ಶಿವಮೊಗ್ಗ: ಬಿಜೆಪಿ ಕತೆ ಮುಗಿದಿದೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರು ಮತ್ತೆ ಗೆಲ್ಲುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (Sharanaprakash Patil) ಹೇಳಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದರು. ಶಾಸಕರನ್ನು ಖರೀದಿಸಿ ಬಿಜೆಪಿಯವರು ರಾಜ್ಯದಲ್ಲಿ ಸರ್ಕಾರ ರಚಿಸಿದ್ದರು.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಬಿಜೆಪಿಯವರು ದೇಶದಲ್ಲಿ ಅದೆಷ್ಟೋ ಚುನಾಯಿತ ಸರ್ಕಾರ ಕೆಡವಿದೆ. ಜನರು ಬಿಜೆಪಿಯನ್ನ ರಿಜೆಕ್ಟ್ ಮಾಡಿದ್ದಾರೆ, ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. 40 ಪರ್ಸೆಂಟ್ ಸರ್ಕಾರ ಅಂತಾನೆ ಹೆಸರಾಗಿತ್ತು, ಹಣ ಲೂಟಿ ಮಾಡಿದರು ಎಂದರು. ಪಿಎಸ್ಐ ಪರೀಕ್ಷಾ ಹಗರಣ ಬಯಲು ಮಾಡಿದ್ದೇ ಪ್ರಿಯಾಂಕ್ ಖರ್ಗೆ. ಕೆಇಎ ಪರೀಕ್ಷಾ ಅಕ್ರಮ ಸಂಬಂಧ ಆರ್.ಡಿ.ಪಾಟೀಲ್ನನ್ನು ಬಂಧಿಸಲಾಗಿದೆ. ಆರ್.ಡಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೆ ನಂಟಿದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದರು.