ಮ್ಯಾಥ್ಯೂಸ್ ಟೈಮ್ಡ್ ಔಟ್ ವಿವಾದದ ಬಗ್ಗೆ ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಆಟಗಾರ ಕೂಡ ನಿಯಮ ಪಾಲನೆ ಮಾಡುವುದು ಅಗತ್ಯ ನಿಯಮ ಪಾಲಿಸಿದ್ದಕ್ಕಾಗಿ ಯಾರನ್ನೂ ದೂರಬಾರದು ಎಂದು ಹೇಳಿದ್ದಾರೆ. ಈ ಮೂಲಕ ಟೈಮ್ಡ್ ಔಟ್ ತೀರ್ಪಿಗೆ ಮನವಿ ಸಲ್ಲಿಸಿದ ಬಾಂಗ್ಲಾ ನಾಯಕ ಶಕೀಬ್ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ‘ಎಲ್ಲರೂ ಭಿನ್ನ ಯೋಚನೆ ಹೊಂದಿರುತ್ತಾರೆ. ನಾವೆಲ್ಲರೂ ವಿಚಿತ್ರ ಪ್ರಾಣಿಗಳು. ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ ಯೋಚಿಸುತ್ತೇವೆ. ನಿಜವಾದ ರೀತಿಯಲ್ಲಿ ಸರಿ ಅಥವಾ ತಪು$್ಪ ಎಂಬುದು ಯಾವುದೂ ಇರುವುದಿಲ್ಲ. ಭಿನ್ನ ಯೋಚನೆ ಹೊಂದಿರುವುದು ಕೂಡ ತಪ್ಪಲ್ಲ. ಯಾರಾದರೂ ನಿಯಮ ಪ್ರಕಾರ ನಡೆದುಕೊಳ್ಳಲು ಬಯಸಿದರೆ ಅದನ್ನು ದೂರುವಂತಿಲ್ಲ. ನೀವು ಬೇಕಿದ್ದರೆ ಅದರಂತೆ ನಡೆದುಕೊಳ್ಳಬೇಕಾಗಿಲ್ಲ. ಆದರೆ ಅದಕ್ಕಾಗಿ ಬೇರೆಯವರನ್ನು ದೂರುವುದು ಸರಿಯಲ್ಲ’ ಎಂದು ದ್ರಾವಿಡ್ ಹೇಳಿದ್ದಾರೆ.
Author: AIN Author
ಕೋಲಾರ: ನಗರದಲ್ಲಿ ನ.3ರಂದು ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶರನ್ನು ಅಮಾನತ್ತು ಮಾಡಲಾಗಿದೆ. ಗುರುವಾರ ಕೋಲಾರದಲ್ಲಿ ಕೊಲೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ರವಿಕಾಂತೇಗೌಡ, ಈ ಪ್ರಕರಣದಲ್ಲಿನ ಆರೋಪಿಗಳು ಈ ಹಿಂದೆ ಅದೇ ಬಾಲಕನ ಮೇಲೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಆರೋಪಿ ಬೇರೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ. ನಂತರ ಬಾಲಾಪರಾಧಿ ಕೇಂದ್ರದಿಂದ ಹೊರಗೆ ಬರುತ್ತಾನೆ. ಹೊರ ಪ್ರಕರಣ ರೂವಾರಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾನೆ. ಈತನ ಚಟುವಟಿಕೆಗಳನ್ನ ನಿಗಾವಹಿಸುವಲ್ಲಿ ಪೊಲೀಸರು ವಿಫಲ ಆಗಿದ್ದಾರೆ. ಅಪ್ರಾಪ್ತರ ಮನಸ್ಥಿತಿಯನ್ನು ನೋಡಿ ವಯಸ್ಕರೆಂದು ತಿಳಿಯಬಹುದು: ಹಿಂದಿನ ದ್ವೇಷದ ಹಿನ್ನಲೆಯಲ್ಲಿ ಕಳೆದ ವಾರ ಪಾರ್ಕ್‌ನಿಂದ ಬಾಲಕನ ಅಪಹರಣ ಮಾಡಿ, ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಎಂಟು ಜನ ಆರೋಪಿಗಳಲ್ಲಿ ಏಳು ಜನರನ್ನ ಬಂಧಿಸಿದ್ದೇವೆ. ಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನ ಮಾಡಲಾಗಿತ್ತು.…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ (Terror Funding) ಮಾಡಿದ ಪ್ರಮುಖ ಪ್ರಕರಣವೊಂದನ್ನು ಎಸ್‍ಐಎ ಅಧಿಕಾರಿಗಳು (State Investigation Agency) ಭೇದಿಸಿದ್ದಾರೆ. ಪ್ರಕರಣ ಸಂಬಂಧ ಹಿರಿಯ ಪೊಲೀಸ್ (Police) ಅಧಿಕಾರಿ ಮತ್ತು ಪ್ರಮುಖ ಉದ್ಯಮಿ ಸೇರಿದಂತೆ ಶಂಕಿತರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಭಯೋತ್ಪಾದಕರಿಗೆ ಹಣ ನೀಡಿದ ಇತ್ತೀಚಿನ ಬಹುದೊಡ್ಡ ಪ್ರಕರಣವಾಗಿದೆ. ಕಾಶ್ಮೀರದ ತನಿಖಾ ಸಂಸ್ಥೆ ಎಸ್‍ಐಎ ಈ ಪ್ರಕರಣದ ಶಂಕಿತರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://ainlivenews.com/great-job-opportunity-in-hindustan-aeronautics-limited-posting-in-bangalore/ ಪ್ರಕರಣದಲ್ಲಿ 85 ಕೋಟಿ ರೂ. ಮೊತ್ತದ ಹಣವನ್ನು ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಬಳಸಲಾಗಿದೆ ಎಂಬ ಶಂಕೆ ಇದೆ. ವಿಚಾರಣೆಯ ವೇಳೆ 85 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಸುಮಾರು 22 ಸ್ಥಳಗಳಲ್ಲಿ ಅಧಿಕಾರಿಗಳು…
ಬಂಗಾರಪೇಟೆ :- ಪ್ರಧಾನಿ ಮೋದಿಯಿಂದ ದೇಶ ದಿವಾಳಿ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನೇ ದಿವಾಳಿ ಮಾಡಿದೆ ಎಂದು ಅಸಂಬದ್ಧವಾಗಿ ಟೀಕಿಸುವ ಪ್ರಧಾನಿ ಮೋದಿ ದೇಶವನ್ನೇ ದಿವಾಳಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನಮ್ಮ ದೇಶದ ಸಾಲ ₹53.11 ಲಕ್ಷ ಕೋಟಿ ಅಷ್ಟೇ ಇತ್ತು. ಆದರೆ ಇದೀಗ ಅದು 125 ಲಕ್ಷ ಕೋಟಿ ರು.ವರೆಗೂ ಮುಟ್ಟಿದೆ ಎಂದರು. ಇನ್ನು, ಪದೇ ಪದೇ ಕಾಂಗ್ರೆಸ್ ಹೆಚ್ಚು ದಿನ ಇರುವುದಿಲ್ಲ ಎಂದು ಮೋದಿ ಅಲ್ಲಲ್ಲಿ ಭವಿಷ್ಯ ನುಡಿಯುತ್ತಾರೆ. ಅದು ಕೇವಲ ಅವರ ಹಗಲುಗನಸು ಎಂದೂ ತಿರುಗೇಟು ನೀಡಿದರು.
ಬೆಂಗಳೂರು :-ಪಟಾಕಿ ಅವಘಡಗಳು ನಗರದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಅವಘಡಗಳು ಸಂಭವಿಸುತ್ತಿದ್ದು, ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ವರದಿಯಾಗಿದೆ. 7 ವರ್ಷದ ಬಾಲಕ ಪಟಾಕಿಯಿಂದಾದ ಗಾಯದ ಕಾರಣ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಿಜಲಿ ಪಟಾಕಿ ಸಿಡಿತ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಕಿಡಿ ಸಿಡಿದು, ಎರಡೂ ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಬಾಲಕನ ಕಣ್ಣಿನ ಒಳಗೆ ರಕ್ತ ಹೆಪ್ಪುಗಟ್ಟಿದೆ. ಇದರಿಂದ ಕ್ಯಾಟರ್‍ಯಾಕ್ಟ್ ಸಮಸ್ಯೆಯೂ ಕಂಡುಬಂದಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ, ನೋಡುವವರಿಗೂ ಅಪಾಯವಿರುತ್ತದೆ. ಆದ್ದರಿಂದ ಪಟಾಕಿಯಿಂದ ಅಂತರ ಕಾಯ್ದುಕೊಳ್ಳಬೇಕು’ ಎಂದು ಮಿಂಟೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬೆಂಗಳೂರು:- ಕೆಲ ದಿನಗಳಿಂದ ಇಳಿಕೆಯಾಗುತ್ತಲೇ ಇದ್ದ ಚಿನ್ನದ ದರ ಇದ್ದಕ್ಕಿದಂತೆ ದುಪ್ಪಟ್ಟು ಏರಿಕೆಯಾಗಿದೆ. ಬೆಳ್ಳಿ ದರ ತುಸು ಇಳಿಕೆಯಾಗಿದೆ. ಆದರೆ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆ ಸ್ವಲ್ವವೇ ಸ್ವಲ್ಪ ಕಡಿಮೆಯಾಗಿದೆ. ಇಂದು ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ.. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ. 22 ಕ್ಯಾರೆಟ್ ಚಿನ್ನದ ದರ 1 gram: ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,555 ರೂ. ಆಗಿದೆ. ನಿನ್ನೆ 5,600 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 45 ರೂ. ಇಳಿಕೆಯಾಗಿದೆ. 8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 44,440 ರೂ ಇದೆ. ನಿನ್ನೆ 44,800 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 360 ರೂ. ಕಡಿಮೆಯಾಗಿದೆ. 10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 55,550 ರೂ. ನೀಡಬೇಕು. ನಿನ್ನೆ 56,000 ರೂ…
ಮಾಸ್ಕೋ: ಪ್ರೇಯಸಿ (Lover) ಮೇಲೆ ಅತ್ಯಾಚಾರಗೈದು, 111 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪ್ರೇಮಿಯೊಬ್ಬನನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ. ಯುವಕನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ (Russia Military) ಸೇರಿ ಹೋರಾಟ ಮಾಡಲು ನಿರ್ಧರಿಸಿದ ನಂತರ ವ್ಲಾಡಿಮಿರ್ ಪುಟಿನ್, ಆತನ ಅಪರಾಧವನ್ನ ಕ್ಷಮಿಸಿದ್ದಾರೆ. ವ್ಲಾಡಿಸ್ಲಾವ್ ಕಾನ್ಯುಸ್ ಎಂಬಾತ ತನ್ನ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬಾಕೆಯನ್ನು ಕ್ರೂರವಾಗಿ ಕೊಂದು 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆತ ಸೇನೆಗೆ ಸೇರಲು ಬಯಸಿದ್ದರಿಂದ ಶಿಕ್ಷೆ ಅವಧಿಗೆ ಒಂದು ವರ್ಷ ಮುಂಚಿತವಾಗಿಯೇ ಅಪರಾಧಿಯನ್ನ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಕ್ಯಾನ್ಸನ್ ತನ್ನ ಗೆಳತಿಗೆ ಸತತ ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದ. ಅಷ್ಟು ಸಾಲದ್ದಕ್ಕೆ 111 ಬಾರಿ ಚಾಕುವಿನಿಂದ ಇರಿದಿದ್ದ, ನಂತ್ರ ಕೇಬಲ್ ವಯರ್‌ನಿಂದ ಕತ್ತು ಹಿಸುಕಿ ಕೊಂದಿದ್ದ. ಆಕೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಲು ಸಾಕಷ್ಟು ಬಾರಿ ಕರೆ ಮಾಡಿದ್ದರು.…
ಬೆಂಗಳೂರು: ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವರ ಮಲ್ಲನಾಯಕನಹಳ್ಳಿಯಲ್ಲಿ ನಡೆದ ಜಲಾನಯನ ಮೇಳ ಹಾಗೂ ಫಲಾನುಭವಿಗಳಿಗೆ ಬೃಹತ್ ಪ್ರಮಾಣದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 223 ತಾಲ್ಲೂಕಿನಲ್ಲಿ ಬರ ಇದೆ .17000 ಕೋಟಿ ರೂ ಪರಿಹಾರ ಕೋರಿದ್ದೇವೆ . ಕೇಂದ್ರದಿಂದ ಈ ವರೆಗೂ ಯಾವುದೇ ನೆರವು ,ಪೂರಕ ಸ್ಪಂದನೆ ದೊರೆತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ರಾಜ್ಯ ಸರ್ಕಾರ ರೈತರ ಪರ 1500 ಕೋಟಿ ವಿಮೆ ಹಣ ಪಾವತಿ ಮಾಡಿದೆ.230 ಕೋಟಿ ವಿಮೆ ರೈತರಿಗೆ ಈಗಾಗಲೇ ಪಾವತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ.ಅಧಿಕಾರಕ್ಕೆ ಬಂದ ಕೂಡಲೆ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ…
ಬೆಂಗಳೂರು:- ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಹೂ-ಹಣ್ಣು, ದೀಪಗಳು ಹಾಗೂ ಆಕಾಶಬುಟ್ಟಿಗಳ ಖರೀದಿ ಬಿರುಸಾಗಿ ಸಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂತು. ಕೆ.ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇ ಶ್ವರ, ಬಸವನಗುಡಿ, ಮಡಿವಾಳ, ಮಾಗಡಿ ರಸ್ತೆ, ವಿಜಯನಗರ ಸೇರಿ ನಗರದ ನಾನಾ ಭಾಗಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆಯಿಂದ ವಾಹನಸವಾರರು ಪರದಾಡುವಂತಾಯಿತು. ಪೂಜೆಗೆ ಬೇಕಾದ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು, ಅಂಗಡಿಗಳಲ್ಲಿ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಆಯುಧಪೂಜೆ ಹಾಗೂ ವಿಜಯದಶಮಿಯಂದು ವಾಹನ ಹಾಗೂ ಅಂಗಡಿ ಮಳಿಗೆಗಳು, ಕಾರ್ಖಾನೆಗಳಲ್ಲಿ ಪೂಜೆ ಮಾಡಿದರೆ, ಹಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಹಾಗಾಗಿ ಅಂಗಡಿಗಳಲ್ಲಿ ಸಿಹಿತಿನಿಸುಗಳ ಖರೀದಿಯೂ ಹೆಚ್ಚಿತ್ತು. ಹೂ ಬೆಳೆಗಾರರಿಗೆ ಸಂಕಷ್ಟ: ಈ ಬಾರಿ ತರಕಾರಿ ಬೆಳೆಗಾರರೆಲ್ಲ ಹೂವಿನ ಬೆಳೆಯತ್ತ ವಾಲಿದ್ದರಿಂದ ಯಥೇಚ್ಚ ಪ್ರಮಾಣದ ಹೂವು ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೂವಿನ ಬೆಲೆ ಸಗಟು ದರದಲ್ಲಿ ಇಳಿಕೆಯಾಗಿದೆ. ಸಗಟು ದರದಲ್ಲಿ ಸೇವಂತಿಗೆ ಕೆ.ಜಿ. ಹೂವಿಗೆ ಕೇವಲ 30-50 ರೂ. ಇದೆ. ಉಳಿದಂತೆ ಕನಕಾಂಬರ, ಮಲ್ಲಿಗೆ,…
2023ರ ಏಕದಿನ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗಳ ಸೋಲು ಕಂಡಿದೆ. ಈ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಯುವ ವೇಗಿ ನವೀನ್ ಉಲ್ ಹಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಷ್ಮತ್‌ಉಲ್ಲಾ ಶಾಹಿದಿ ಸಾರಥ್ಯದ ಅಫಘಾನಿಸ್ತಾನ ಅಜ್ಮತ್ ಉಲ್ಲಾ ಒಮರ್ಜಾಯ್ ಅವರ 97 ರನ್ ಗಳಿಂದ 244 ರನ್ ಗಳಿಸಿದ್ದರು. ಈ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ರಾಸ್ಸೆ ವಾನ್ ಡೆರ್ ದುಸೆನ್ (76* ರನ್) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಗಳ ಗೆಲುವು ಸಾಧಿಸಿತು. ಅಫಘಾನಿಸ್ತಾನ ಪರ ರಶೀದ್ ಖಾನ್ (37ಕ್ಕೆ2) ಹಾಗೂ ಮೊಹಮ್ಮದ್ ನಬಿ (35ಕ್ಕೆ2) ಉತ್ತಮ ಬೌಲಿಂಗ್ ಸಂಯೋಜನೆ ತೋರಿದರೂ ಅಫ್ಘಾನ್ ಸೋಲಿನೊಂದಿಗೆ ವಿಶ್ವಕಪ್ ಪಯಣ ಮುಗಿಸಿದೆ. ಪಂದ್ಯದಲ್ಲಿ ನವೀನ್…