ಟೆಲ್‍ಅವಿವ್: ಗಾಜಾ ಆಸ್ಪತ್ರೆಯಲ್ಲಿ (Gaza Hospital) ಸರಿಸುಮಾರು 1,000 ಜನರನ್ನು ಮತ್ತು ರೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಹಮಾಸ್ ನ ಹಿರಿಯ ಕಮಾಂಡರ್‍ನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ (Israel Military) ಹೇಳಿದೆ. ಈ ಸಂಬಂಧ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಎನ್ನ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಹ್ಮದ್ ಸಿಯಾಮ್ ( Ahmed Siam) ಎಂಬಾತ ಹಮಾಸ್ ನ ನಾಸೆರ್ ರಾಡ್ವಾನ್ ಕಂಪನಿಯಲ್ಲಿ ಕಮಾಂಡರ್ ಆಗಿದ್ದ. ಈತ ದಾಳಿಗಳಲ್ಲಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡಿದ್ದಾನೆ ಎಂದು ಪೋಸ್ಟ್ ಮಾಡಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಕಳೆದ ತಿಂಗಳು ಗಾಜಾದಲ್ಲಿನ ಹಮಾಸ್ ವಿರುದ್ಧ ತನ್ನ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸಿದ ನಂತರ, ಪ್ಯಾಲಿಸ್ತೀನಿ ಗುಂಪು ಯಹೂದಿ ರಾಷ್ಟ್ರದ ಮೇಲೆ ದೊಡ್ಡ ದಾಳಿಯನ್ನು ಪ್ರಾರಂಭಿಸಿದಾಗ ಅಕ್ಟೋಬರ್ 7 ರ ದಾಳಿಯಲ್ಲಿ ಭಾಗಿಯಾಗಿದ್ದ ಹಲವಾರು ಹಮಾಸ್ ಕಾರ್ಯಕರ್ತರನ್ನು ಇಸ್ರೇಲ್ ಪಡೆಗಳು ಕೊಂದಿವೆ. ಈ ಯುದ್ಧದಲ್ಲಿ ಇಸ್ರೇಲ್‍ನಲ್ಲಿ ಸುಮಾರು 1,200 ಜನರನ್ನು ಕೊಂದರೆ, ಗಾಜಾದಲ್ಲಿ 10,000 ಕ್ಕೂ ಹೆಚ್ಚು ಜನರು ಪ್ರಾಣ…
Author: AIN Author
ಬೆಂಗಳೂರು: ಉದ್ಯಮಿಗೆ 5 ಕೋಟಿ ವಂಚಿಸಿ ಜೈಲು ಪಾಲಾಗಿರುವ ವಂಚಕಿ ಚೈತ್ರಾ ಮೇಲೆ ಜೈಲಿನಲ್ಲಿನ ಮಹಿಳಾ ಖೈದಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. https://ainlivenews.com/26-people-were-injured-in-a-single-day-firecracker-explosion-in-bangalore-yesterday/ ವಂಚನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ದಿನಕಳೆಯುತ್ತಿರುವ ಚೈತ್ರ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರೋ ಮಾಹಿತಿ ಲಭ್ಯವಾಗಿದ್ದು ರಾಷ್ಟ್ರಗೀತೆ ವಿಚಾರದಲ್ಲಿ ಜಗಳ ನಡೆದಿದೆ ಜಗಳ ಹಲ್ಲೆಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಚೈತ್ರಾ ಹಾಗೂ ಮೂವರು ಸ್ಥಳೀಯ ಖೈದಿಗಳಿ ಮೇಲೆ ಆಫ್ರಿಕನ್ ಮಹಿಳಾ ಕೈದಿಗಳು ಹಲ್ಲೆ ಮಾಡಿರೋ ಮಾಹಿತಿ ದೊರೆತಿದೆ. ಮಹಿಳಾ ವಿಚಾರಣಾಧೀನ ಖೈದಿಗಳ ಬ್ಯಾರಕ್ನಲ್ಲಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಚೈತ್ರಾ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.
ದಾವಣಗೆರೆ: ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗಲೆಂದು ಹೋರಾಟ ಮಾಡ್ತಿದ್ದಾರೆ. ಪಂಚಮಸಾಲಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲಿದ್ದೇವೆ ಎಂದು ಹೇಳಿದ್ದಾರೆ. ಡಿಸೆಂಬರ್ 23, 24 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಎರಡು ಲಕ್ಷ ಜನರು ಸೇರಲಿದ್ದಾರೆ. ವೀರಶೈವ ಲಿಂಗಾಯತ ಸಮಾವೇಶದಲ್ಲಿ ಚರ್ಚೆ ಮಾಡುತ್ತೇವೆ ಎಂದು ಶಾಮನೂರು ತಿಳಿಸಿದ್ದಾರೆ.
ನವದೆಹಲಿ:- ಸುಪ್ರೀಂ ಕೋರ್ಟ್ ನ ಆದೇಶವಿದ್ದರೂ ದೀಪಾವಳಿ ಪ್ರಯುಕ್ತ ದೆಹಲಿ ಜನರು ಪಟಾಕಿ ಹೊಡೆದಿದ್ದು, ಮಾಲಿನ್ಯ ಮಿತಿ ಮೀರಿದೆ. ಹಲವು ಸ್ಥಳಗಳಲ್ಲಿ ಜನರು ಗುಂಪುಗೂಡಿ ಪಟಾಕಿ ಹಚ್ಚಿದ್ದು, ರವಿವಾರ ಸಂಜೆ ನಾಲ್ಕು ಗಂಟೆಯಿಂದ ತಡರಾತ್ರಿಯವರೆಗೆ ಪಟಾಕಿ ಸದ್ದು ಕೇಳಿಸಿದೆ. ದೆಹಲಿಯ ಶಹಪುರ್ ಜಾಟ್, ಹೌಜ್ ಖಾಸ್, ಡಿಫೆನ್ಸ್ ಕಾಲೋನಿ, ಛತ್ತರ್‌ಪುರ್, ಕೈಲಾಶ್ ಪೂರ್ವ, ಮಂದಿರ್ ಮಾರ್ಗ್ ಮತ್ತು ಪಹರ್‌ಗಂಜ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪಟಾಕಿಗಳಿಂದ ದೊಡ್ಡ ಶಬ್ದಗಳು ಕಂಡುಬಂದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿಯ ತೀವ್ರತೆ ಕಡಿಮೆಯಾಗಿತ್ತು. ಹಲವರು ಮನೆಯಿಂದ ಹೊರಬರದೆ ಈ ಬಾರಿ ದೀಪಾವಳಿ ಆಚರಿಸಿದರು.
ಬೆಳಗಾವಿ:- ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಘಟನೆ ಜರುಗಿದೆ. ಕಾಲೋನಿಯ ಯುವಕರಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಮನೆಗಳ ಮೇಲೆ ಮೃತನ ಕುಟುಂಬಸ್ಥರು ಕಲ್ಲು ತೂರಿ ಆಕ್ರೋಶ ಹೊರಹಾಕಿದ್ದಾರೆ. 25 ವರ್ಷದ ಶಾನೂರ್ ಅಲಿಯಾಸ್ ಸಂತೋಷ ಪೂಜಾರಿ ಹತ್ಯೆಯಾದ ಯುವಕ. ಐದಾರು ಮಂದಿ ದುಷ್ಕರ್ಮಿಗಳು ಶಾನೂರ್ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇದರಿಂದ ಕೆರಳಿದ ಶಾನೂರ್ ಕುಟುಂಬಸ್ಥರು, ಆರೋಪಿಗಳ ಮನೆ ಮೇಲೆ ಕಲ್ಲು ತೂರಿದ್ದು, ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗೋಕಾಕ್ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೂರು ಡಿಆರ್ ತುಕಡಿ, ನಾಲ್ಕು ಮಂದಿ ಸಿಪಿಐ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಿವಮೊಗ್ಗ: ಬಿಜೆಪಿ ಕತೆ ಮುಗಿದಿದೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರು ಮತ್ತೆ ಗೆಲ್ಲುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (Sharanaprakash Patil) ಹೇಳಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದರು. ಶಾಸಕರನ್ನು ಖರೀದಿಸಿ ಬಿಜೆಪಿಯವರು ರಾಜ್ಯದಲ್ಲಿ ಸರ್ಕಾರ ರಚಿಸಿದ್ದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಬಿಜೆಪಿಯವರು ದೇಶದಲ್ಲಿ ಅದೆಷ್ಟೋ ಚುನಾಯಿತ ಸರ್ಕಾರ ಕೆಡವಿದೆ. ಜನರು ಬಿಜೆಪಿಯನ್ನ ರಿಜೆಕ್ಟ್ ಮಾಡಿದ್ದಾರೆ, ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. 40 ಪರ್ಸೆಂಟ್ ಸರ್ಕಾರ ಅಂತಾನೆ ಹೆಸರಾಗಿತ್ತು, ಹಣ ಲೂಟಿ ಮಾಡಿದರು ಎಂದರು. ಪಿಎಸ್ಐ ಪರೀಕ್ಷಾ ಹಗರಣ ಬಯಲು ಮಾಡಿದ್ದೇ ಪ್ರಿಯಾಂಕ್ ಖರ್ಗೆ. ಕೆಇಎ ಪರೀಕ್ಷಾ ಅಕ್ರಮ ಸಂಬಂಧ ಆರ್.ಡಿ.ಪಾಟೀಲ್‌ನನ್ನು ಬಂಧಿಸಲಾಗಿದೆ. ಆರ್.ಡಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೆ ನಂಟಿದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದರು.
ಬೆಂಗಳೂರು: ನಗರದಲ್ಲಿ ನಿನ್ನೆ ಒಂದೇ ದಿನ ಪಟಾಕಿ ಸಿಡಿದು ನಾಲ್ವರು ಮಕ್ಕಳು ಸೇರಿದಂತೆ 26 ಜನರಿಗೆ ಗಾಯವಾಗಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 22 ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾರಾಯಣ ನೇತ್ರಾಲಯದ 22 ಜನರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಭಾನುವಾರ ಸಂಜೆಯಿಂದಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯದಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 4 ಪ್ರಕರಣ ಪೈಕಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಪೆಟ್ಟು ಬಿದ್ದ ಕಾರಣ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ, ನಾರಾಯಣ ನೇತ್ರಾಲಯದಲ್ಲಿ ಒಂದೇ ದಿನಕ್ಕೆ 22 ಪ್ರಕರಣ ಪೈಕಿ 10 ಮಂದಿ ಕಣ್ಣಿಗೆ ಗಾಯವಾಗಿದ್ದು 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆಮ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇವರಲ್ಲಿ ಇಬ್ಬರಿಗೆ…
ಗದಗ:- ದೀಪಾವಳಿ ಹಬ್ಬದ ಹಿನ್ನೆಲೆ, ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದಗ ಎಪಿಎಂಸಿ ಹೂವಿನ ಮಾರುಕಟ್ಟೆ ಫುಲ್ ರಶ್ ಆಗಿದ್ದು, ಎಲ್ಲಿ ನೋಡಿದ್ರೂ ಜನವೋ ಜನ. ಹೂಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಇನ್ನೂ ಹಬ್ಬದ ಹಿನ್ನೆಲೆ, ಚೆಂಡು, ಸೆವಂತಿ, ಗಲಾಟೆ, ಗುಲಾಬಿ ಹೂಗಳ ದರ ಹೆಚ್ಚಾಗಿದೆ. ದುಬಾರಿ ಬರೆಯ ನಡುವೆಯೂ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆಗೆ ಗದಗ ಜನ ಸಿದ್ದವಾಗುತ್ತಿದ್ದಾರೆ.
ನೀರಿನ ಬಾಟಲಿಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ರಯಾಣ ಮಾಡುವಾಗ, ಸಭೆ ಸಮಾರಂಭಗಳಲ್ಲಿ ನಾವು ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ. ನೀರಿನ ಬಾಟಲ್ ಕ್ಯಾಪ್‌ಗಳಿಗೆ ನೀಲಿ ಬಣ್ಣದ ಕ್ಯಾಪ್‌ಗಳನ್ನು ಏಕೆ ಬಳಸಲಾಗುತ್ತದೆ ? ಇದರ ಹಿಂದಿನ ಅರ್ಥವೇನು? ಈಗ ಪ್ರತಿಯೊಂದು ಬಣ್ಣದ ಅರ್ಥವನ್ನು ತಿಳಿಯೋಣ. ನೀರಿನ ಬಾಟಲಿಯ ಮೇಲೆ ನೀಲಿ ಬಣ್ಣದ ಕ್ಯಾಪ್ ಇದ್ದರೆ ಖನಿಜಯುಕ್ತ ನೀರನ್ನು ಸೂಚಿಸುತ್ತದೆ. ಈ ನೀಲಿ ಕ್ಯಾಪ್ ನೀರಿನ ಬಾಟಲಿಗಳಲ್ಲಿನ ನೀರು ಖನಿಜಯುಕ್ತ ನೀರು ಎಂದು ಹೇಳಲಾಗುತ್ತದೆ. ಇನ್ನು ಕೆಲವು ಬಾಟಲಿಗಳಿಗೆ ಬಿಳಿ ಮತ್ತು ಹಸಿರು ಬಣ್ಣಗಳ ಕ್ಯಾಪ್ ಗಳಿರುವುದು ಕಂಡು ಬರುತ್ತದೆ. ಆದರೆ ಇದರರ್ಥ ಹಸಿರು ಬಣ್ಣದ ಮುಚ್ಚಳವಿದ್ದರೆ ಬಾಟಲಿಯ ನೀರಿಗೆ ಹೆಚ್ಚುವರಿ ರುಚಿಗಳನ್ನು ಸೇರಿಸಲಾಗಿದೆ. ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿನ ಜೊತೆಗೆ ಎಲೆಕ್ಟ್ರೋಲೈಟ್‌ಗಳಂತಹ ರುಚಿಗಳನ್ನು ಸೇರಿಸುತ್ತವೆ. ಅಂತಹ ನೀರಿನ ಬಾಟಲಿಗಳ ಮೇಲಿನ ಕವರ್ ಅನ್ನು ನೀವು ನೋಡಿದರೆ, ನಿಮಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನೀರಿಗೆ ಸೇರಿಸಲಾದ ಸುವಾಸನೆಗಳನ್ನು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಕೆಲವು…
ಕಾರವಾರ: ಯಲ್ಲಾಪುರದಲ್ಲಿ ಬೈಎಲೆಕ್ಷನ್ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಶಕ್ತಿ, ಧೈರ್ಯ ಇದ್ದಾಗ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಲ ಪದಾಧಿಕಾರಿಗಳನ್ನು ತೆಗೆದಿದ್ದರು. ಈಗ ವಾಪಸ್ ಅದೇ ಸ್ಥಾನ ನೀಡಲಾಗಿದೆ, ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪಕ್ಷದ ತೀರ್ಮಾನವಾಗಿದ್ದರಿಂದ ಪ್ರಶ್ನಿಸುವ ಸ್ಥಾನದಲ್ಲಿ ನಾನಿಲ್ಲ. ಪದಾಧಿಕಾರಿ ಹುದ್ದೆಯಿಂದ ತೆಗೆದಿದ್ದು ಏಕೆ? ಮತ್ತೆ ತೆಗೆದುಕೊಂಡಿದ್ದು ಏಕೆ? ಇದನ್ನು ಯಾರು ಮಾಡಿದ್ದಾರೋ ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಕ್ಷೇತ್ರದ ಜನತೆ ಹೊರತಾಗಿ ನನ್ನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ, ಕೇಡರ್ ಬೇಸ್ ರಾಜಕಾರಣಿ. ಜನ ನನ್ನನ್ನು ಕಡೆಗಣಿಸಬಹುದು, ನಾನು ಯಾವ ನಾಯಕರಿಗೂ ಹೆದರುವುದಿಲ್ಲ. ಬರ ಹಿನ್ನೆಲೆಯಲ್ಲಿ ಈ ಬಾರಿ ಕದಂಬೋತ್ಸವ ನಡೆಸುವ ಸಾಧ್ಯತೆ ಕ್ಷೀಣಿಸಿದೆ ಎಂದರು.…