ಆಮ್ಲಾ ಜ್ಯೂಸ್ನಲ್ಲಿ (Amla Juice) ಅನೇಕ ಔಷಧೀಯ ಗುಣಗಳು ಅಡಗಿವೆ. ಆಮ್ಲಾವನ್ನು ವಿಟಮಿನ್ ಸಿ ಸೇರಿದಂತೆ ಅನೇಕ ಪೋಷಕಾಂಶಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದನ್ನು ಬಳಕೆ ಮಾಡುವುದರಿಂದ ಕೂದಲು ಬಲಗೊಳ್ಳುತ್ತದೆ. ಜೊತೆಗೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.
ಇದರ ಹೊರತಾಗಿ ಫೈಬರ್, ಕಬ್ಬಿಣ, ಸತು, ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್ಗಳಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ. ಇದಲ್ಲದೆ ಆಮ್ಲಾ ಜ್ಯೂಸ್ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಆಮ್ಲಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು
- ಮೊಡವೆಗಳನ್ನು ತಡೆಯುತ್ತದೆ
- ಹಾನಿಗೊಳಗಾದ ಅಂಗಾಂಶ ಸುಧಾರಣೆ
- ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ
- ಮೈಬಣ್ಣವನ್ನು ಹೆಚ್ಚಿಸುತ್ತದೆ
- ತಲೆಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ
ಆಮ್ಲ ಜ್ಯೂಸ್ನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆ ಸೌದರ್ಯಕ್ಕೂ ಕೂಡ ಇದು ಪ್ರಯೋಜಕಾರಿ. ನಾವು ಇದನ್ನು ಜ್ಯೂಸ್, ಪೌಡರ್ ಅಥವಾ ಹಸಿಯಾಗಿ ಸೇವಿಸಿದರೂ, ಆಮ್ಲಾ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.