ಹೊರಗಡೆ ನನಗೂ 35 ಕಂಪನಿಯಿದೆ ಎಂಬ ವಿನಯ್ ಹೇಳಿಕೆಗೆ ಇಶಾನಿ ಖಡಕ್ ಉತ್ತರ ನೀಡಿದ್ದಾರೆ.
ಬಿಗ್ ಮನೆಯಿಂದ ಔಟ್ ಆದ ಬಳಿಕ ಖಾಸಗಿ ವಾಹಿನಿಯೊಂದರಲ್ಲಿ ನಡೆದ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ಇಶಾನಿ ಬಿಗ್ಬಾಸ್ ಮನೆಯೊಳಗಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ತಮಗೆ ಮನೆಯಲ್ಲಿ ಉಳಿಯಲು ಒಂದು ಚಾನ್ಸ್ ಕೊಡಬಹುದಿತ್ತು ಎಂದು ಅಭಿಪ್ರಾಯಿಸಿದರು. ಈ ಮಧ್ಯೆ ಪ್ರತಾಪ್ ಮತ್ತು ವಿನಯ್ ನಡುವೆ ಉಂಟಾದ ಒಂದು ಬಿರುಸಿನ ವಾಗ್ದಾಳಿಯಲ್ಲಿ ವಿನಯ್ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ಗೆ ಗುರಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಶಾನಿ ಈಗ ಪ್ರತಿಕ್ರಿಯಿಸಿದ್ದಾರೆ.
ಡ್ರೋಣ್ ಪ್ರತಾಪ್ಗೆ ಹೊರಗಡೆ ನನಗೂ 35 ಕಂಪೆನಿಯಿದೆ ಎಂದು ವಿನಯ್ ಹೇಳಿದ್ದನ್ನು ನೆನಪಿಸಿಕೊಂಡ ಇಶಾನಿ, ‘ಇದು ತುಂಬ ಹಾಸ್ಯಸ್ಪದವಾಗಿದೆ, ಟ್ರೋಲ್ ಮಾಡಿದ್ದಾರೆ ಎಂದರೆ ಏನೂ ಹೇಳಲಿ? ಜನಗಳಿಗೆ ಏನು ಅನಿಸುತ್ತೋ ಅದನ್ನೇ ಮಾಡಿದ್ದಾರೆ’ ಎಂದು ಹೇಳಿದರು