ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಪಾಪ ಏನೂ ಕೆಲಸ ಇಲ್ಲ ಅನಿಸುತ್ತೆ. ಆರೋಪಗಳನ್ನೂ ಮಾಡುವುದನ್ನೇ ಅವರ ಕೆಲಸವಾಗಿ ಮಾಡಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಪಾಪ ಏನೂ ಕೆಲಸ ಇಲ್ಲ. ಯತೀಂದ್ರ ಅವರು ಕೆಡಿಪಿ ಸದಸ್ಯರಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜನ ಸಂಪರ್ಕ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ” ಎಂದರು. ಕುಮಾರಸ್ವಾಮಿ ಅವರು ಯತೀಂದ್ರ ಕುರಿತು ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲಾದರೂ ವರ್ಗಾವಣೆ ಅಂತ ಪದ ಇದೆಯಾ? ಲಂಚದ ಬಗ್ಗೆ ಎಲ್ಲಿ ಮಾತನಾಡಿದ್ದಾರೆ? ಸುಮ್ಮನೇ ಪ್ರಚಾರ ಮಾಡಿ ನಮ್ಮ ಹುಡುಗನನ್ನು ಲೀಡರ್ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು
Author: AIN Author
ಬೆಂಗಳೂರು : ಪಕ್ಷಕ್ಕೆ ನನ್ನದೂ ದುಡಿಮೆ, ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ನನ್ನ ಅಭಿಪ್ರಾಯವನ್ನ ಮುಂದೆ ತಿಳಿಸುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನ ಹೊರಹಾಕಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರ ಸಂಗತಿಗಳು ಆಗುತ್ತೆ. ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ ನಡೆಯುತ್ತಿರುತ್ತೆ. ಆದರೆ, ಕಾಂಗ್ರೆಸ್ ಸೇರುವ ಅವಶ್ಯಕತೆ ನನಗೆ ಈಗ ಇಲ್ಲ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಕಾರ್ಯಕ್ರಮ ಇದೆ. ಹಿಂದಿನ ಶ್ರೀಗಳು ಹೇಳಿದ್ದಂತೆ ಕುಟುಂಬದಿಂದ ಕೆಲಸ ಮಾಡಿಸಿದ್ದಂತೆ, ಅದರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಿದ್ಧಗಂಗಾ ಮಠದಲ್ಲಿ ಸಮಾರಂಭದಲ್ಲಿ ಶಕ್ತಿ ಪ್ರದರ್ಶನವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಮಠದಲ್ಲಿ ಕಾರ್ಯಕ್ರಮ ಮಾಡಿ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ನನಗಿಲ್ಲ. ಸಹಜವಾಗಿ ಉದ್ಘಾಟನೆಗೆ ಆಡಳಿತದಲ್ಲಿರುವವರು…
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಂದೆ ಜೊತೆ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಬರೆದಿರುವ ಹೆಚ್‌ಡಿ ಕುಮಾರಸ್ವಾಮಿ, ಕಾಸಿಗಾಗಿ ಹುದ್ದೆ ಉರುಫ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವೀಡಿಯೋ ತುಣುಕೇ ಸಾಕ್ಷಿ ಎಂದು ಕೆಂಡ ಕಾರಿದ್ದಾರೆ. ಹೆಚ್‌ಡಿಕೆ ಟ್ವೀಟ್‌ನಲ್ಲೇನಿದೆ? ಕಾಸಿಗಾಗಿ ಹುದ್ದೆ ಉರುಫ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ…
ಬೆಂಗಳೂರು: ಲಗ್ಗೆರೆ ಬಳಿ ಸುಮಾರು 30 ಕಾರುಗಳ ಗಾಜನ್ನು ಪುಡಿ ಮಾಡಿದ್ದ ಆರು ಜನ ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು (Police) ಬಂಧಿಸಿದ್ದಾರೆ ಏರಿಯಾದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಕಿಡಿಗೇಡಿಗಳ ಗುಂಪು ಮುಖವಾಡ ಧರಿಸಿ ಬೈಕ್‍ನಲ್ಲಿ ಬಂದು ರಾಡ್ ಮತ್ತು ಲಾಂಗ್‍ನಿಂದ ಕಾರಿನ ಗಾಜನ್ನು ಪುಡಿಗೈದಿದ್ದರು. ಬಳಿಕ ಜನ ಹೊರಗೆ ಬರುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ಕಳ್ಳ ಮಣಿ ಹಾಗೂ ರಾಬರಿ ಸೋಮನ ಗ್ಯಾಂಗ್‍ನ ಸಹಚರರು ಎಂದು ತಿಳಿದು ಬಂದಿದೆ ಆರೋಪಿಗಳು ಗಾಂಜಾ ಹಾಗು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೃತ್ಯದ ಬಳಿಕ ಆರೋಪಿಗಳು ಬೇರೆ ಬೇರೆಯಾಗಿ ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಶಾಸಕ ಮುನಿರತ್ನ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ…
ಬೆಂಗಳೂರು: ಯತೀಂದ್ರ ಅವರು ಮಾತನಾಡಿದ್ದು ಸಿಎಸ್ಆರ್ ಫಂಡ್ ಬಗ್ಗೆ ಎಂದು ಸಿಎಂ ಮತ್ತು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದ CSR ಫಂಡಿದ್ದೋ? ವರುಣ ಕ್ಷೇತ್ರದ್ದೋ? ಎಂದು ಕೇಳಿದ್ದಾರೆ. ಸಿಎಸ್ಆರ್ ಫಂಡ್ ಆಗಿದ್ದರೆ ವರುಣ ಕ್ಷೇತ್ರದ ಬಿಇಓ ಕಳಿಸಿರಬೇಕಲ್ಲ. ಮೈಸೂರು ಡಿಡಿಪಿಐ ಲಿಸ್ಟ್ ಇರಬೇಕಲ್ಲ ಹೊರಗೆ ಇಡಿ ಅದನ್ನ. ಪಾಪ ಸಿಎಂ ಕಚೇರಿಗೆ ಬಂದು ಅದನ್ನ ಮಗನಿಗೆ ಕೇಳಿಕೊಂಡು ಮಾಡಬೇಕಾ? ಇಷ್ಟು ಭಂಡತನ ಬೇಡ. ಹಿಂದೆ ನಿಮ್ಮ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈಗ ಹಳೆಯ ಸಿದ್ದರಾಮಯ್ಯ ಅಲ್ಲ ಅಂತ ನಿಮ್ಮವರೇ ಹೇಳುತ್ತಿದ್ದಾರೆ ಎಂದರು.
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ (Rakshit Shetty) ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ವೊಂದರ ಜೊತೆ ಮಾತನಾಡಿರುವ ಅವರು, ‘ಯಾವ ನಟಿಯದ್ದೂ ಹಾಗೆ ಆಗಬಾರದು. ಇಂತಹ ಪ್ರಕರಣಗಳಿಗೆ ಸರಕಾರ ಬೇಗ ಸ್ಪಂದಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ವೈರಲ್ ಆಗುವ ಮುಂಚೆಯೇ ಕ್ರಮಕ್ಕೆ ಮುಂದಾಗಬೇಕು ಎಂದು ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ. ಈ ಹಿಂದೆಯೂ ಇವರ ಇಂಥದ್ದೇ ವಿಡಿಯೋ ಶೇರ್ ಆಗಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಕುರಿತು ದೂರು ದಾಖಲಾಗಿದ್ದರೂ, ದುರುಳರು ಅಂಜದೇ ಮತ್ತೊಂದು ಡೀಪ್‌ಫೇಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕುರಿತು ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ (Deepfake) ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆದೆಹಲಿ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ವಿಶೇಷ…
ಬೆಂಗಳೂರು: ಅಧಿಕಾರ ಇದ್ದಾಗ ಲಂಚ-ಕಮಿಷನ್ ವ್ಯವಹಾರದಲ್ಲಿ ಮೂರುಹೊತ್ತು ಮುಳುಗೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲದರಲ್ಲಿಯೂ ಲಂಚದ ವ್ಯವಹಾರಗಳೇ ಕಾಣಿಸುತ್ತಿದೆ. ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆದಿರುವ ನನ್ನ ಮತ್ತು ನನ್ನಮಗನ ನಡುವಿನ ಪೋನ್ ಸಂಭಾಷಣೆಗೆ ವರ್ಗವಾವಣೆಯಲ್ಲಿ ವಸೂಲಿಯ ಕತೆ ಕಟ್ಟಿ ಕುಮಾರಸ್ವಾಮಿ ಕುಣಿದಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ಕ್ಷುಲಕ ನಡವಳಿಕೆ ಬಗ್ಗೆ ನಾನು ಕನಿಕರವನ್ನಷ್ಟೇ ವ್ಯಕ್ತಪಡಿಸಬಲ್ಲೆ. https://ainlivenews.com/it-raid-on-food-industries-in-bangalore/ ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಡಾ.ಯತೀಂದ್ರ ಅವರು ಆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಸಿಎಸ್ ಆರ್ ಹಣವನ್ನು ಬಳಸಿಕೊಂಡು ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಫಲಾನುಭವಿ ಶಾಲೆಗಳ ಪಟ್ಟಿ ಬಗ್ಗೆ ನನ್ನ ಜೊತೆ ಮಾತನಾಡಿದ್ದರು. ಕ್ಷೇತ್ರದ ಜನರ ಎದುರಿನಲ್ಲಿಯೇ ನಡೆದಿರುವ ಈ ಸಂಭಾಷಣೆಯನ್ನು ವರ್ಗಾವಣೆಗಾಗಿ ವಸೂಲಿ ಎಂಬ ಅರ್ಥ ಬರುವ ಹಾಗೆ ತಿರುಚಿರುವ ಕುಮಾರಸ್ವಾಮಿ ಅವರು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಕುಮಾರಸ್ವಾಮಿಯವರು ರಾಜಕೀಯಕ್ಕೆ…
ತೆಲುಗಿನ ಬಿಗ್ ಬಾಸ್‌ಗೆ (Bigg Boss Telugu 7) ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತೆ ಇದೆ. ನಾಗಾರ್ಜುನ ಅಕ್ಕಿನೇನಿ ನಿರೂಪಣೆಯಲ್ಲಿ ಶೋ ಮುನ್ನುಗ್ಗುತ್ತಿದೆ. ಇದೀಗ ತೆಲುಗಿನ ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಲರವ ಶುರುವಾಗಿದೆ. ಕನ್ನಡದ ಕಂಪು ತೆಲುಗು ವೇದಿಕೆಯಲ್ಲಿ ಪಸರಿಸುತ್ತಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ ಈ ಬಾರಿ ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಯೊಳಗೆ ಇರುವ ಸದಸ್ಯರನ್ನು ಮಾತನಾಡಿಸಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಶೋಭಾ ಅವರ ತಂದೆ ಮಗಳ ಜೊತೆ ಮಾತನಾಡಿದಾಗ, ಶೋಭಾ ಅವರು, ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಪ್ರಿಯಾಂಕಾ ಜೈನ್ (Priyanka Jain) ಜೊತೆ ಮಾತನಾಡಿ, ಅವರು ಕೂಡ ಕನ್ನಡದವರು ಎಂದರು. ಆಗ ಪ್ರಿಯಾಂಕಾ, ನಿಮ್ಮನ್ನು ನೋಡಿದರೆ ನನ್ನ ಅಪ್ಪನ ನೆನಪಾಗುತ್ತದೆ ಎಂದರು. ಬಳಿಕ ಶೋಭಾ ತಂದೆ ಎಲ್ಲರಿಗೂ ಶುಭಾಶಯ ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲುಗು ಬಿಗ್‌ಬಾಸ್‌ನಲ್ಲಿಯೂ ಕನ್ನಡ ಮಾತನಾಡಿದ್ದಕ್ಕೆ ಕನ್ನಡದ ಪ್ರೇಕ್ಷಕರು ಮೆಚ್ಚುಗೆ…
ವರ್ತೂರು ಸಂತೋಷ್ ಮದುವೆ ಆಗಿರುವ ಪ್ರಸಂಗ ಮನೆ ಹೊರಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ರೆ, ಇತ್ತ ಮನೆಯೊಳಗೆ ತನಿಷಾ- ಸಂತೋಷ್ ಲವ್ವಿ ಡವ್ವಿ ಜೋರಾಗಿ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ಕಣ್ರೋ ಅಂದ್ರು ನಮ್ರತಾ ಬಿಟ್ಟು ಬಿಡದೇ ವರ್ತೂರು ಸಂತೋಷ್ (Varthur Santhosh) ಹೆಸರು ಹೇಳಿ ತನಿಷಾರ (Tanisha Kuppanda) ಕಾಲೆಳೆದಿದ್ದಾರೆ. ದೊಡ್ಮನೆಗೆ ನಿನ್ನೆ ಸಂತೋಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದರು. ಆಗ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ ಎಂದು ಪಟ್ಟು ಹಿಡಿದಿದ್ದ ಸಂತೋಷ್‌ಗೆ ಬುದ್ಧಿ ಹೇಳಿ ಮನವಿ ಮಾಡಿದ್ದರು. ಈ ವೇಳೆ, ಅವರ ಸಂಭಾಷನೆ ಕೇಳಿ ನಮ್ರತಾ (Namratha Gowda) ಅಚ್ಚರಿ ಪಟ್ಟಿದ್ದಾರೆ. ಯಾವ ಭಾಷೆ ಇದು ಅರ್ಥನೇ ಆಗ್ತಿಲ್ಲ ಕೇಳೋಕೆ ವಿಚಿತ್ರವಾಗಿದೆ ಎಂದು ತನಿಷಾ ಬಳಿ ಹೇಳಿದ್ದಾರೆ. ಅದಕ್ಕೆ ತನಿಷಾ, ಅದು ಅವರ ಆಡು ಭಾಷೆ ಕನ್ನಡ, ತೆಲುಗು, ತಮಿಳು ಮಿಕ್ಸ್ ಆಗಿದೆ ಎಂದಿದ್ದಾರೆ. ಅದಕ್ಕೆ ಅದು ಅರ್ಥವೇ ಆಗೋದಿಲ್ಲ ಎಂದು ಮಾತನಾಡಿದ್ದಾರೆ. ಅದಕ್ಕೆ, ಹೀಗಾದ್ರೆ ಮುಂದೆ…
ಬೆಂಗಳೂರು: ಲಿಸ್ಟ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ನನಗೆ ಆ ಬಗ್ಗೆ ಗೊತ್ತಿಲ್ಲ, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ. ವಿಡಿಯೋ ಮಾಧ್ಯಮದವರದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಈ ಹಿಂದೆ ನಂದೇ ಧ್ವನಿಯನ್ನು ಮಹಾರಾಷ್ಟ್ರದ ಒಬ್ಬ ಮಿಮಿಕ್ರಿ ಮಾಡಿದ್ದ. ಆಗ ಆತನನ್ನು ಅರೆಸ್ಟ್ ಮಾಡಿಸಿದ್ದೆವು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ, ಬದಲಾವಣೆ ಮಾಡಬಹುದು ಎಂದರು. https://ainlivenews.com/what-did-cm-siddaramaiah-say-about-his-son/ ಬಿಜೆಪಿ ಹಾಗೂ ಜೆಡಿಎಸ್ನಿಂದ ಮಾಜಿ ಶಾಸಕರು ಹಾಗೂ ಮುಖಂಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ಬಿಜೆಪಿಯಿಂದ ಹಾಗೂ ಜೆಡಿಎಸ್ನಿಂದಲೂ ಕಾಂಗ್ರೆಸ್ಗೆ ಬರುತ್ತಾರೆ. ಕಾದುನೋಡಿ ಲೋಕಸಭಾ ಚುನಾವಣೆ ವೇಳೆಗೆ ಎಲ್ಲಾ ಸ್ವಚ್ಛವಾಗುರುತ್ತದೆ ಎಂದರು. ಬಹಳಷ್ಟು ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದಾಗ ಅಂಕಿ ಸಂಖ್ಯೆ ಬಗ್ಗೆ ಮಾಹಿತಿ ನೀಡಿ ಎಂದು ಮಾಧ್ಯಮದವರು ಕೇಳಿದರು. ಇದಕ್ಕೆ ಎಂಬಿ ಪಾಟೀಲರು, ಬಹಳಷ್ಟು ಜನರು ಎಂದು ಹೇಳುತ್ತೇವೆ ಎಷ್ಟು ಬೇಕಾದಷ್ಟು ಬರೆದುಕೊಳ್ಳಿ ಎಂದರು.