ಬೆಂಗಳೂರು:– ಬೆಂಗಳೂರಿನಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದ್ದು, ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಜರುಗಿದೆ.
ಸಿದ್ಧರಾಜು (43 ) ಮೃತ ದುರ್ದೈವಿ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚೀಮಸಂದ್ರದಲ್ಲಿ ಘಟನೆ ಜರುಗಿದೆ. ಚಪ್ಪಲಿ ಬಿಟ್ಟು ಟ್ರಾನ್ಸ್ ಫಾರ್ಮರ್ ಏರಿ ರಿಪೇರಿ ಮಾಡುವಾಗ ಅವಘಡ ಸಂಭವಿಸಿದೆ. ಆವಲಹಳ್ಳಿ ಕೆಇವಿ ವಿಭಾಗದ ಚೀಮಸಂದ್ರ ಸಮೀಪದ ಅಪ್ಪಾಜಪ್ಪ ಲೇಔಟ್ ನಲ್ಲಿ ಘಟನೆ ಜರುಗಿದೆ.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಲೈನ್ ಮ್ಯಾನ್ ಸಿದ್ಧರಾಜು ಟ್ರಾನ್ಸ್ ಫಾರ್ಮರ್ ಏರಿದ್ದಾನೆ. ಕಳೆದ ಏಂಟು ತಿಂಗಳ ಹಿಂದೆ ಆವಲಹಳ್ಳಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕನಕಪುರ ಮೂಲದ ಸಿದ್ದರಾಜು ಹೊಸಕೋಟೆಯಲ್ಲಿ ವಾಸವಿದ್ದ ಎನ್ನಲಾಗಿದೆ.
ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಿದ್ದರಾಜು ಮೃತ ದೇಹ ರವಾನೆ ಮಾಡಲಾಗಿದೆ.