ದಾವಣಗೆರೆ: ಮಂಗನ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಎಕೆ ಕಾಲೋನಿಯಲ್ಲಿ ನಡೆದಿದೆ. ಗುತ್ಯಪ್ಪ ಮಂಗನ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಮೃತ ಗುತ್ಯಪ್ಪನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಭಾಗದಲ್ಲಿ ಕರಡಿ, ಚಿರತೆ, ಮಂಗಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ರೇಣುಕಾಚಾರ್ಯ ಬಳಿ ಹೇಳಿಕೊಂಡರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ರೇಣುಕಾಚಾರ್ಯ ಚರ್ಚಿಸಿದರು.
Author: AIN Author
ಚಾಮರಾಜನಗರ: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ 108 ಬಾಲೆಯರಿಂದ ಹಾಲರವೆ ಅದ್ದೂರಿಯಾಗಿ ನಡೆಯಿತು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಂಬಂಡಿಗೇರಿಯ, ಬಳಿಯ ಹರಿಯುವ ನೀರನ್ನು ಮಡಿಯುಟ್ಟು 108 ಕನ್ಯಾ ಬಾಲೆಯರು ಮಹದೇಶ್ವರ ನ ಜಲಾಭಿಷೇಕಕ್ಕೆ ಕೊಂಡೊಯ್ದರು. ಹಸಿರು ಸೀರೆಯನ್ನುಟ್ಟ ಬಾಲೆಯರು ಭಕ್ತಿಪೂರ್ವಕವಾಗಿ ಹಾಲರವೆ ಮೆರವಣಿಯಲ್ಲಿ ಭಾಗಿಯಾಗಿದ್ದರು. ದೇವಾಲಯದ ಅನೆಯ ಗಜ ನಡೆಯ ಹಿಂದೆ ಹಾಲರವೆ ಮೆರವಣಿಗೆ ನಡೆಯಿತು.ಶ್ರೀಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ, ಸಾಲೂರು ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ಹಾಗೂ ಅರ್ಚಕರ ಸಮ್ಮುಖದಲ್ಲಿ ಹಾಲರವೆ, ಧಾರ್ಮಿಕ ವಿಧಿ ವಿಧಾನಗಳು ನಡೆದವು ಹೋಮ ಜರುಗಿತು. ಬೆಟ್ಟದಲ್ಲಿ ಬೀಡು ಬಿಟ್ಟಿದ್ದ ಸಾವಿರಾರು ಭಕ್ತರು ಹಾಲರವೆ ಮೆರವಣಿಗೆ ಕಣ್ತುಂಬಿಸಿಕೊಂಡರು.ದೇವಾಲಯದ ಗರ್ಭ ಗುಡಿ ವಿವಿಧ ಆಕರ್ಷಿತ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ದೀಪಾವಳಿಯನ್ನು (Deepavali) ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ (Balipadyami) ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ (Bali Maharaja) ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ತಲೆಗೆ ಏರುತ್ತದೆ. ಬಲಿ ರಾಜನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಆತ ಪ್ರೋತ್ಸಾಹ ನೀಡುತ್ತಿರುತ್ತಾನೆ.…
ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ CID ಗೆ ವಹಿಸಿದ ಹಿನ್ನಲೆ ಕಚೇರಿಗೆ ತನಿಖಾಧಿಕಾರಿ SP ರಾಘವೇಂದ್ರ ಹೆಗಡೆ ಎಂಟ್ರಿ ಕೊಟ್ಟಿದ್ದಾರೆ. ನಗರದ ಐವಾನ್ ಶಾಹಿ ಕ್ಯಾಂಪಸ್ ದಲ್ಲಿರುವ CID ಕಚೇರಿಗೆ DYSP ಗಳಾದ ಶಂಕರಗೌಡ ಪಾಟೀಲ್ & ತನ್ವೀರ್ ಜೊತೆ ಆಗಮಿಸಿದ್ರು..ಹೀಗಾಗಿ ಎಲ್ಲ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಸುಧೀರ್ಘ ಚರ್ಚೆ ನಡೆಸಿದ್ರು.
ಚಾಮರಾಜನಗರ: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ಚಾಮರಾಜನಗರ ಜಿಲ್ಲೆಯ ಈ ಗ್ರಾಮಗಳಲ್ಲಿ ದೀಪಾವಳಿ ಆಚರಣೆ ಮಾಡುತ್ತಿಲ್ಲ. ತಾಲೂಕಿನ ನೇನೇಕಟ್ಟೆ ಸುತ್ತ-ಮುತ್ತಲ 7 ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಮಂಗಳವಾರ ಆಚರಿಸುವುದಿಲ್ಲ. ದೀಪಾವಳಿ ಹಬ್ಬ ಬುಧವಾರ ಬಂದರೆ ಮಾತ್ರ ಎಲ್ಲರಂತೆ ಈ 7 ಗ್ರಾಮಗಳ ಜನರು ಹಬ್ಬ ಮಾಡಲಿದ್ದಾರೆ. ಈ ಸಾಲಿನಲ್ಲಿ ದೀಪಾವಳಿ ಹಬ್ಬ ಮಂಗಳವಾರ ಬಂದಿರುವುದರಿಂದ ಹಬ್ಬದ ಕುರುಹು ಈ ಗ್ರಾಮದಲ್ಲಿ ಕಂಡು ಬಂದಿಲ್ಲ. ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ. ದೇಶದಲ್ಲೆಡೆ ಯಾವ ದಿನವಾದರೂ ದೀಪಾವಳಿ ಹಬ್ಬ ಮಾಡಲಿದ್ದಾರೆ. ಆದರೆ ಈ ೭ ಹಳ್ಳಿಗಳಲ್ಲಿ ಮಾತ್ರ ಬುಧವಾರ ಹೊರೆತು ಪಡಿಸಿ ಹಬ್ಬ ಮಾಡಿದರೆ ಏನಾದರೂ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆಯಾಗಿದೆ.
ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ರೈತ ಮಂಜೇಗೌಡ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿತ್ತು. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗೆಯ ಬಾಯಿಗೆ ಈಗಾಗಲೇ ಕರು ನಾಯಿ ಮೇಕೆಗಳು ಆಹಾರವಾಗಿವೆ. https://ainlivenews.com/b-y-vijayendra-met-former-prime-minister-hd-deve-gowda/ ಬಟಿಗನಹಳ್ಳಿ ಮುಂಜನಹಳ್ಳಿ ಸೋಮನಹಳ್ಳಿ ಸಂಬ್ರವಳ್ಳಿ ಹೊಸ ಅಗ್ರಹಾರ ಸೇರಿ ಹಲವು ಕಡೆ ದಾಳಿ ಮಾಡಿತ್ತು. ಇದರ ಚಲನವಲನ ಅಧ್ಯಯನ ಮಾಡಿದ ಅರಣ್ಯಾಧಿಕಾರಿಗಳು, ಮೂರು ದಿನದ ಹಿಂದೆ ಚಿರತೆ ಕಾಣಿಸಿಕೊಂಡಿದ್ದ ರೈತ ಮಂಜೇಗೌಡರ ಜಮೀನಿನಲ್ಲಿ ಬೋನು ಅಳವಡಿಸಿದ್ದರು. ಇದೀಗ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.
ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿನಿ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ. https://ainlivenews.com/sudden-increase-in-air-pollution-in-bangalore-due-to-fireworks/ ಪ್ರಕೃತಿ ಶೆಟ್ಟಿ (20) ಮೃತ ವಿದ್ಯಾರ್ಥಿನಿ, ಬೆಳಗಾವಿ ಮೂಲಕ ಅಥಣಿ ಮೂಲದ ಪ್ರಕೃತಿ ಮೊದಲನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಳು, ನಸುಕಿನ 3 ಗಂಟೆ ವೇಳೆಗೆ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಹಾರಿ ಪ್ರಾಣಕಳೆದು ಕೊಂಡಿದ್ದಾಳೆ. ದಪ್ಪಗಿದ್ದೇನೆ ಎನ್ನುವ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ.
ಮಧುಗಿರಿ;- ಕೇಂದ್ರದ ಬಿಜೆಪಿಗೆ ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯದ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ಬರ ಅದ್ಯಯನ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಿದ ನಂತರವೂ ಕೇಂದ್ರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ’ ಎಂದರು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯದ ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕೀಯಕ್ಕಾಗಿ ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಣ ಕೊಡಿಸುವ ಕೆಲಸ ಮಾಡಬೇಕು ಎಂದರು. https://ainlivenews.com/b-y-vijayendra-met-former-prime-minister-hd-deve-gowda/ ಶೇ 75 ಮಳೆ ಕುಂಠಿತವಾಗಿದೆ. ₹37 ಸಾವಿರ ಕೋಟಿ ನಷ್ಟವಾಗಿದೆ. ಕೆಂದ್ರ ಸರ್ಕಾರಕ್ಕೆ ₹17 ಸಾವಿರ ಕೋಟಿ ನಷ್ಟ ಬರಿಸಿ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಬರ ಪರಿಸ್ಥಿತಿ ವಿವರಿಸಲು ಕೃಷಿ ಸಚಿವ ಕೃಷ್ಣ…
ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿಸುತ್ತಿರುವುದರಿಂದ ಬೆಂಗಳೂರಲ್ಲಿ ವಾಯುಮಾಲಿನ್ಯ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಹಸಿರು ಪಟಾಕಿ ಕಡ್ಡಾಯ ಇದ್ದರೂ ಸಹ ಹಲವಡೆ ರಾಸಾಯನಿಕಯುಕ್ತ ಪಟಾಕಿ ಬಳಕೆಯಾಗುತ್ತಿದೆ. ಇದರಿಂದ ನಗರದ ಹಲವಾರು ಭಾಗಗಳಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟದಲ್ಲಿದೆ. https://ainlivenews.com/a-young-woman-was-dragged-and-harassed-in-the-middle-of-the-street/ ಈಗಾಗಲೇ ದೆಹಲಿಯಲ್ಲಿ ಮಾಲಿನ್ಯ ಏರಿಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮಾಲಿನ್ಯದ ವಿಚಾರವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೆಂಗಳೂರಿನ ನಾನಾ ಭಾಗದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಅಳೆಯಲು ಮಾಪನ ಆಳವಡಿಕೆ ಮಾಡಲಾಗಿದೆ. ಈ ವೇಳೆ ಹಲವಾರು ಭಾಗಗಳಲ್ಲಿ ನಗರದ ವಾತಾವರಣ ಡೇಂಜರ್ ಝೋನ್‍ನಲ್ಲಿ ಇರುವುದು ಬೆಳಕಿಗೆ ಬಂದಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ಅದರಲ್ಲೂ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಾಗರಹೊಳೆ ಉದ್ಯಾನದ ಕಾಡಂಚಿದಲ್ಲಿರುವ ಬಿಲ್ಲೇನಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ ಮತ್ತು ವೆಂಕಟೇಶ್ ಅವರಿಗೆ ಸೇರಿದ ಜಮೀನಿಗೆ ಆನೆ ನುಗ್ಗಿ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆ ನಾಶ ಮಾಡಿದೆ. https://ainlivenews.com/b-y-vijayendra-met-former-prime-minister-hd-deve-gowda/ ಬೆಳೆ ತಿಂದು ತುಳಿದು ನಾಶ ಮಾಡಿದ ಕಾಡಾನೆಗಳು ವಾಸದ ಮನೆ ಮೇಲೂ ದಾಳಿ ಮಾಡಿವೆ. ಕಾಡಾನೆಗಳು ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಹೋಗಿವೆ. ಕೂಟದ ಕಡ, ತಟ್ಟೆ ಹಳ್ಳ ಪಾರೆ ಭಾಗದಿಂದ ಈ ಆನೆಗಳು ಬಂದಿವೆ ಎನ್ನಲಾಗಿದೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಬಂದಿರುವ ಗಜಪಡೆ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.