Author: AIN Author

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಸೂರ್ಯನ ಕೋಪ ನೆತ್ತಿಗೆ ಏರಿ ಜನರನ್ನ ಸುಡ್ತಾ ಇತ್ತು. ಸತತ ಮುರೂ ತಿಂಗಳ ಕಾಲ ಜನ ಸೂರ್ಯನಿಗೆ ತೆಗಳಿದ್ದೇ ತೆಗಳಿದ್ದು. ಕಳೆದ ನಾಲ್ಕೈದು ದಿನಗಳಿಂದ ಮೇಘರಾಜನ ಎಂಟ್ರಿಯಿಂದ ಸಿಟಿ ಮಂದಿ ಕೂಲ್ ಆಗಿದ್ರೆ, ಇತ್ತ ಮಳೆಗೆ ಹಲವು ಸಂಕಷ್ಟ ಕೂಡ ಎದುರಾಗಿದೆ. ಒಂದ್ಕಡೆ ಬಿಸಿಲಿನಿಂದ ಬೆಂದೋಗಿದ್ದ ಜನ ಕೂಲ್ ಆಗಿದ್ರೆ.. ಇನ್ನೊಂದ ಕಡೆ ಮಳೆಯ ಎಫೆಕ್ಟ್ ಗೆ ಸಿಟಿ ರಸ್ತೆಗಳು, ಅಂಡರ್ ಪಾಸ್ ಹೊಂಡದಂತಾಗಿದ್ವು. ಭಾರೀ ಮಳೆಯಿಂದಾಗಿ ಪಾಟರಿ ಟೌನ್ ರಸ್ತೆ ಕುಸಿತಗೊಂಡಿತ್ತು. ಮರದ ಜೊತೆಗೆ ವಿದ್ಯುತ್ ಕಂಬ ಬಿದ್ದು, ಜಸ್ಟ್ ಸೆಕೆಂಡನಲ್ಲಿ ಆಟೋ ಚಾಲಕ ಬಚಾವ್ ಆಗಿದ್ದಾನೆ. ಹೌದು.. ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಭಾರಿ ಮಳೆಯಾಗಿದ್ದು, ನಿನ್ನೆ ಸುರಿದ ಮಳೆ ಗಾಳಿಗೆ ತಿಮ್ಮಯ್ಯ ರಸ್ತೆಯಲ್ಲಿ ಮರವೊಂದು ಆಟೋರಿಕ್ಷಾ ಮೇಲೆ ಬಿದ್ದಿದೆ. ಜಲಾವೃತದಿಂದಾಗಿ ಜಯಮಹಲ್ ರಸ್ತೆ, ಹೆಬ್ಬಾಳ ವೃತ್ತ, ಕಾಮಾಕ್ಷಿ ಪಾಳ್ಯ, ಆರ್‌ಆರ್ ನಗರ, ನಾಯಂಡಹಳ್ಳಿಯಲ್ಲಿ ಅಧಿಕ ಮಳೆಯಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಯ್ತು.…

Read More

ಹಾಸನ: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರುವ ಘಟನೆ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ. ಸೋಮಶೇಖರ್, ಭಾಗ್ಯ ದಂಪತಿ ಪುತ್ರಿ ದೀಪಾ(34) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. https://ainlivenews.com/f-you-drink-pomegranate-juice-on-an-empty-stomach-in-the-morning/ ಇವರು ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ​​​ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ದೀಪಾ ಇಂದು ಮನೆಯಲ್ಲೇ  ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು: ಇಂದು 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತೀರ್ಣ ಹಿನ್ನೆಲೆ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪದ ಹೆರಜೇನಹಳ್ಳಿಯಲ್ಲಿ ನಡೆದಿದೆ. ರಂಜಿತ, ಪ್ರಿಯದರ್ಶಿನಿ ಆತ್ಮಹತ್ಯೆಗೆ ಯತ್ನಸಿದ ವಿದ್ಯಾರ್ಥಿಗಳಾಗಿದ್ದು, ಲಕ್ಷ್ಮಣರೇಖೆ ಹಾಗೂ ಮತ್ತೋರ್ವ ವಿದ್ಯಾರ್ಥಿನಿ ಪಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಕೊರಟಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ‌ ಪ್ರಿಯದರ್ಶಿನಿ, ರಂಜಿತಾಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಯತ್ನದಿಂದ ಪೋಷಕರು ಕಂಗಾಲು ಆಗಿದ್ದಾರೆ.

Read More

ವಿಜಯಪುರ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ  ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಸರಕಾರಿ‌ ಶಾಲೆಯ ವಿದ್ಯಾರ್ಥಿನಿ ಪವಿತ್ರ ಮಡಿವಾಳಪ್ಪಗೌಡ ಕೊಣ್ಣೂರ ಜಿಲ್ಲೆಗೆ ಪ್ರಥಮ‌ ಸ್ಥಾನ ಪಡೆದಿದ್ದಾಳೆ.ಸರಕಾರಿ ಆದರ್ಶ ವಿದ್ಯಾಲಯ ಆರ್.ಎಂ.ಎಸ್.ಎ ಶಾಲೆಯಲ್ಲಿ‌ ಓದುತ್ತಿರುವ ಈ ವಿದ್ಯಾರ್ಥಿನಿ 625ಕ್ಕೆ 623 ಅಂಕ ಪಡೆದು ಗಮನ ಸೆಳೆದಿದ್ದಾಳೆ.

Read More

ಹುಬ್ಬಳ್ಳಿ ಮೇ.9: ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರು ಸೇವೆ ಮಾಡಿದ್ದಾರೆ. ಎನ್.ಎಸ್.ಎಸ್ ಸ್ವಯಂ ಸೇವಕರು ಸಾಮಾಜಿಕ ಸೇವೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎಸ್.ಸಂಗ್ರೇಶಿ ಹೇಳಿದರು. ಇಂದು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಎನ್.ಎಸ್.ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್.ಎಸ್.ನ ಪ್ರಾದೇಶಿಕ ನಿರ್ದೇಶನಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಆಯೋಜಿಸಿದ್ದ 2024 ನೇ ಸಾಲಿನ ರಾಷ್ಟಿçÃಯ ಭಾವೈಕ್ಯತಾ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಉತ್ತಮ ಶಿಕ್ಷಣದ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತರಬಹುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬAಧವನ್ನು ಹೊಂದಬೇಕಾಗಿದೆ. ಪ್ರೊ.ಎಂ.ಬಿ.ದಿಲ್‌ಷಾದ್ ಅವರು ಎನ್.ಎಸ್.ಎಸ್‌ನ ಬೆಳವಣಿಗೆಗೆ ಬಹಳ ಶ್ರಮಿಸಿದ್ದಾರೆ.…

Read More

ಧರ್ಮಶಾಲಾ: ಆರ್‌ಸಿಬಿ ಕಪ್‌ ಗೆಲ್ಲುತ್ತೋ ಇಲ್ಲವೋ ಎನ್ನುವುದು ಆ ಮೇಲಿನ ಮಾತು. ಈಗ ಏನಿದ್ದರೂ ಅದೃಷ್ಟ ಕೈಹಿಡಿದು ಆರ್‌ಸಿಬಿ ಪ್ಲೇ-ಆಫ್‌ಗೇರಬಹುದಾ ಎಂಬ ಕುತೂಹಲ ಎಲ್ಲರಲ್ಲಿದೆ. 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಲ್ಲಿ ಬಹಳಷ್ಟು ಹಿಂದೆ ಉಳಿದಿರುವ ಆರ್‌ಸಿಬಿಗೆ ಈಗ ಪ್ರತಿ ಪಂದ್ಯವೂ ಡು ಆರ್‌ ಡೈ ಕದನ. ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ಮುಂದಿರುವ ಆಯ್ಕೆ ಗೆಲುವು ಮಾತ್ರ. ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದ ಆರ್‌ಸಿಬಿ ಇನ್ನು ಪ್ಲೇ-ಆಫ್‌ಗೇರುವುದೇ ಇಲ್ಲ ಅಂದುಕೊಂಡವರೇ ಜಾಸ್ತಿ. ಆದರೆ ಕಳೆದ 3 ಪಂದ್ಯಗಳ ತಂಡದ ಪ್ರದರ್ಶನ ಎಲ್ಲವನ್ನೂ ಉಲ್ಟಾ ಮಾಡಿದೆ. ಅಭೂತಪೂರ್ವ ಪ್ರದರ್ಶನ ತೋರಿ ಹ್ಯಾಟ್ರಿಕ್‌ ಜಯ ಸಾಧಿಸಿರುವ ಆರ್‌ಸಿಬಿ ಸದ್ಯ 11ರಲ್ಲಿ 4 ಜಯ ಸಾಧಿಸಿದ್ದು, 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಅತ್ತ ಪಂಜಾಬ್‌ ಪರಿಸ್ಥಿತಿ ಕೂಡಾ ಆರ್‌ಸಿಬಿಗಿಂತ ಭಿನ್ನವಾಗಿಲ್ಲ. 11 ಪಂದ್ಯಗಳಲ್ಲಿ 8 ಅಂಕದೊಂದಿಗೆ ತಂಡ 8ನೇ ಸ್ಥಾನದಲ್ಲಿದೆ. https://ainlivenews.com/f-you-drink-pomegranate-juice-on-an-empty-stomach-in-the-morning/ ಎರಡು ತಂಡಕ್ಕೂ ಪ್ಲೇ-ಆಫ್‌ ಹಾದಿ ಕಷ್ಟವಿದ್ದರೂ, ಅಸಾಧ್ಯವೇನಲ್ಲ.…

Read More

ಮಹದೇವಪುರ: ಬಿಲ್ಡಿಂಗ್ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ಗುಟ್ಟದಲ್ಲಿ ನಡೆದಿದೆ. ಗುಲ್ಬರ್ಗ ಮೂಲದ ಅರುಣ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಅಂಬೇಡ್ಕರ್ ಗುಟ್ಟದಲ್ಲಿನ‌ ಶಿವ ಪಿ.ಜಿ ಯ ಟೇರೆಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://ainlivenews.com/f-you-drink-pomegranate-juice-on-an-empty-stomach-in-the-morning/ ಕೆಲಸ ಹುಡುಕಿಕೊಂಡು ಗುಲ್ಬರ್ಗ ದಿಂದ ಬೆಂಗಳೂರಿಗೆ ಬಂದಿದ್ದ ಯುವಕನಾಗಿದ್ದು, ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ವೈಟ್ ಫೀಲ್ಡ್ ಫೀಲ್ಡ್ ಪೊಲೀಸರು ಆಗಮಿಸಿ, ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದಕೊಂಡಿದ್ದಾರೆ.

Read More

ಹುಬ್ಬಳ್ಳಿ : ಬಸವ ಜಯಂತಿ ಹಾಗೂ ಸರಣಿ ರಜೆ, ಮದುವೆ, ಮತ್ತಿತರ ಶುಭ ಕಾರ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮೇ 10 ರಿಂದ 12 ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಮೇ 10ರಂದು ಶುಕ್ರವಾರ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ, 11ರಂದು ಎರಡನೇ ಶನಿವಾರ ಹಾಗೂ 12ರಂದು ರವಿವಾರ ಸಾರ್ವಜನಿಕ ರಜೆ ಇರುತ್ತದೆ.ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ,ಗೃಹ ಪ್ರವೇಶ ಮತ್ತಿತರ ಶುಭಕಾರ್ಯಗಳು ನಡೆಯಲಿವೆ. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ. ಅವರ ಅನುಕೂಲಕ್ಕಾಗಿ ಮೇ10ರಿಂದ 12ರವರೆಗೆ ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ನಡುವೆಯೂ ಸಹ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಜೆ ಮುಗಿಸಿಕೊಂಡು ತಮ್ಮ ಕಾರ್ಯ ಕ್ಷೇತ್ರಗಳಿಗೆ ಹಿಂದಿರುಗುವವರ…

Read More

ಕೋಲಾರ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕೋಲಾರ ಜಿಲ್ಲೆಗೆ ಕೆಜಿಎಫ್ ವಿದ್ಯಾರ್ಥಿನಿ ದರ್ಷಿತ ಟಾಪರ್ ಆಗಿ ಬಂದಿದ್ದಾರೆ. https://ainlivenews.com/f-you-drink-pomegranate-juice-on-an-empty-stomach-in-the-morning/ 623 ಅಂಕಗಳು ಪಡೆದಿದ್ದು, ದರ್ಷಿತ ಕೋಲಾರ ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿಯಾಗಿದ್ದಾರೆ. ಕೆಜಿಎಫ್ ನಗರದ ಜೈನ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ರಾಬರ್ಟ್ ಸನ್ ಪೇಟೆಯ ನಗರದ ಸ್ವರ್ಣ ನಗರದ ಆನಂದ್ ಹಾಗೂ ಪದ್ಮಶ್ರೀ ದಂಪತಿ ತಮ್ಮ ಪುತ್ರಿಯ ಸಾಧನೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Read More

ಗದಗ: ಹಾಸನದಲ್ಲಿ ನಡೆದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸಂಬಂಧ ಹಲವು ಪ್ರಕರಣ ದಾಖಲಾಗಿದೆ. ಎಸ್ ಐ ಟಿ ತನಿಖೆ ಮುಂದುವರೆದಿದೆ. ಈ ಪ್ರಕರಣ ವಿಚಾರಣೆ ಮಾಡ್ತಿರೋ ನ್ಯಾಯಾಲಯಗಳು ಸಿವಿಲ್ ಕೋರ್ಟ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸ್ತಿವೆ. ಸಾಕ್ಷಿಗಳಿಗೆ ಬೆದರಿಕೆ ಆಮಿಷಗಳಿಗೆ ಒಳಪಡಿಸ್ತಿರೋದು ತನಿಖೆಯಲ್ಲಿ ಕಂಡು ಬಂದಿದೆ. ತನಿಖೆ ಸಂದರ್ಭದಲ್ಲಿ ನೊಂದ ಮಹಿಳೆಯರ, ಸಾಕ್ಷಿ ದಾರರ ಗೌಪ್ಯತೆ ರಕ್ಷಣೆ ಸಲುವಾಗಿ ಎರಡೂ ನ್ಯಾಯಾಲಯಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕೋರಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಗುರುನಾನಕ್ ಭವನದಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಲಾಗಿತ್ತು. ಈ ವಿಚಾರಣೆ ಬಂದ ದಿನಗಳಲ್ಲಿ ಮಾತ್ರ ಗುರುನಾನಕ್ ಭವನದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸೋ ಬಗ್ಗೆ ನಮ್ಮ ಇಲಾಖೆ ಅನುಮೋದನೆ ನೀಡಿದೆ. ಈ ಕುರಿತು ಹೈಕೋರ್ಟಗೆ ಪತ್ರ ರವಾನಿಸ್ತಿದ್ದೇವೆ ಎಂದು ಹೇಳಿದರು.

Read More