Author: AIN Author

ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್‌ಗಾಗಿ ಹುಡುಕಾಟ ಆರಂಭವಾಗಿದೆ ಎಂದು ವರದಿ ಹೇಳಿದೆ. BCCI ಶೀಘ್ರದಲ್ಲೇ ಇದಕ್ಕೆ ಅಗತ್ಯವಾದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದೆ. ಟೀಮ್‌ನ ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಭಾರತೀಯ ಮಂಡಳಿಗೆ ಯಾವುದೇ ಅಸಮಾದಾನವಿಲ್ಲ ಎನ್ನಲಾಗಿದೆ. https://ainlivenews.com/third-gender-murder-case-a-woman-arrested/#google_vignette ರಾಹುಲ್ ದ್ರಾವಿಡ್ ಅವರಿಗೂ ಮುಂದಿನ ಅವಧಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ಅವರ ಅಧಿಕಾರಾವಧಿ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ 2021ರಲ್ಲಿ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದರು. ರವಿಶಾಸ್ತ್ರಿ ಬದಲಿಗೆ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ರಾಹುಲ್ ದ್ರಾವಿಡ್ ಅವರ ಮೊದಲ ಅಧಿಕಾರಾವಧಿ ಎರಡು ವರ್ಷಗಳು ಎಂದು ಹೇಳಲಾಗಿತ್ತು. 2023ರಲ್ಲಿ ಇದನ್ನು T20 ವಿಶ್ವಕಪ್ 2024ರ ವರೆಗೆ ವಿಸ್ತರಿಸಲಾಯಿತು. ಟಿ20 ವಿಶ್ವಕಪ್ ನಂತರವೂ ರಾಹುಲ್ ದ್ರಾವಿಡ್ ಕೋಚ್ ಆಗಿ ಉಳಿಯಲು ಬಯಸಿದರೆ, ಅವರು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ…

Read More

ಬೆಂಗಳೂರು:- ಜೆ.ಬಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ತೃತೀಯ ಲಿಂಗಿ ಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಓರ್ವ ಮಹಿಳೆಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. https://ainlivenews.com/for-three-days-friends-and-family-members-are-not-allowed-to-visit-revanna/ 51 ವರ್ಷದ ಪ್ರೇಮ ಆರೋಪಿ ಮಹಿಳೆ ಎನ್ನಲಾಗಿದೆ. ಇದೇ ಮೇ. 3ರಂದು ಜೆ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್​ ಮಂಜ ನಾಯ್ಕ್ ಎಂಬ ತೃತೀಯ ಲಿಂಗಿ ಕೊಲೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಕುರಿತು ಪೊಲೀಸರು ಮೊದಲಿಗೆ UDR ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ಈ ಹಿನ್ನೆಲೆ ತೃತೀಯ ಲಿಂಗಿ ಜೊತೆ ವಾಸವಿದ್ದ ಮಹಿಳೆ ಪ್ರೇಮ ಎಂಬುವವರನ್ನು ಬಂಧಿಸಿದ್ದ ಪೊಲೀಸರು, ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಮಹಿಳೆ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾರೆ. ‘ಪತಿ ಮೃತರಾದ ಮೇಲೆ 20 ವರ್ಷದಿಂದ ತೃತೀಯ ಲಿಂಗಿಯ ಜೊತೆ ವಾಸವಿದ್ದ ಮಹಿಳೆ ಪ್ರೇಮಾ, ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಇತ್ತ ಮೃತ ಮಂಜಿ…

Read More

ಬೆಂಗಳೂರು:- ಸರ್ಕಾರಿ ರಜೆ ಇರುವ ಹಿನ್ನೆಲೆ ಮೂರು ದಿನ ಹೆಚ್ ಡಿ ರೇವಣ್ಣ ಭೇಟಿಗೆ ಆಪ್ತರು, ಕುಟುಂಬಸ್ಥರಿಗೆ ಅವಕಾಶ ಇಲ್ಲ ಎನ್ನಲಾಗಿದೆ. https://ainlivenews.com/electricity-accident-man-dies-after-being-hit-by-a-wire/#google_vignette ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಚಡಪಡಿಸುತ್ತಿದ್ದಾರೆ. ರಾತ್ರಿ ನಿದ್ರೆ ಇಲ್ಲದೆಯೇ ಹೈರಾಣಾಗಿದ್ದಾರೆ. ಇದರ ಮಧ್ಯೆ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಆಪ್ತರು, ಕುಟುಂಬಸ್ಥರಿಗೆ ರೇವಣ್ಣ ಭೇಟಿಗೆ ಅವಕಾಶವಿಲ್ಲ. ಆಪ್ತರ ಭೇಟಿಯಿಂದ ತನ್ನ ದುಗುಡ ಹೇಳಿಕೊಳ್ಳುತ್ತಿದ್ದರು. ಆ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅದಕ್ಕೂ ಸರ್ಕಾರಿ ರಜೆ ಅಡ್ಡಿಯಾಗಿದೆ ಇನ್ನೂ ಬಸವನಗುಡಿಯಲ್ಲಿರುವ ಹೆಚ್​​.ಡಿ.ರೇವಣ್ಣ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Read More

ಕೊಪ್ಪಳ:- ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ಜರುಗಿದೆ. https://ainlivenews.com/background-of-basava-jayanti-march-of-farmer-friendly-rasus-in-gadag/ ಮೃತ ಈರಪ್ಪ, ಮೇಕೆಗಳನ್ನು ಮೇಯಿಸಿಕೊಂಡು ಇಡೀ ಕುಟುಂಬವನ್ನ ತಾನೇ ಸಾಕುತ್ತಿದ್ದ. ನಿನ್ನೆ ತನ್ನ ಮೇಕೆಗಳನ್ನು ಹೊಡೆದುಕೊಂಡು, ಗ್ರಾಮದ ಹೊರವಲಯಕ್ಕೆ ಹೋಗಿದ್ದ ಈರಪ್ಪ, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಆದರೆ, ಈರಪ್ಪನ ಮೇಕೆಗಳು ಮನೆಗೆ ಬಂದಿದ್ದವು. ಈ ಹಿನ್ನಲೆ ಕುಟುಂಬದವರು ಮತ್ತು ಗ್ರಾಮಸ್ಥರು ಈರಪ್ಪನಿಗಾಗಿ ನಿನ್ನೆ ಸಂಜೆಯಿಂದ ಹುಡುಕಾಟ ನಡೆಸಿದ್ದರು. ಆದ್ರೆ, ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಈರಪ್ಪ, ಗ್ರಾಮದ ಹೊರವಲಯದಲ್ಲಿರುವ ಮರದ ಕೆಳಗೆ ಶವವಾಗಿ ಪತ್ತೆಯಾಗಿದ್ದ. ಕೃಷಿ ಜಮೀನಿನಲ್ಲಿರುವ ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿದ ಪರಿಣಾಮ, ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ. ತನ್ನ ಮೇಕೆಗಳಿಗೆ ತಪ್ಪಲು ಹಾಕುವ ಉದ್ದೇಶದಿಂದ ಬನ್ನಿ ಮರವೇರಿದ್ದ ಈರಪ್ಪ, ಟೊಂಗೆಗಳನ್ನು ಕತ್ತರಿಸಿದ್ದ. ಆದ್ರೆ, ಟೊಂಗೆಗಳ ಸಮೀಪವೇ ಇದ್ದಿದ್ದ ಹೈಟೆನ್ಷನ್ ವೈಯರ್​ಗೆ ಟೊಂಗೆಗಳು ಟಚ್ ಆಗಿದ್ದರಿಂದ, ವಿದ್ಯುತ್ ಪ್ರವಹಿಸಿ, ಈರಪ್ಪ ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೀಗಾಗಿ ಈರಪ್ಪನ…

Read More

ಗದಗ: ಅಕ್ಷಯ ತೃತೀಯ ಹಿನ್ನೆಲೆ ಗದಗನಲ್ಲಿ ಜನ್ರು ಚಿನ್ನ ಖರೀದಿಯಲ್ಲಿ ತೊಡಗಿದ್ದಾರೆ. https://ainlivenews.com/march-of-farmer-friendly-rasus-in-gadag/#google_vignette ಗದಗ ನಗರದ ಸರಾಫ್ ಬಜಾರ್ ನಲ್ಲಿ ಜನವೋ ಜನ ತುಂಬಿದ್ದು, ಚಿನ್ನದ ಅಂಗಡಿಗಳು ಫುಲ್ ರಶ್ ಆಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ಬೆಲೆ ಗಗನಕ್ಕೇರಿದ್ರೂ ಕೂಡಾ ಚಿನ್ನ ಪ್ರೀಯರು ಮಾತ್ರ ಚಿನ್ನ ಖರೀದಿಯಲ್ಲಿ ತೊಡಗಿದರೋ ದೃಶ್ಯಗಳು ಸಾಮಾನ್ಯವಾಗಿವೆ. ಅಕ್ಷಯ ತೃತೀಯ ಚಿನ್ನ ಖರೀದಿಗೆ ಪ್ರಾಶಸ್ತ್ಯವಾದ ದಿನವಾಗಿದ್ದು ಮಹಿಳೆಯರು ವಿವಿಧ ಚಿನ್ನಾಭರಣ ಖರೀದಿಸಿ ಸಂತಸ ಪಡ್ತಿದ್ದಾರೆ. ತಮಗಿಷ್ಟವಾದ ಆಭರಣಗಳನ್ನು ಸೆಲೆಕ್ಟ್ ಮಾಡಿ ಕೊಂಡುಕೊಂಡ್ರು. ನಾವು ಪ್ರತಿವರ್ಷ ಚಿನ್ನ ಖರೀದಿ ಮಾಡ್ತೇವೆ ಅದೇ ರೀತಿ ಈ ವರ್ಷವೂ ಕೂಡಾ ಚಿನ್ನ ಖರೀದಿಸಿದ್ದು ಸಂತಸವಾಗಿದೆ‌, ಈ ದಿನ ಚಿನ್ನ ಖರೀದಿಸಿದ್ರೆ ಒಳ್ಳೇದಾಗತ್ತೆ ಮುಂದೆಯೂ ಕೂಡಾ ಹೆಚ್ಚೆಚ್ಚು ಚಿನ್ನ ಖರೀದಿಸಬಹುದಾದ ಪ್ರಾಶಸ್ತ್ಯ ದಿನವಾಗಿದೆ ಹಾಗಾಗಿ ಈ ದಿನ ಚಿನ್ನ ಖರೀದಿಗೆ ಒಳ್ಳೇದು ಅಂದ್ರು.

Read More

ಗದಗ:- ಗಂಜೀ ಬಸವೇಶ್ವರ ಜಾತ್ರೆ ಹಾಗೂ ಬಸವ ಜಯಂತಿ ಹಿನ್ನೆಲೆ ಗದಗನಲ್ಲಿ ರೈತಮಿತ್ರ ರಾಸುಗಳ ಮೆರವಣಿಗೆ ನಡೆದಿದೆ. ಗದಗ ನಗರದ ಪ್ರಮುಖ ಬೀದಿಗಳಲ್ಲಿ ಜೋಡೆತ್ತು ಮತ್ತು ಹೋರಿಗಳ ಮೆರವಣಿಗೆ ನಡೆದಿದೆ. ಬಿರು ಬಿಸಿಲಿನಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎತ್ತುಗಳಿಗೆ ಸಿಂಗರಿಸಿ ಬಸವೇಶ್ವರರ ಭಾವಚಿತ್ರ ಕಟ್ಟಿ ಮೆರವಣಿಗೆ ಮಾಡಲಾಗಿದೆ. ಮುಂಗಾರು ಪ್ರಾರಂಭಕ್ಕೂ ಮುನ್ನ ಸಂಭ್ರಮದಿಂದ ಗಂಜೀ ಬಸವೇಶ್ವರ ಜಾತ್ರೆಯನ್ನು ಜನತೆ ಆಚರಿಸಿದ್ದಾರೆ. ಆ ಮೂಲಕ ಮಳೆ ಬೇಳೆ ಚೆನ್ನಾಗಿ ಆಗಲಿ, ಒಳ್ಳೆ‌ ಫಸಲು ಬರಲಿ, ಬೆಳೆದ ಬೆಳೆಗಳಿಗೆ ಒಳ್ಳೇ ದರ ಸಿಗಲಿ ಎಂದು ರೈತಾಪಿ ವರ್ಗ ಮನವಿ ಮಾಡಿದ್ದಾರೆ.

Read More

ಹುಬ್ಬಳ್ಳಿ: ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿರುವ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ನಡೆದಿದೆ. https://ainlivenews.com/ladies-are-you-getting-a-mustache-too/ ಹೌದು..ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ಕಾಣಿಸಿಕೊಂಡ ಅಪಾರ ಪ್ರಮಾಣದ ಹೊಗೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡು,ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಗಾಬರಿಯಿಂದ ಬ್ಯಾಂಕ್ ಕಟ್ಟಡದಿಂದ ಸಾರ್ವಜನಿಕರು ಹೊರ ಬಂದಿದ್ದು, ಹೊಗೆಯಿಂದ ಆತಂಕಗೊಂಡ‌ ಜನರು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

Read More

ಕೆಲವು ಯುವತಿಯರು ಮತ್ತು ಮಹಿಳೆಯರು ಮುಖದ ಕೂದಲು ಬೆಳೆಯಬಹುದು. ಇದರಿಂದ ಅವರು ಆತಂಕಗೊಳ್ಳುತ್ತಾರೆ. ಅನಗತ್ಯ ಕೂದಲನ್ನು ತೆಗೆದುಹಾಕಲು ಒದ್ದಾಡುತ್ತಾರೆ. ಆದರೆ ಸರಿಯಾಗಿ ಮುಖದ ಕೂದಲು ತೆಗೆಯುವುದು ಹೇಗೆ ಎಂದು ತಿಳಿಯುವುದು ತುಂಬಾ ಕಷ್ಟ. https://ainlivenews.com/sit-to-probe-complaint-against-devarajegowda-g-parameshwar/#google_vignette ಏಕೆಂದರೆ ವ್ಯಾಕ್ಸಿಂಗ್, ಶೇವಿಂಗ್, ಥ್ರೆಡಿಂಗ್ ಹೀಗೆ ಹಲವು ವಿಧಾನಗಳು ಲಭ್ಯವಿವೆ. ಆದರೆ ಇವುಗಳಲ್ಲಿ ಉತ್ತಮ ಯಾವುದು ಎಂದು ತಿಳಿಯಲು ಕಷ್ಟವಾಗಬಹುದು. ಆದರೆ ನೀವು ಮನೆಯಲ್ಲಿಯೇ ಕೆಲವು ಸರಳ, ಸುರಕ್ಷಿತ ಮತ್ತು ಅಗ್ಗದ ವಿಧಾನ ಅನುಸರಿಸುವ ಮೂಲಕ ಮುಖದ ಕೂದಲು ಸುಲಭವಾಗಿ ತೆಗೆದು ಹಾಕಬಹುದು. ಅರಿಶಿನವು ಉರಿಯೂತದ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಹಾಲು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಮುಖದ ಮೇಲೆ ಬೆಳೆಯುವ ಕೂದಲು ಕಿರುಚೀಲಗಳನ್ನು ಸಡಿಲಗೊಳಿಸಿ ಕೂದಲು ತೆಗೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಬಟ್ಟಲಿನಲ್ಲಿ 3 ಚಮಚ ಅರಿಶಿನ ಮತ್ತು 1 ಚಮಚ ಹಾಲನ್ನು ಬೆರೆಸಿ ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ…

Read More

ಬೆಂಗಳೂರು:- ದೇವರಾಜೇಗೌಡ ವಿರುದ್ಧ ದೂರನ್ನು SIT ವಿಚಾರಿಸಿಕೊಳ್ಳುತ್ತೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ. https://ainlivenews.com/arvind-kejriwal-granted-interim-bail-till-june-1/#google_vignette ಸಂತ್ರಸ್ತೆಯರಿಗೆ ಬೆದರಿಕೆ ಕರೆಗಳು ಬರುತ್ತಿದ್ದರೆ ಅಥವಾ ಅವರನ್ನು ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನ ನಡೆಯುತ್ತಿದ್ದರೆ ಅವರು ಎಸ್ಐಟಿ ಗಮನಕ್ಕೆ ತರಬೇಕು ಇಲ್ಲವೇ ರಾಷ್ಟ್ರೀಯ ಮಹಿಳಾ ಅಯೋಗಕ್ಕೆ ದೂರು ಸಲ್ಲಿಸಬೇಕೆಂದು ಹೇಳಿದರು. ಒಕ್ಕಲಿಗ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಪ್ರೋಸೀಜರ್ ಪ್ರಕಾರ ಮಾಡಬೇಕಿರುವುದನ್ನೆಲ್ಲ ಅವರು ಮಾಡುತ್ತಾರೆ. ಅವರ ದಿನವಹಿ ತನಿಖೆಯನ್ನೆಲ್ಲ ಮಾದ್ಯಮದವರಿಗೆ ಹೇಳುತ್ತಾ ಕೂರಲಾಗಲ್ಲ ಎಂದು ಹೇಳಿದರು. ದೇವರಾಜೇಗೌಡ ವಿರುದ್ಧ ಎಫ್ಐಆರ್ ಆಗಿರುವ ವಿಚಾರದಲ್ಲೂ ಗೃಹ ಸಚಿವ ಸಮಾಧಾನದಿಂದ ಉತ್ತರ ನೀಡಲಿಲ್ಲ. ಅದನ್ನೆಲ್ಲ ಎಸ್ಐಟಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದಷ್ಟೇ ಎಂದರು.

Read More

ದೆಹಲಿ:- ದೆಹಲಿ ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ. https://ainlivenews.com/the-fake-shiv-sena-is-dreaming-of-burying-me-in-the-mud/ ಹಾಗೂ ಜೂನ್​​ ಎರಡಕ್ಕೆ ಶರಣಾಗುವಂತೆ ತಿಳಿಸಿದೆ. ದೆಹಲಿ ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​​ ಅವರಿಗೆ ಮದ್ಯಂತಾರ ಜಾಮೀನು ನೀಡುವ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​​​ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ ಎಂದು ಹೇಳಲಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಚುಣಾವಣಾ ಪ್ರಚಾರಕ್ಕಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬರಲಿದ್ದಾರೆ

Read More