರ್ಕಾರ ಎದುರಿಸಿದ ಸವಾಲುಗಳೇನು? ಮಾಡಿದ ಸಾಧನೆಗಳೇನು? ಪ್ರತಿಪಕ್ಷಗಳಿಗೆ ಕೊಟ್ಟ ಚಾಟಿ ಏಟಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. https://ainlivenews.com/hema-participated-in-a-rave-party-in-bangalore/ ಈ ಒಂದು ವರ್ಷದ ಅವಧಿಯಲ್ಲಿ ಹಲವು ಸವಾಲುವಳನ್ನು ಎದರಿಸಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಐದು ಗ್ಯಾರಂಟಿ ಯೋಜನೆಗಳೇ ಮೂಲಬೇರು. ಗ್ಯಾರಂಟಿ ಭರವಸೆಗಳನ್ನು ನೀಡಿಯೇ ಕಾಂಗ್ರೆಸ್​ ಅಧಿಕಾರಿಕ್ಕೆ ಬಂತು. ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಕ್ಯಾಬಿನೆಟ್​ನಲ್ಲಿಯೇ ಐದು ಗ್ಯಾರಂಟಿಗಳಿಗೆ ಅನುಮೋದನೆ ನೀಡಿತು. ಶಕ್ತಿ ಯೋಜನೆ, ಅನ್ನ ಭಾಗ್ಯದ ಹೆಚ್ಚುವರಿ ಹಣ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಮೂಲಕ ಮಹಿಳೆಯರ ಮತ್ತು ಯುವಕರ ಮನಗೆದ್ದ ಸರ್ಕಾರ ಈ ಗ್ಯಾರಂಟಿ ಜಾರಿಗೆ ಹಣ ಸರಿದೂಗಿಸಲು…

Read More

ಬೆಂಗಳೂರು:- ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ನಟಿ ಹೇಮಾ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/rain-storm-bbmp-commissioners-response-to-rajkaluve-water-problem/ ಈ ಸಂಬಂಧ ಮಾತನಾಡಿದ ಅವರು, ನಾನು ಹೈದ್ರಾಬಾದ್ ನಲ್ಲಿ ಇದೀನಿ. ಯಾವುದೇ ರೀವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ..ಹೈದ್ರಾಬಾದ್ ಪಾರ್ಮ್ ಹೌಸ್ ನಲ್ಲಿ ಇದೀನಿ ನೋಡಿ.. ಸುಮ್ನೆ ಸುಳ್ಳು ಸುದ್ದಿ ನಂಬಬೇಡಿ.. ಎಂದು ವಿಡಿಯೋ ಮೂಲಕ ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ.

Read More

ಬೆಂಗಳೂರು:- ನಗರದ ಯಲಹಂಕ , ನಾರ್ಥ್ ವುಡ್ ವಿಲ್ಲಾ ಜಲಾವೃತದ ಬಗ್ಗೆ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/helicopter-crash-irans-president-burned-alive/ ಈ ಸಂಬಂಧ ಮಾತನಾಡಿದ ಅವರು, ರಾಜಕಾಲುವೆ ನೀರಿನ ಸಮಸ್ಯೆ ಬಗ್ಗೆ ಮಾತಾನಾಡಿದ್ದಾರೆ. ಕೆರೆಗೆ ನೀರು ಬಿಡಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಳೆ ಬಂದಾಗ ಆ ನೀರು ಮೈದಾನಕ್ಕೆ ಹರಿಯುತ್ತಿತ್ತು. ದ್ರೆ ಈಗ ಅಲ್ಲಿ ಕೂಡ ಅಡೆತಡೆ ಇರೋದರಿಂದ ನೀರು ನುಗ್ಗಿತ್ತು. ಸದ್ಯ ಅಲ್ಲಿಗೆ ಪರ್ಯಾಯ ವ್ಯವಸ್ಥೆ ಮಾಡ್ತೀವೆ. ದೊಡ್ಡ ಪೈಪ್ ಅಳವಡಿಸಿ ಬೇರೆಡೆ ನೀರು ಹೋಗುವಂತೆ ಮಾಡ್ತೀವೆ. ಸದ್ಯ ಅಲ್ಲಿ ನಿಂತಿದ್ದ ನೀರನ್ನ ಮೋಟಾರ್ ಮೂಲಕ ಹೊರಹಾಕಿದ್ದೇವೆ. ಮುಂದೆ ಪೈಪ್ ಲೈನ್ ಅಳವಡಿಸಿ ಪರ್ಯಾಯ ಮಾರ್ಗ ಮಾಡ್ತೀವೆ. ರಾಜಕಾಲುವೆ ಸಮಸ್ಯೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

Read More

ನವದೆಹಲಿ:- ಹೆಲಿಕಾಪ್ಟರ್ ಪತನಗೊಂಡ ಹಿನ್ನೆಲೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/rain-in-bengaluru-more-than-twenty-roads-are-flooded/ ಇಬ್ರಾಹಿಂ ರೈಸಿ ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ರೈಸಿ ನೆರೆಯ ರಾಷ್ಟ್ರವಾದ ಅಝರ್ಬೈಜಾನ್​ನಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯಎವ್ ಜತೆ ಅಣೆಕಟ್ಟು ಉದ್ಘಾಟಿಸಿದ್ದರು. ಉಭಯ ರಾಷ್ಟ್ರಗಳು ಅರಾಸ್​ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟು ಇದಾಗಿದೆ. ರೈಸಿ ಅವರಿದ್ದ ಹೆಲಿಕಾಪ್ಟರ್​ನೊಂದಿಗೆ ಪ್ರಯಾಣಿಸುತ್ತಿದ್ದ ಇತರೆ ಎರಡು ಬೆಂಗಾವಲು ಹೆಲಿಕಾಪ್ಟರ್​ಗಳು ಸುರಕ್ಷಿತವಾಗಿ ಹಿಂದಿರುಗಿವೆ. ಬೆಂಗಾವಲು ಹೆಲಿಕಾಪ್ಟರ್​ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಹಲವಾರು…

Read More

ಬೆಂಗಳೂರು:- ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಿನ್ನೆಲೆ ನಗರದ ಇಪ್ಪತ್ತಕ್ಕೂ ಹೆಚ್ಚ ಕಡೆ ರಸ್ತೆಗಳು ಜಲಾವೃತವಾಗಿದೆ. ರಸ್ತೆಗಳ ಜಲಾವೃತದಿಂದ ಮಧ್ಯರಾತ್ರಿವರೆಗೂ ವಾಹನಸವಾರರು ಪರದಾಡಿದ್ದಾರೆ. https://ainlivenews.com/a-crack-appeared-in-the-bmtc-station-of-shivajinagar-people-are-worried/ ಒಂದು ಕಡೆ ರಸ್ತೆಗಳು ಜಲಾವೃತ ಮತ್ತೊಂದು ಕಡೆ ಮರಗಳ ನೆಲಸಮವಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರಿಂದಲೂ ಪರದಾಟ ನಡೆಸಿದ್ದಾರೆ. ನೀರು ನಿಂತಕಡೆಯಲ್ಲೆಲ್ಲಾ ಸ್ವತಃ ಪೊಲೀಸರಿಂದಲೇ ನೀರಿನ ತೆರವು ಕಾರ್ಯ ನಡೆದಿದೆ. ಹೆಬ್ಬಾಳ, ಮಾನ್ಯತಾಟೆಕ್ ಪಾರ್ಕ್ ರಸ್ತೆ, ಕಸ್ತೂರಿ ನಗರ MMT ಜಂಕ್ಷನ್, ಬಿಇಎಲ್, ಟಿನ್ ಫ್ಯಾಕ್ಟರಿ, ಟ್ಯಾನರಿ ರೋಡ್ ಸೇರಿ ಇತೆರಡೆ ತೊಂದರೆ ಆಗಿತ್ತು. ಈ ವೇಳೆ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಸ್ತೆಯಲ್ಲಿ ನಿಂತಿದ್ದ ನೀರಿನ ತೆರವು ಕಾರ್ಯ ನಡೆದಿದೆ. ಸಂಚಾರಿ ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದ ಬಿಎಂಟಿಸಿ ನಿಲ್ದಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿಲ್ದಾಣದ ಬೀಮ್ ಪಿಲ್ಲರ್ ನಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಆತಂಕ ಎದುರಾಗಿದೆ. https://ainlivenews.com/pm-modi-condoles-death-of-irans-president-ibrahim-raisi/ ಶಿವಾಜಿನಗರದ ಬಸ್​ ನಿಲ್ದಾಣ ನಗರದ ಹಳೆಯ ಸಾರ್ವಜನಿಕ ಬಸ್​ ನಿಲ್ದಾಣಗಳಲ್ಲೊಂದು. ಇದೀಗ ಈ ಬಸ್ ನಿಲ್ದಾಣದ ಬೀಮ್ ಪಿಲ್ಲರ್​ ಗಳಲ್ಲಿ ಅಪಾಯಕಾರಿ ಎನ್ನುವಂತ ಬಿರುಕು ಕಾಣಿಸಿಕೊಂಡಿದೆ. ಇದರ ಕೆಳಗೆಯೇ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ದಿನ ನಿತ್ಯ ಓಡಾಡುತ್ತಾರೆ. ನೂರಾರು ಬಿಎಂಟಿಸಿ ಬಸ್​ ಗಳು ಬಂದು ನಿಲ್ಲುತ್ತವೆ. ಹೀಗಾಗಿ ಇದು ಭೀತಿ ಹುಟ್ಟಿಸಿದೆ. ಈ ಬಸ್ ನಿಲ್ದಾಣದ ಪ್ಲಾಟ್​ ಫಾರ್ಮ್ 3, 7 ಹಾಗೂ 11ರ ವರೆಗೆ ಉದ್ದವಾಗಿ ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಳಭಾಗದಲ್ಲಿ ಬಸ್​​​ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಮಹಡಿಯ ಬಸ್ ನಿಲ್ದಾಣವಿದು. ಮೇಲಿನ ಎರಡು ಮಹಡಿಗಳು ಪಾರ್ಕಿಂಗ್ ಹಾಗೂ ನಾಲ್ಕನೇ ಮಹಡಿಯಲ್ಲಿ ಜಿಎಸ್​ಟಿ ಆಯುಕ್ತಾಲಯವಿದೆ. ಇಲ್ಲಿಗೂ ಪ್ರತಿನಿತ್ಯ ಜನರು ಓಡಾಡುತ್ತಾರೆ. ಹೀಗಾಗಿ ಈಗ ಕಾಣಿಸಿಕೊಂಡಿರುವ ಬಿರುಕು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ…

Read More

ನವದೆಹಲಿ:- ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. https://ainlivenews.com/breaking-ccb-raid-on-rave-party-five-arrested/ ಘಟನೆಯಿಂದ ಆಘಾತವಾಗಿದೆ, ಇಬ್ರಾಹಿಂ ರೈಸಿ ಭಾರತ ಹಾಗೂ ಇರಾನ್ ಸಂಬಂಧ ಉತ್ತಮವಾಗಿರಲು ಸಾಕಷ್ಟು ಕೆಲಸ ಮಾಡಿದ್ದಾರೆ. ಎಂದೂ ನಮ್ಮ ಮನಸ್ಸಿನಲ್ಲಿರುತ್ತಾರೆ ಎಂದಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿದೇಶಾಂಗ ಸಚಿವ ಹೊಸೈನ್ ಅಮೀರ್ಬುಲ್ಲಾಹಿಯಾನ್ ಮತ್ತು ಇತರರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೆಹ್ರಾನ್‌ನಿಂದ 600 ಕಿಮೀ ದೂರದಲ್ಲಿರುವ ಅಜರ್‌ಬೈಜಾನ್‌ನ ಜೋಲ್ಫಾ ಪ್ರದೇಶದಲ್ಲಿ ಭಾನುವಾರ ಪತನಗೊಂಡಿದೆ. ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್ ಪತನದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟಿನ ಈ ಸಮಯದಲ್ಲಿ ಭಾರತವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಪ್ರಧಾನಿ ಮೋದಿ ಈ ಮೊದಲು ಟ್ವೀಟ್​ ಮಾಡಿದ್ದರು. ಈ ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್,…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಜಿಆರ್‌ ಫಾರ್ಮ್‌ ಹೌಸ್‌ನಲ್ಲಿ ತಡರಾತ್ರಿ ನಡೆದ ರೇವ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಐವರನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/the-plane-carrying-iranian-president-ibrahim-raisi-crashed/ ಪಾರ್ಟಿ ಆಯೋಜಕ ವಾಸು ಹಾಗೂ ಮೂವರು ಡ್ರಗ್ ಪೆಡ್ಲರ್ಸ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪೊಲೀಸರ ದಾಳಿ ವೇಳೆ 45 ಗ್ರಾಂ ಡ್ರಗ್ಸ್, MDMA, ಕೊಕೆನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರು, ಮಾಡೆಲ್‌ಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ 6 ಗಂಟೆಗಳಿಗೂ ಹೆಚ್ಚುಕಾಲದಿಂದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸೋಕೋ ಟೀಮ್ ಡ್ರಗ್ಸ್​​​​ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇವೆಂಟ್ ಮ್ಯಾನೇಜ್​ಮೆಂಟ್​​​​​ ಕಂಪನಿ ಹೊಂದಿರುವ ಹೈದರಾಬಾದ್​​ ಮೂಲದ ವಾಸು ಎಂಬುವವರು G.R.ಫಾರ್ಮ್​​​ಹೌಸ್​​ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. 78 ಜನರಿಗೆ ಬರ್ತಡೇ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಸದ್ಯ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಕೆಲ ಮಾದಕವಸ್ತುವನ್ನು ಟಾಯ್ಲೆಟ್​ನಲ್ಲಿ‌ ಬಿಸಾಕಿ ನೀರುಹಾಕಿ…

Read More

ಬೆಂಗಳೂರು:- ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಅರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಮತ್ತು ಇತರ ನಟಿಯರು ಭಾಗಿಯಾಗಿದ್ದರು. https://ainlivenews.com/helicopter-disaster-foreign-minister-president-of-iran-died/ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಜಿಅರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದಾಗ ಆಂಧ್ರ ಪ್ರದೇಶ ಮತ್ತು ಬೆಂಗಳೂರು ಮೂಲದ ಸುಮಾರು 100 ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಅವರಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಕೆಲ ಬೇರೆ ನಟಿಯರೂ ಇದ್ದರು. ಪೊಲೀಸರು 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಅಲ್ಲಿಂದ ವಶಪಡಿಸಿಕೊಂಡಿದ್ದಾರೆ. ಆಂದ್ರಪ್ರದೇಶದ ಶಾಸಕರೊಬ್ಬರ ಕಾರ್ ಪಾರ್ಕಿಂಗ್ ಪಾಸ್ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಬರಾಮತ್ತಾಗಿದೆ. ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More