ನೆಲಮಂಗಲ; ನಗರದ ಸೋಲದೇವನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಜರುಗಿದೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ವಿನೋದ್ ರಾಜ್ ತೋಟದ ಬಳಿ ಪ್ರತ್ಯಕ್ಷವಾಗಿದೆ. ತೋಟದ ಮುಂದಿನ ಗೇಟ್ ಬಳಿ ಓಡಾಡಿರುವ ಚಿರತೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಈ ಭಾಗದಲ್ಲಿ ಸಾಕಷ್ಟು ದಿನಗಳಿಂದ ಚಿರತೆ ದಾಳಿ ಮಾಡುತ್ತಿವೆ. ದಾಳಿಯಾದ್ರು ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ.