Author: AIN Author

ದಾವಣಗೆರೆ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ನಾವು ಕೂಡ ಭರ್ಜರಿಯಾಗಿ ತಯಾರಿಯನ್ನ ನಡೆಸಿದ್ದು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಬಿಜೆಪಿ ವಿರುದ್ದ ಸಚಿವ ಈಶ್ವರ್ ಖಂಡ್ರೆ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಮತ್ತು ಮುಂಚೂಣಿ ಮುಖಂಡರ ಸಭೆಯನ್ನ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ಸಚಿವ ಈಶ್ವರ ಖಂಡ್ರೆ ಬಿಜೆಪಿ ವಿರುದ್ಧ ಹರಿಹಾಯ್ದರು. ಈ ಬಾರಿ ಮಳೆಯ ಕೊರತೆಯಿಂದ ಇಡೀ ರಾಜ್ಯವೇ ಬರದಿಂದ ತತ್ತರಿಸಿ ಹೋಗಿದೆ. ಮುಂಗಾರು ಸಂಪೂರ್ಣ ನಷ್ಟವಾಗಿದ್ದು, ಹಿಂಗಾರು ನಷ್ಟವಾಗುವ ಲಕ್ಷಣಗಳಿವೆ. ಬರದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರದ ಪ್ರಸ್ತಾವನೆ ಕಳಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ನಯಾ ಪೈಸೆ ಹಣವನ್ನ ಬಿಡುಗಡೆ ಮಾಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇಂತಹ ಬರ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋರ ಅನ್ಯಾಯ…

Read More

ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್‌, ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್‌ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್‌ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್‌ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ. ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕ್‌ (Pakistan) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 43.3 ಓವರ್‌ಗಳಲ್ಲಿ 244 ರನ್‌ಗಳಿಸಿ ಸರ್ವಪತನ ಕಂಡಿತು. 2021ರ ವಿಶ್ವಕಪ್‌ ಟೂರ್ನಿ ಹಾಗೂ 2023ರ ಏಷ್ಯಾಕಪ್‌ ಟೂರ್ನಿಯಲ್ಲೂ ಪಾಕ್‌ ತಂಡ ನಾಕೌಟ್‌ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು.…

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, “ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತರಲಿ ಎಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ದೇಶದ ಜನತೆಗೆ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.

Read More

ಚಿಕ್ಕಮಕ್ಕಳಿಂದ ಹಿರಿಯ ವಯಸ್ಸಿನವರೆಗೂ ಫೋನ್ ಕ್ರೇಜ್​ ಇದ್ದೆ ಇದೆ. ಚಿಕ್ಕಮಕ್ಕಳು ಫೋನ್​ ತೋರಿಸಿದಾಗ ಮಾತ್ರ ಅನ್ನ ತಿನ್ನುತ್ತಾರೆ. ಆದರೆ ಎರಡು ವರ್ಷದೊಳಗಿನ ಶೇಕಡಾ 90 ರಷ್ಟು ಮಕ್ಕಳು ಸೆಲ್ ಫೋನ್ ನೋಡುತ್ತಾ ತಿನ್ನುತ್ತಿದ್ದಾರೆ ಎಂದು ಅಧ್ಯಯನವೊಂದು ತೋರಿಸಿದೆ. ಮಕ್ಕಳು ತಮ್ಮ ಹೊಟ್ಟೆ ತುಂಬ ತಿನ್ನುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ ಆದರೆ ಎಷ್ಟು ಕ್ರಮೇಣ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. 1) ಸ್ಮಾರ್ಟ್ ಫೋನ್ ಹೆಚ್ಚು ನೋಡಿದರೆ ಮಕ್ಕಳ ಕಣ್ಣುಗಳು ದುರ್ಬಲವಾಗುತ್ತವೆ. 2) ಫೋನ್ ನೋಡುತ್ತಾ ತಿನ್ನುವುದು ಜೀರ್ಣಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತದೆ. 3) ಮಕ್ಕಳು ಸ್ಮಾರ್ಟ್ ಫೋನ್ ಅನ್ನು ಹೆಚ್ಚು ನೋಡುತ್ತಿದ್ದರೆ.. ಮೆದುಳಿನ ಮೇಲೆ ಅದರ ಪರಿಣಾಮ ತೋರಿಸುತ್ತದೆ. ಯಾರೊಂದಿಗೂ ಸರಿಯಾಗಿ ಮಾತನಾಡುವುದಿಲ್ಲ. 4) ಮಕ್ಕಳು ಸೆಲ್ ಫೋನ್ ನೋಡುವುದು ಮತ್ತು ಅನ್ನ ತಿನ್ನುವುದು ತಾಯಿ ಮತ್ತು ಮಗುವಿನ ನಡುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

Read More

ಊಟದ ನಡುವೆ ನೀರು ಕುಡಿಯಬಹುದೇ? ಎನ್ನುವ ಬಗ್ಗೆ ಈಗಾಗಲೇ ಹಲವು ಅಧ್ಯಯನಗಳು ನಡೆದಿವೆ. ತಜ್ಞರು ಕೂಡ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಬನ್ನಿ ನಾವು ಇಂದು ಊಟ ಮಾಡುವಾಗ ನೀರು ಕುಡಿಯುವುದರಿಂದ ಯಾವೆಲ್ಲ ಸಮಸ್ಯೆ ಇದೆ ಎನ್ನುವ ಕುರಿತು ತಿಳಿದುಕೊಳ್ಳೋಣ…. ಊಟಕ್ಕೆ 30 ನಿಮಿಷಗಳ ಮೊದಲು ಮತ್ತು 30 ನಿಮಿಷಗಳ ನಂತರ ಯಾವಾಗಲೂ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಎನ್ನುತ್ತಾ ಆರೋಗ್ಯ ತಜ್ಞರು. 1) ಊಟ ಅಥವಾ ಟಿಫಿನ್ ಸಮಯದಲ್ಲಿ ನೀರು ನೀರು ಕುಡಿದರೆ, ನೀವು ಆಹಾರವನ್ನು ಜಗಿಯುವುದನ್ನು ನಿಲ್ಲಿಸಿ ನುಂಗುತ್ತೀರಿ. ಹೀಗೆ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. 2) ಊಟ ಮಾಡುವಾಗ ನೀರು ಕುಡಿದರೆ ಸ್ವಲ್ಪ ಗಾಳಿಯೂ ಒಳಗೆ ಹೋಗುತ್ತದೆ. ಇದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಗ್ಯಾಸ್, ಉಬ್ಬುವುದು, ಮಲಬದ್ಧತೆ ಮತ್ತು ಬೊಜ್ಜು ಸಹ ಸಾಧ್ಯವಿದೆ. ಊಟ, ಟಿಫಿನ್ ಅಥವಾ ದ್ರವ ಪದಾರ್ಥಗಳನ್ನು ಕುಡಿಯುವುದರಿಂದ ತೂಕ ಹೆಚ್ಚಾಗುವುದರ ಜತೆಗೆ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು…

Read More

ನವದೆಹಲಿ:  ಮಳೆಯಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Air Quality) ಪ್ರಮಾಣ ಸುಧಾರಿಸಿದ್ದು, ಸದ್ಯಕ್ಕೆ ಸಮ-ಬೆಸ (Odd-Even) ಯೋಜನೆ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರೈ (Gopal Rai) ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಯು ಗುಣಮಟ್ಟ ವೃದ್ದಿಯಾಗಿದೆ ಎಂದರು. ಈ ಮೊದಲು ನವೆಂಬರ್ 13 ರಿಂದ ಸಮ ಬೆಸ ಜಾರಿಗೆ ತರಲು ನಿರ್ಧರಿಸಲಾಗಿತ್ತು, ಮಳೆಯಿಂದ ಈ ಪ್ರಸ್ತಾಪ ಕೈಬಿಟ್ಟಿದೆ. ದೀಪಾವಳಿಯ (Deepavali) ನಂತರ ಗಾಳಿಯ ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಗಾಳಿಯ ಗುಣಮಟ್ಟ ಮತ್ತೆ ಹದಗೆಟ್ಟರೆ ಬೆಸ-ಸಮ ಯೋಜನೆಗೆ ಜಾರಿಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.  https://ainlivenews.com/great-job-opportunity-in-hindustan-aeronautics-limited-posting-in-bangalore/ ಇದಕ್ಕೂ ಮುನ್ನ ಸೋಮವಾರ, ಸಚಿವರು ಬೆಸ-ಸಮ ಯೋಜನೆಯನ್ನು ನವೆಂಬರ್ 13 ಮತ್ತು ನವೆಂಬರ್ 20ರ ನಡುವೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಯೋಜನೆಯು ಕಾರುಗಳು ತಮ್ಮ ನೋಂದಣಿ ಸಂಖ್ಯೆಗಳ ಬೆಸ ಅಥವಾ ಕೊನೆಯ ಅಂಕಿಗಳ ಆಧಾರದ ಮೇಲೆ ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

Read More

ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಾನ್ಸ್ ಮಾಸ್ಟರ್ ಮತ್ತು ನಿರ್ದೇಶಕರು ಸಮಂತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಸಮಂತಾ ಕೂಡ ಆ ಹಾಡಿನಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರು ಮಾಡಲಿದ್ದಾರಂತೆ ಸಮಂತ.

Read More

ಬೆಂಗಳೂರು:- ನೂತನ ಬಿಜೆಪಿ ರಾಜ್ಯಾದ್ಯಕ್ಷರಾದ ಬಿವೈ ವಿಜಯೇಂದ್ರ ಅವರು ನಿರ್ಮಲನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದಾರೆ. ವಿಜಯನಗರದ ಆದಿಚುಂಚನಗಿರಿ ಮಠಕ್ಕೇ ಭೇಟಿ ನೀಡಿ ಪೂಜ್ಯ ನಿರ್ಮಲನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಆಯ್ಕೆ ಆಗಿರುವ ಹಿನ್ನೆಲೆ, ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

Read More

ವಾಟ್ಸಪ್ ನೂತನ ಅಪ್ ಡೇಟ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದೆ.ವಾಟ್ಸಪ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಸಕ್ರಿಯಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಡಿಯೊ ಕಾಲ್ ವೇಳೆ ಬಳಕೆದಾರರು, ‘ಶೇರಿಂಗ್’ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಅಪ್ಲಿಕೇಶನ್ ಅಥವಾ ಸಂಪೂರ್ಣ ಪರದೆಯನ್ನು ಹಂಚಿಕೊಳ್ಳುವ ಆಯ್ಕೆ ಮಾಡುವ ಮೂಲಕ ಸ್ಕ್ರೀನ್ ಹಂಚಿಕೆಯನ್ನು ಪ್ರಾರಂಭಿಸಬಹುದು. ಕೆಲಸದ ನಿಮಿತ್ತ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವುದು, ರಜೆ ಕುರಿತು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಮುಂತಾದ ಸಂದರ್ಭ ವಿಡಿಯೊ ಕರೆ ಸಮಯದಲ್ಲಿ ನಿಮ್ಮ ಪರದೆಯ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸ್ಕ್ರೀನ್ ಶೇರಿಂಗ್ ಫೀಚರ್ ನಿಮಗೆ ಅನುಮತಿಸುತ್ತದೆ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Read More

ಹಾಟ್ ತಾರೆ ಸಿಮ್ರನ್ ಕೌರ್ ಸಲಾರ್ ಸಿನಿಮಾದ ಮಾದಕ ಗೀತೆಗೆ ಹೆಜ್ಜೆ ಹಾಕಿದ್ದಾರೆ ಎನ್ನುವ ಮಾಹಿತಿ ತೆಲುಗು ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ. ಅದ್ಧೂರಿ ಸೆಟ್ ನಲ್ಲಿ ಸಿಮ್ರನ್ ಮತ್ತು ಪ್ರಭಾಸ್ ಹಾಟ್ ಹಾಡಿಗೆ ಹೆಜ್ಜೆ ಹಾಕಿದ್ದಾರಂತೆ. ಸಲಾರ್ ಸಿನಿಮಾದ ಹುಕ್ ಸಾಂಗ್ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ತೆಲುಗಿನಲ್ಲಂತೂ ಭಾರೀ ಸುದ್ದಿ ಆಗಿದೆ. ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್  (Prithviraj Sukumaran) ಸಾಥ್ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ. ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ…

Read More