ತುಮಕೂರು:- ಆಜಾನ್ ಸದ್ದು ಕೇಳಿಸುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಅವರು ಮಾತು ನಿಲ್ಲಿಸಿದ್ದಾರೆ. ತುಮಕೂರಿನ ಚಿಲುಮೆ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿತ್ತು. ಸ್ವತ್ತು ಕಳವು ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಸ್ವತ್ತುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ಬಳಿಕ ಸಚಿವ ಡಾ.ಜಿ.ಪರಮೇಶ್ವರ್ ನಡೆಸುತ್ತಿದ್ದರು. ಈ ವೇಳೆ ಆಜಾನ್ ಸದ್ದು ಕೇಳಿಸಿದೆ. ಆಜಾನ್ ಸದ್ದು ಕೇಳುತ್ತಿದ್ದಂತೆ ಪರಮೇಶ್ವರ ಅವರು ಸೈಲೆಂಟ್ ಆಗಿದ್ದಾರೆ. ಸುಮಾರು ಎರಡು ನಿಮಿಷಕ್ಕೂ ಹೆಚ್ಚು ಕಾಲ ಮಾತು ನಿಲ್ಲಿಸಿ ಪರಮೇಶ್ವರ್ ಸುಮ್ಮನೇ ಕುಳಿತರು. ಆಜಾನ್ ಬಳಿಕ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
Author: AIN Author
ಬೆಂಗಳೂರು:- ನವಂಬರ್ 27ರಂದು ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಜನತಾ ದರ್ಶನ ನಡೆಸುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಜನತೆಗೆ ಮತ್ತಷ್ಟು ಹತ್ತಿರವಾಗುವ ಬಗ್ಗೆ ಚಿಂತನೆ ನಡೆಸಿದೆ. ಇನ್ನು ಜನತಾ ದರ್ಶನದಲ್ಲಿ ಭಾಗಿಯಾಗುವ ಜನರು ನಿಮ್ಮಗಳ ಜಯೆ ಈ ಅಗತ್ಯ ದಾಖಲೆಗಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎಂದು ತಿಳಿದು ಬಂದಿದೆ. ಈ ಕುರಿತು ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಗೃಹ ಕಚೇರಿ ಕೃಷ್ಣಾದಲ್ಲಿ ನವೆಂಬರ್ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ. ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿನ ಪತ್ರಗಳಾದ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿಯನ್ನು ಹಂಚಿಕೊಂಡಿದೆ. ನವೆಂಬರ್ 27ರಂದು ಸಿಎಂ ನಡೆಸಲಿರುವ ಜತನಾ ದರ್ಶನದಲ್ಲಿ ರಾಜ್ಯ ಸರ್ಕಾರದ ಸಚಿವರು ಸೇರಿದಂತೆ…
ಚಿತ್ರದುರ್ಗ:- ಡಿಕೆಶಿ ವಿರುದ್ಧ CBI ತನಿಖೆ ಹಿಂಪಡೆದ ಸರ್ಕಾರದ ನಿರ್ಧಾರವನ್ನು ವಿಪಕ್ಷ ನಾಯಕ ಆರ್ ಅಶೋಕ್ ಖಂಡಿಸಿದ್ದಾರೆ. ವಿಪಕ್ಷ ನಾಯಕ ಸ್ಥಾನ ಪಡೆದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಕ್ಷಣೆಗಾಗಿ ಕಾಂಗ್ರೆಸ್ ಕಾನೂನನ್ನು ಉಲ್ಲಂಘಿಸಿದೆ ಎಂದಿದ್ದಾರೆ. ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಕೇಸ್‍ನ್ನು ಸಿಬಿಐನಿಂದ ಮರಳಿ ಪಡೆದ ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ ಹಾಗೂ ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು, ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸುರ್ಜೇವಾಲಾ ಅವರ ಒತ್ತಡದಿಂದಾಗಿ ಸಿಎಂ ಒಪ್ಪಿದ್ದಾರೆ. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕಪ್ಪು ಚುಕ್ಕಿ ಎಂದಿದ್ದಾರೆ. ಡಿಕೆಶಿ ರಕ್ಷಣೆಗಾಗಿಯೇ ವಿಶೇಷ ಸಂಪುಟ ಸಭೆ ನಡೆದಿದೆ. ಈ ಹಿಂದೆ ಸಣ್ಣ ವಿಚಾರಕ್ಕೂ ದೊಡ್ಡದಾಗಿ ಪ್ರಚಾರ ಪಡೆದು ಬಳಿಕ ಘೋಷಿಸುವ ಸಂಪ್ರದಾಯವಿತ್ತು.…
ವಿಜಯನಗರ:- ಟಿಬಿ ಡ್ಯಾಂ ಐಶ್ವರ್ಯ ಕೊಲೆ ಕೇಸ್ ಮಾಸುವ ಮುನ್ನವೇ ಮತ್ತೊಂದು ಕೊಲೆ ಕೇಸ್ ದಾಖಲಾಗಿದೆ. ವಿಜಯನಗರ ಜಿಲ್ಲೆ ಒಂದೇ ವಾರದಲ್ಲಿ ಎರಡು ಕೊಲೆ ಕೇಸ್ ದಾಖಲಾಗಿದ್ದು, ಮಹಿಳೆಯ ಮೂರನೆ ಪತಿಯಿಂದ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಹಡಗಲಿ ತಾಲೂಕಿನ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಘಟನೆ ಜರುಗಿದೆ. HD ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್ (36) ಕೊಲೆಯಾದ ಮಹಿಳೆ. ಆರೋಗ್ಯ ಅಧಿಕಾರಿ ಡಿಂಪಲ್ ಮೂರನೇ ಪತಿ ಶ್ರೀಕಾಂತ್ ರಿಂದ ಕೊಲೆ ನಡೆದಿದೆ. ಮೃತ ಡಿಂಪಲ್ ಉಲವತ್ತಿ ಗ್ರಾಮದ ಪ್ರಾ. ಆರೋಗ್ಯ ಸಮುದಾಯ ಕೇಂದ್ರ ಆರೋಗ್ಯ ಅಧಿಕಾರಿಯಾಗಿದ್ದ. ಕೆಳೆದ ವರ್ಷ ಕೋಗಳಿ ತಾಂಡಾದ ನಿವಾಸಿ ಶ್ರೀಕಾಂತ್ ಎಂಬಾತನನ್ನ ಮದುವೆ ಆಗಿದ್ಲು. ನೆಲ್ಲುಕುದುರಿ ಗ್ರಾಮದ ಪ್ರಾ. ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿ ಆರೋಪಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ಮಾಹಿತಿ ಪ್ರಕಾರ ಡಿಂಪಲ್ ಗೆ ಇದು ಮೂರನೆಯ ಮದುವೆ ಎನ್ನಲಾಗಿದೆ. ಶ್ರೀಕಾಂತ್ ಕೂಡಾ ಡಿಂಪಲ್ ರನ್ನ ಎರಡನೆ ಮದುವೆಯಾಗಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ.…
ಬೆಂಗಳೂರು:- ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು, ಕೆಆರ್ಪಿಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷಗಳು ಆರಂಭವಾಗುವುದೇ ಒಂದು, ಎರಡು ಸ್ಥಾನಗಳಿಂದ. ಬಿಜೆಪಿ ಕೂಡಾ ಎರಡು ಸ್ಥಾನ ಗಳಿಸುವ ಮೂಲಕ ಆರಂಭವಾಗಿದ್ದು, ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಸೀಟ್ ನಿಂದ ಆರಂಭವಾಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು. ಒಂದು ಸ್ಥಾನದಿಂದಲೇ ಪಕ್ಷ ಪ್ರಾರಂಭವಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಹಾಗೂ ಮನೆ ಮನೆಗಳನ್ನು ನಾವು ತಲುಪುತ್ತೇವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬರುವ ಡಿಸೆಂಬರ್ಗೆ ಒಂದು ವರ್ಷ ಆಗಲಿದೆ. ರಾಮಣ್ಣ ಹೆಸರಿನಲ್ಲಿ ಪಕ್ಷ ಪ್ರಾರಂಭಿಸಿದ್ದೆ. ಇಂದು ನನ್ನ ಹೆಸರಿಗೆ ಅದು ವರ್ಗಾವಣೆ ಆಗಿದೆ. ತ್ರಯೋದಶಿಯಂದೇ ನನಗೆ ವರ್ಗಾವಣೆಯಾಗಿದೆ ಎಂದರು. ಪಕ್ಷ ಸ್ಥಾಪನೆ ಮಾಡಿದ ನಂತರ ನನಗೆ ಕೇವಲ ನಾಲ್ಕು ತಿಂಗಳ ಅವಕಾಶ ಇತ್ತು. ಬಳ್ಳಾರಿಗೆ ನಾನು ಹೋಗದೆ ಇರುವಂತಹ ಸ್ಥಿತಿಯಲ್ಲೂ ಕೂಡ…
ಬೆಂಗಳೂರು:- ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದ ಸವಾರನನ್ನೂ ಅರೆಸ್ಟ್ ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ಚನ್ನ ಬಸವನನ್ನು ಅರೆಸ್ಟ್ ಮಾಡಲಾಗಿದೆ. ದ್ವಿಚಕ್ರ ವಾಹನಕ್ಕೆ ಆರೋಪಿಯು, ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಜೆಬಿ ನಗರ ಸಂಚಾರ ಪೊಲೀಸರು ವಾಹನ ವಶಪಡೆದಿದ್ದಾರೆ. ಹೋಂಡಾ ಡಿಯೋಗೆ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿತ್ತು. ಒಂದು ನಂಬರ್ ಕಾಣದಂತೆ ಆರೋಪಿ ಸ್ಟಿಕ್ಕರ್ ಅಂಟಿಸಿದ್ದ. ಉದ್ದೇಶ ಪೂರ್ವಕವಾಗಿ ಸ್ಟಿಕ್ಕರ್ ಅಂಟಿಸಿ ಆರೋಪಿ ವಾಹನ ಓಡಿಸ್ತಿದ್ದ. ಸಂಚಾರಿ ನುಯಮ ಉಲ್ಲಂಘನೆ ಮಾಡೋದ್ರ ಜೊತೆಗೆ ದೋಷಪೂರಿತ ನಂಬರ್ ಪ್ಲೇ ಅಳವಡಿಕೆ ಮಾಡಿದ್ದ. ಈ ಬಗ್ಗೆ ಗಮನವಹಿಸಿ ವಾಹನ ಪತ್ತೆ ಮಾಡಿ ಬೈಯಪ್ಪನಹಳ್ಳಿ ಪೊಲೀಸರಿಗೆ ಜೆಬಿ ನಗರ ಸಂಚಾರ ಪೊಲೀಸರ ಟೀಂ ಮಾಹಿತಿ ನೀಡಿದೆ. ದೂರಿನ ಅನ್ವಯ ಆರೋಪಿ ಚನ್ನಬಸವನನ್ನ ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ವಿರುದ್ದ ಬೈಯಪ್ಪನಹಳ್ಳಿ ಠಾಣೆಯಲ್ಲಿ420ಕೇಸ್ ದಾಖಲು ಮಾಡಿದ್ದಾರೆ.
ಬೆಂಗಳೂರು:- ಅವೈಜ್ಞಾನಿಕ ಜಾತಿಗಣತಿಗೆ ನಮ್ಮ ವಿರೋಧ ಇದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಸಮಿಕ್ಷೆಯಾಗಬೇಕು ಎಂದರು. ಜಾತಿ ಗಣತಿ ಲೋಪದಿಂದ ಕೂಡಿದೆ ಎಂದು ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಅಂತ ಅದೆಲ್ಲ ಲೀಕ್ ಆಗಿದೆ. ಇದರಲ್ಲಿ ಲಿಂಗಾಯತ ವೀರಶೈವ ಎಂದು ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳಿರುವ ಈ ಸಮಿಕ್ಷಾ ವರದಿಗೆ ಎಲ್ಲರ ವಿರೋಧವಿದೆ. ನಾವೂ ಸಹ ಸಿಎಂ ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ. ಬಿಜೆಪಿ, ಜೆಡಿಎಸ್ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಕುರಿತು ಈಗಾಗಲೇ ಮೌಖಿಕವಾಗಿ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ, ನೋಡೋಣ ಎಂದು ಹೇಳಿದ್ದಾರೆ” ಎಂದರು. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ, ಎಲ್ಲೋ ಕೂತು ಸಮೀಕ್ಷೆ ಮಾಡುವುದಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೋದವರೆಲ್ಲ ಸೋತರು, ಬರಿ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದರು.…
ಚಳಿಗಾಲದ ಸೀಸನ್ನಲ್ಲಿ ಜನರು ಸಾಮಾನ್ಯವಾಗಿ ಶೀತ, ಕೆಮ್ಮಿನಂತಹ ಸಮಸ್ಯೆಯಿಂದ ಬಳಲುವುದು ಸಹಜ. ಇದಲ್ಲದೇ ಚಳಿಗಾಲದಲ್ಲಿ ಜೀರ್ಣಕ್ರಿಯೆಯ ಸಮಸ್ಯೆಯೂ ಇರುತ್ತದೆ. ಆದ್ದರಿಂದ ನೀವಿದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಕಷಾಯ ಒಂದು ರೀತಿಯಲ್ಲಿ ಆಯುರ್ವೇದ ಪರಿಹಾರವಾಗಿದ್ದು, ಇದು ಆಯಾ ಋತುಮಾನದ ಸೋಂಕುಗಳ ವಿರುದ್ಧ ಹೋರಾಡಲು ಸಹ ನಿಮಗೆ ಸಹಾಯ ಮಾಡುತ್ತದೆ. ಭಾರತೀಯ ಮನೆಗಳಲ್ಲಿ ಸುಲಭವಾಗಿ ಕಂಡುಬರುವ ಮತ್ತು ಅಡುಗೆಮನೆಯಲ್ಲಿ ಬಳಸುವ ವಿವಿಧ ಪದಾರ್ಥಗಳಿಂದ ಕಷಾಯವನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ, ಆದ್ದರಿಂದ ಯಾವ ಕಷಾಯವು ನಿಮಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತುಳಸಿ ಕಷಾಯ ಬಾಣಲೆಯಲ್ಲಿ ನೀರನ್ನು ಕುದಿಸಿ. ಈಗ ತುಳಸಿ ಎಲೆಗಳು, 1 ಚಮಚ ಕರಿಮೆಣಸು, 1 ಚಮಚ ದಾಲ್ಚಿನ್ನಿ ಪುಡಿ ಮತ್ತು 1 ಚಮಚ ತುರಿದ ಶುಂಠಿ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. 10-15 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಸೋಸಿ. ತಣ್ಣಗಾದ ನಂತರ ಕುಡಿಯಿರಿ. ಇದು ಇಮ್ಯುನಿಟಿ ಬೂಸ್ಟರ್ ಆಗಿ ಕೆಲಸ…
ಭಾರತದಲ್ಲಿ ಕಾಶಿ ತೀರ್ಥ ಅನ್ನೋದು ಪುಣ್ಯಕ್ಷೇತ್ರ ಮನುಷ್ಯ ತನ್ನ ಬದುಕಿನ ಕಾಲ ಘಟ್ಟದಲ್ಲಿ ಒಮ್ಮೆಯಾದ್ರು ಈ ಪುಣ್ಯ ಕ್ಷೇತ್ರದ ದರ್ಶನ ಮಾಡಬೇಕು ಅಂತಾರೆ ಆ ಎಲ್ಲ ದೇವತೆಗಳ ಸಂಗಮ ಕ್ಷೇತ್ರವೇ ಈ ದಕ್ಷಿಣ ಭಾರತದ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇವಸ್ಥಾನ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಬರುವ ಸುಕ್ಷೇತ್ರ ಮದಭಾವಿಯ ಶನಿಮಹಾತ್ಮನ ದೆವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿದೆ ದಕ್ಷಿಣ ಭಾರತದಲ್ಲಿ ಪಿರಮಿಡ್ ಅಕೃತಿಯ ಶೀಲಾ ವಿನ್ಯಾಸ ಹೊಂದಿರುವ ಏಕೈಕ ಶನಿ ದೆವಸ್ಥಾನವೆಂಬ ಹೆಗ್ಗಳಿಕೆ ಈ ದೇವಸ್ಥಾನಕ್ಕಿದೆ. ಈ ದೇವಸ್ಥಾನವು 2008 ರಲ್ಲಿ ನಿರ್ಮಾಣವಾಗಿದ್ದು ಪಿರಮಿಡ್ ಅಕೃತಿ ಹೊಂದಿದೆ ದೇವಸ್ಥಾನ ದ್ವಾರ ಬಾಗಿಲು ಪ್ರವೇಶದಲ್ಲಿ ಶನಿದೇವನ ವಾಹನ ಕಾಗೆಗೆ ಎಣ್ಣೆ ಹಾಕಿ ಎಡಭಾಗದಿಂದ ಪ್ರವೇಶ ಮಾಡಬೇಕು ನಂತರ ಕಲ್ಯಾಣ ಗೃಹದಲ್ಲಿ ಕೈ ಕಾಲು ತೊಳೆದುಕೊಂಡು ದೋಷಮುಕ್ತಾರಾಗಿ ಮಹಾಕಾಲೆಶ್ವರ ಹಾಗೂ 12 ಜೊತಿರ್ಲಿಂಗಗಳ ದರ್ಶನ ಭಾಗ್ಯ ನಿಮಗೆ ಒದಗುತ್ತದೆ . ಈ ದಿವಸ್ಥಾನದ ನಿರ್ಮಾಣ ಬಹಳ ವಿಧಿವಿಧಾನಗಳಿಂದ ಕೂಡಿದ್ದು ದೇವಸ್ಥಾನ…
ಬೆಂಗಳೂರು:- ಬೆಂಗಳೂರಿನಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದ್ದು, ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಜರುಗಿದೆ. ಸಿದ್ಧರಾಜು (43 ) ಮೃತ ದುರ್ದೈವಿ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚೀಮಸಂದ್ರದಲ್ಲಿ ಘಟನೆ ಜರುಗಿದೆ. ಚಪ್ಪಲಿ ಬಿಟ್ಟು ಟ್ರಾನ್ಸ್ ಫಾರ್ಮರ್ ಏರಿ ರಿಪೇರಿ ಮಾಡುವಾಗ ಅವಘಡ ಸಂಭವಿಸಿದೆ. ಆವಲಹಳ್ಳಿ ಕೆಇವಿ ವಿಭಾಗದ ಚೀಮಸಂದ್ರ ಸಮೀಪದ ಅಪ್ಪಾಜಪ್ಪ ಲೇಔಟ್ ನಲ್ಲಿ ಘಟನೆ ಜರುಗಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಲೈನ್ ಮ್ಯಾನ್ ಸಿದ್ಧರಾಜು ಟ್ರಾನ್ಸ್ ಫಾರ್ಮರ್ ಏರಿದ್ದಾನೆ. ಕಳೆದ ಏಂಟು ತಿಂಗಳ ಹಿಂದೆ ಆವಲಹಳ್ಳಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕನಕಪುರ ಮೂಲದ ಸಿದ್ದರಾಜು ಹೊಸಕೋಟೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಿದ್ದರಾಜು ಮೃತ ದೇಹ ರವಾನೆ ಮಾಡಲಾಗಿದೆ.