ಕಾರವಾರ: ಯಲ್ಲಾಪುರದಲ್ಲಿ ಬೈಎಲೆಕ್ಷನ್ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಶಕ್ತಿ, ಧೈರ್ಯ ಇದ್ದಾಗ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಲ ಪದಾಧಿಕಾರಿಗಳನ್ನು ತೆಗೆದಿದ್ದರು. ಈಗ ವಾಪಸ್ ಅದೇ ಸ್ಥಾನ ನೀಡಲಾಗಿದೆ, ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಪಕ್ಷದ ತೀರ್ಮಾನವಾಗಿದ್ದರಿಂದ ಪ್ರಶ್ನಿಸುವ ಸ್ಥಾನದಲ್ಲಿ ನಾನಿಲ್ಲ. ಪದಾಧಿಕಾರಿ ಹುದ್ದೆಯಿಂದ ತೆಗೆದಿದ್ದು ಏಕೆ? ಮತ್ತೆ ತೆಗೆದುಕೊಂಡಿದ್ದು ಏಕೆ? ಇದನ್ನು ಯಾರು ಮಾಡಿದ್ದಾರೋ ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಕ್ಷೇತ್ರದ ಜನತೆ ಹೊರತಾಗಿ ನನ್ನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ, ಕೇಡರ್ ಬೇಸ್ ರಾಜಕಾರಣಿ. ಜನ ನನ್ನನ್ನು ಕಡೆಗಣಿಸಬಹುದು, ನಾನು ಯಾವ ನಾಯಕರಿಗೂ ಹೆದರುವುದಿಲ್ಲ. ಬರ ಹಿನ್ನೆಲೆಯಲ್ಲಿ ಈ ಬಾರಿ ಕದಂಬೋತ್ಸವ ನಡೆಸುವ ಸಾಧ್ಯತೆ ಕ್ಷೀಣಿಸಿದೆ ಎಂದರು.