ವಿಜಯಪುರ: ರಾಜ್ಯದಲ್ಲಿ ಜಾತಿ ಗಣತಿ ವರದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಈಗಾಗಲೇ ಜಾತಿ ಗಣತಿಯನ್ನು ಸಿದ್ಧ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಲಿದ್ದಾರೆ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಜಾತಿ ಗಣತಿಯ ಮೂಲ ಪ್ರತಿ ಅಥವಾ ಹಸ್ತಪ್ರತಿ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಾಪತ್ತೆ ಆಗಿಲ್ಲ, ಪತ್ರಿಕೆಗಳಲ್ಲಿ ಹಾಗೇ ವರದಿ ಬಂದಿದೆ. ಇಲಾಖೆ ಅಥವಾ ಆಯೋಗ ಈ ಬಗ್ಗೆ ಕನ್ಪರ್ಮ್ ಮಾಡಿಲ್ಲ. ಹೀಗಾಗಿ ವರದಿ ಸರಿ ಅಲ್ಲ ಎಂದು ಹೇಳಿದರು. ಜಾತಿ ಗಣತಿಗೆ ಒಕ್ಕಲಿಗರು, ಲಿಂಗಾಯತರಿಂದ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗ ಯಾವುದೆ ರೀತಿಯ ವರದಿ ಕೊಟ್ಟಿಲ್ಲ. ಕ್ಯಾಬಿನೆಟ್ ಸಮಿತಿಗೆ ಬಂದಾಗ ಚರ್ಚೆ ಆಗುತ್ತದೆ. ಅಲ್ಲಿವರೆಗೆ ವಾದ-ವಿವಾದ, ಚರ್ಚೆಗಳ ಅಗತ್ಯ ಇಲ್ಲ ಎಂದ ಸಚಿವ ಹೆಚ್ ಕೆ ಪಾಟೀಲ್. ವಿರೋಧದ ಬಗ್ಗೆ ಈಗ ಮಾತನಾಡಲ್ಲ, ಕ್ಯಾಬಿನೆಟ್ನಲ್ಲಿ ಮಾತನಾಡ್ತೇನೆ. ಆ ಬಗ್ಗೆ ಮಾತನಾಡಿದ್ರೆ ಕ್ಯಾಬಿನೆಟ್ ವೇಳೆ ಏನ್ ಮಾತನಾಡಲಿ ಎಂದು ಹೇಳಿದರು.