ವಿಜಯನಗರ:- ಟಿಬಿ ಡ್ಯಾಂ ಐಶ್ವರ್ಯ ಕೊಲೆ ಕೇಸ್ ಮಾಸುವ ಮುನ್ನವೇ ಮತ್ತೊಂದು ಕೊಲೆ ಕೇಸ್ ದಾಖಲಾಗಿದೆ. ವಿಜಯನಗರ ಜಿಲ್ಲೆ ಒಂದೇ ವಾರದಲ್ಲಿ ಎರಡು ಕೊಲೆ ಕೇಸ್ ದಾಖಲಾಗಿದ್ದು, ಮಹಿಳೆಯ ಮೂರನೆ ಪತಿಯಿಂದ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ
ಹಡಗಲಿ ತಾಲೂಕಿನ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಘಟನೆ ಜರುಗಿದೆ. HD ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್ (36) ಕೊಲೆಯಾದ ಮಹಿಳೆ. ಆರೋಗ್ಯ ಅಧಿಕಾರಿ ಡಿಂಪಲ್ ಮೂರನೇ ಪತಿ ಶ್ರೀಕಾಂತ್ ರಿಂದ ಕೊಲೆ ನಡೆದಿದೆ.
ಮೃತ ಡಿಂಪಲ್ ಉಲವತ್ತಿ ಗ್ರಾಮದ ಪ್ರಾ. ಆರೋಗ್ಯ ಸಮುದಾಯ ಕೇಂದ್ರ ಆರೋಗ್ಯ ಅಧಿಕಾರಿಯಾಗಿದ್ದ. ಕೆಳೆದ ವರ್ಷ ಕೋಗಳಿ ತಾಂಡಾದ ನಿವಾಸಿ ಶ್ರೀಕಾಂತ್ ಎಂಬಾತನನ್ನ ಮದುವೆ ಆಗಿದ್ಲು. ನೆಲ್ಲುಕುದುರಿ ಗ್ರಾಮದ ಪ್ರಾ. ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿ ಆರೋಪಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದ.
ಪ್ರಾಥಮಿಕ ಮಾಹಿತಿ ಪ್ರಕಾರ ಡಿಂಪಲ್ ಗೆ ಇದು ಮೂರನೆಯ ಮದುವೆ ಎನ್ನಲಾಗಿದೆ. ಶ್ರೀಕಾಂತ್ ಕೂಡಾ ಡಿಂಪಲ್ ರನ್ನ ಎರಡನೆ ಮದುವೆಯಾಗಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಂಪತಿಗಳು ಅನ್ಯೋನ್ಯವಾಗಿ ವಾಸವಿದ್ರು. ನಿನ್ನೆ ದಿನ ಇದ್ದಕ್ಕಿದ್ದಂತೆ ಪತಿ – ಪತ್ನಿ ನಡುವೆ ಜಗಳ ಆಗಿದೆ. ಆ ಜಗಳದಲ್ಲಿ ಸಿಟ್ಟಿಗೆದ್ದು ಹೆಂಡತಿ ಡಿಂಪಲ್ ರನ್ನ ಆರೋಪಿ ಶ್ರೀಕಾಂತ್ ಕೊಲೆ ಮಾಡಿದ್ದಾನೆ.
ಹೆಂಡತಿಯ ಕೊಲೆ ಬಳಿಕ ಶ್ರೀಕಾಂತ ಇಟ್ಟಗಿ ಠಾಣೆಗೆ ತೆರಳಿ ಖುದ್ದು ಮಾಹಿತಿ ತಿಳಿಸಿದ್ದ. ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶ್ರೀಕಾಂತ್ ಮಾಹಿತಿ ರಾವಾನಿಸಿದ್ದ. ಶ್ರೀಕಾಂತ್ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇಟ್ಟಿಗಿ ಠಾಣೆಯಲ್ಲಿ ಶ್ರೀಕಾಂತ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.