ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ (Silkyara Tunnel) ಕುಸಿತದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ಹೊರ ತರುವ ರಕ್ಷಣಾ ಕಾರ್ಯಾಚರಣೆ (Rescue Operation) ಮತ್ತಷ್ಟು ವಿಳಂಬವಾಗಿದೆ. https://ainlivenews.com/laser-therapy-soukhy-robotic-ortho-care/ ಡ್ರೀಲಿಂಗ್ ಮಷಿನ್‍ನಲ್ಲಿ ಪದೇ ಪದೇ ದೋಷ ಕಂಡು ಬರುತ್ತಿರುವ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಡ್ರಿಲ್ಲಿಂಗ್ ಮಷಿನ್ ನಲ್ಲಿ ಕಂಡು ಬಂದಿರುವ ತಾಂತ್ರಿಕ ಸಮಸ್ಯೆಯನ್ನು ಪತ್ತೆ ಹಚ್ಚಿ ಸರಿಪಡಿಸಲು ವಿಶೇಷ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಯಂತ್ರವನ್ನು ಸರಿಪಡಿಸಿದ ಬಳಿಕ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಪರಿಸ್ಥಿತಿ ಮೇಲ್ವಿಚಾರಣೆ ಮಾಡಿ ಕೊನೆಯ ಹಂತದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತ ಗತಿಯಲ್ಲಿ ಮತ್ತು ಸಂಪೂರ್ಣ ಎಚ್ಚರಿಕೆಯಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಯಂತ್ರವು ಇಲ್ಲಿಯವರೆಗೆ 46.8-ಮೀಟರ್ ಕೊರೆದಿದ್ದು, ಒಟ್ಟು 57-ಮೀಟರ್ ಕೊರೆದು ಪೈಪ್ ಗಳನ್ನು ಹಾಕುವ ಮೂಲಕ ಪ್ರತ್ಯೇಕ ದಾರಿಯನ್ನು ನಿರ್ಮಿಸಬೇಕಿದೆ. ಯಂತ್ರಕ್ಕೆ ಕಬ್ಬಿಣ ಕವಚ ಅಡ್ಡಿಯಾಗಿದ್ದು ಅದನ್ನು ಕೊರೆಯಲಾಗದ ಯಂತ್ರ ಕೆಟ್ಟು ನಿಲ್ಲುತ್ತಿದೆ.
Author: AIN Author
ಧಾರವಾಡ: ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ (Electric Shock) 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡ ನಗರದ (Dharwad City) ಮದಿಹಾಳ ಸಿದ್ದರಾಮ ಕಾಲೊನಿಯಲ್ಲಿ ನಡೆದಿದೆ. ಶ್ರೇಯಸ್ ಸಿನ್ನೂರ (16) ಮೃತ ಬಾಲಕ. ತನ್ನ ಮನೆಯ ಹಿಂದೆ ಕ್ರಿಕೆಟ್ (Cricket) ಆಡಲು ಹೋಗಿದ್ದು, ಆಟದ ವೇಳೆ ಬಾಲ್ ಹಿಡಿಯಲು ಹೋದಾಗ ಶ್ರೇಯಸ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. https://ainlivenews.com/laser-therapy-soukhy-robotic-ortho-care/ ಶ್ರೇಯಸ್ ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಧಾರವಾಡ ರಾಜೀವ್ ಗಾಂಧಿ ಶಾಲೆಯಲ್ಲಿ SSLC ಓದುತಿದ್ದ. ಸಂಜೆ ಶಾಲೆಯಿಂದ ಬಂದ ಮಗ ಮನೆಯಲ್ಲಿ ಕುಳಿತಾಗ ಗೆಳೆಯ ಆಟಕ್ಕೆ ಕರೆದಿದ್ದಾನೆ. ತಮ್ಮ ಮನೆಯ ಹಿಂದೆ ಕಾಮಗಾರಿ ಪ್ರಗತಿಯಲ್ಲಿದ್ದ ಕಟ್ಟದ ಬಳಿ ಕ್ರಿಕೆಟ್ ಆಡಲು ಹೋದ ಶ್ರೇಯಸ್‌ಗೆ 10 ನಿಮಿಷದಲ್ಲಿ ಕರೆಂಟ್ ಶಾಕ್‌ಗೆ ತಗುಲಿದೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಮಗನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕನ ತಂದೆ ಅಶೋಕ್ ತಿಳಿಸಿದ್ದಾರೆ
ರಾಯಚೂರು : ಜಿಲ್ಲೆ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಸಾಲಬಾಧೆಯಿಂದ ಬೇಸತ್ತು ಜಮೀನಿನಲ್ಲೇ ರೈತ ನೇಣಿಗೆ ಶರಣಾದ ಘಟನೆ ನಡೆದಿದೆ. https://ainlivenews.com/laser-therapy-soukhy-robotic-ortho-care/ ತನ್ನ ಜಮೀನಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಚೆಂದಪ್ಪ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಿಂದ 3 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ನಾಶವಾಗಿತ್ತು. ರೈತ ಚೆಂದಪ್ಪ ಬ್ಯಾಂಕ್, ಖಾಸಗಿಯವರಿಂದ 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ತುಮಕೂರು: ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಆಗಮಿಸಿದ್ದು ಡಾ.ಶಿವಕುಮಾರಶ್ರೀಗಳ ಗದ್ದುಗೆ ದರ್ಶನ ಪಡೆದರು. ನಗರ ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಪತ್ನಿ ಶೈಲಜಾ ಜೊತೆ ಮಠಕ್ಕೆ ಆಗಮಿಸಿರುವ ವಿ.ಸೋಮಣ್ಣ. ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ವಿ.ಸೋಮಣ್ಣ ಬೇಸರವ್ಯಕ್ತಪಡಿಸಿದ್ದಾರೆ. ‘ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧ’ ‘ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು’ 2 ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದ್ರು, ಎಂದು ಸಿದ್ದಲಿಂಗ ಸ್ವಾಮೀಜಿ ಎದುರು ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ್ದಾರೆ https://ainlivenews.com/laser-therapy-soukhy-robotic-ortho-care/ ಪ್ರಧಾನಿ ಮೋದಿ ಅವರನ್ನು ಡಿಜಿ&ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಡಿಸಿ ದಯಾನಂದ್, ಕಮಿಷನರ್ ದಯಾನಂದ್ ಸ್ವಾಗತಿಸಿದರು. HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಹುಬ್ಬಳ್ಳಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಬಿಎಸ್‌ವೈ ಸಂಬಂಧಿ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಚಿಕ್ಕನಗೌಡರ ಮರಳಿ ಬಿಜೆಪಿಗೆ ಹೋದ್ರಾ..? ಹೌದು,,, ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಭೇಟಿಯಾದ ಎಸ್ ಐ ಚಿಕ್ಕನಗೌಡರ, ವಿಜೇಯಂದ್ರ ರಾಜ್ಯಾಧ್ಯಕ್ಷ ಆದ ನಂತರ ಅಭಿನಂದನೆ ಸಲ್ಲಿಸಿದ ಚಿಕ್ಕನಗೌಡ್ರ, ಕುಂದಗೋಳ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಐ. ಚಿಕ್ಕನಗೌಡರ, ಕೇಲ ದಿನಗಳ ಹಿಂದೆ ತಮ್ಮ ಬೆಂಬಲಿಗರ ಜೊತೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಸಧ್ಯ ಏಕಾಏಕಿ ವಿಜೇಯಂದ್ರ ಜೊತೆಗೆ ಕಾಣಿಸಿಕೊಂಡ ಚಿಕ್ಕನಗೌಡರ ಮತ್ತು ಹಿಂಬಾಲಕರು ಮರಳಿ ಮತ್ತೇ ಕಮಲ ಹಿಡಿತಾರಾ ಎಂಬ ಶಂಕೆ ಮೂಡಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್ ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾ ಅಗ್ನಿ.. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಜರ್ನಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಅಗ್ನಿ ಮಾತನಾಡಿ, 5 ಜನ ಸ್ನೇಹಿತರ ನಡುವೆ ನಡೆಯುವ ಕಥೆ. ಕಾಲೇಜ್ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ತಿಳಿಸಿದರು. ನಾಯಕ ದಿನಿ ಮಾತನಾಡಿ, ಅಗ್ನಿ ಅವರು ಕಥೆ ಹೇಳಿದರು. ಇಷ್ಟವಾಯ್ತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬರು ಕಣ್ಣೀರು ಬರುತ್ತದೆ. ಕ್ಲೈಮ್ಯಾಕ್ಸ್ ಗೂ…
ವಿಜಯಪುರ: ಕಳೆದ ಆರೇಳು ತಿಂಗಳುಗಳಿಂದ ಬಂದ್ ಆಗಿದ್ದಂತಹ ಉದ್ಯಾನವ ಮತ್ತೆ ಈಗ ಆರಂಭವಾಗಿದೆ. ಜೊತೆಗ ಉದ್ಯಾನವನಕ್ಕೆ ಹೈಟೇಕ್ ಟಚ್ ಕೂಡಾ ನೀಡಲಾಗಿದೆ. ಈಗ ಅದೆಷ್ಟೋ ಜನ ಪ್ರವಾಸಿಗರು ಒಂದು ದಿನದ ಪಿಕ್ನಿಕ್ ಅಂತಾ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳಿಗೂ ಹಾಟ್ ಫೇವರೇಟ್ ಪ್ಲೇಸ್ ಆಗಿ ಮಾರ್ಪಟ್ಟಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ… https://ainlivenews.com/laser-therapy-soukhy-robotic-ortho-care/ ಹೌದು ವಿಜಯಪುರ ನಗರದ ಹೊರಭಾಗದ ಭೂತನಾಳ ಕೆರೆಯ ಬಳಿಯ ಉದ್ಯಾನವನಕ್ಕೆ ಈಗ ಹೈಟೇಕ್ ಸ್ಪರ್ಷ ನೀಡಲಾಗಿದೆ. ಒಳಗೆ ಹೋದರೆ ಸಾಕು ನವಿಲುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಜೊತೆಗೆ ಒಳಗೆ ಹೋದಂತೆ ಮಂಗಗಳು, ಆನೆ ಸೇರಿದಂತೆ ವಿವಿಧ ಪ್ರಾಣಿಗಳ ಕೆತ್ತನೆ ಕೂಡಾ ಮಾಡಲಾಗಿದೆ. ಇನ್ನೂ ಮಕ್ಕಳಿಗಾಗಿ ಆಟಿಗೆ ಸಾಮಾನುಗಳನ್ನು ಸಹಿತ ಇಲ್ಲಿ ಇಡಲಾಗಿದೆ. ಈಗ ಈ ಉದ್ಯಾನವನಕ್ಕೆ ಹೈ ಟೇಕ್ ಸ್ಪರ್ಷ ನೀಡಲಾಗಿದೆ. ಮೊದಲಿಗಿಂತಲೂ ಈ ಉದ್ಯಾನವನಕ್ಕೆ ಈಗ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ… ಕಳೆದ ಆರೇಳು ತಿಂಗಳು ಗಳ ಕಾಲ…
ತುಮಕೂರು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ವೀರ ಮರಣವನ್ನಪ್ಪಿದ ಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ನಿಜಕ್ಕೂ ಇಂತಹ ದಿನ ಬರುತ್ತೆ ಅಂತಾ ಊಹೆ ಮಾಡಿರಲಿಲ್ಲ. ನಿಜಕ್ಕೂ ಬಹಳ ನೋವಾಗ್ತಿದೆ. ವೀರ ಯೋಧನನ್ನ ಕಳೆದುಕೊಂಡು ನಾಡು ತಬ್ಬಲಿಯಾಗಿದೆ. ದೇವರು ಕುಟುಂಬಕ್ಕೆ ಅವರ ಆಗಲಿಕೆ ನೋವು ಭರಿಸುವ ಶಕ್ತಿ ನೀಡಲಿ. ಅಂತಿಮ ದರ್ಶನದ ಮೂಲಕ ಗೌರವ ಸಮರ್ಪಣೆಗೆ ಬಂದಿದ್ದೇವೆ ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. https://ainlivenews.com/laser-therapy-soukhy-robotic-ortho-care/ ಅಂತಿಮ ದರ್ಶನ ಬಳಿಕ ಬೆಳಗ್ಗೆ 10 ಗಂಟೆಗೆ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ.…