Author: AIN Author

ಬೆಂಗಳೂರು:- ಇಂದು ಅಮಾವಾಸ್ಯೆಯ ಲಕ್ಷ್ಮಿ ಪೂಜೆ ಮತ್ತು ನಾಳೆಯ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ನಗರದ ಪಾಲಿಕೆ ವ್ಯಾಪ್ತಿಯಲ್ಲಿನ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. 5 ಸಾವಿರ ರೂಪಾಯಿಗಳಷ್ಟು ಡೆಪಾಸಿಟ್ ಇರಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಅಂಗಡಿಗಳನ್ನು ತೆರೆಯಲಾಗಿದೆ. ಪಾಲಿಕೆ ವ್ಯಾಪ್ತಿಯ 62 ಮೈದಾನಗಳಲ್ಲಿ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಲಾಗಿದ್ದು, 263 ಮಳಿಗೆಗಳನ್ನು ತೆರಯಲಾಗಿದೆ. ಕಳೆದ ವರ್ಷ 65 ಮೈದಾನಗಳಲ್ಲಿ 244 ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಗಾಂಧಿನಗರದ ಆಟದ ಮೈದಾನದಲ್ಲಿ ಯಾವುದೇ ರೀತಿಯಲ್ಲಿ ಅವಘಡ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿಯಮದಂತೆ ಲೈಸೆನ್ಸ್ ಹೋಲ್ಡರ್ ಸ್ಥಳದಲ್ಲಿ ಕಡ್ಡಾಯವಾಗಿ ಇರಬೇಕು ಎನ್ನುವುದನ್ನು ಪಾಲಿಸಲಾಗುತ್ತಿದೆ. ಗ್ರಾಹಕರು ಸಹ ಪಟಾಕಿ ಸಿಡಿಸಬೇಕಾದರೆ ಎಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟಾಕಿ ಮಾರಾಟಗಾರರಾದ ವಿ.ಬಿ ಬಾಬು ತಿಳಿಸಿದರು. ಮೂರು ವರ್ಷದಿಂದ ಎಲ್ಲ ಅಧಿಕೃತ ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಸಹ ಹಸಿರು ಪಟಾಕಿಯನ್ನೇ ಕೇಳಿ ಪಡೆಯುತ್ತಿದ್ದಾರೆ.…

Read More

ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಬಿಗ್​ ಬಾಸ್​ ಸಖತ್​ ಸದ್ದು ಮಾಡುತ್ತಿದೆ. ಈ ಮಧ್ಯೆ ವರ್ತೂರು ಸಂತೋಷ್​ ಸೇಫ್​ ಆಗಿದ್ರೂ, ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿರುವುದು ಬಿಗ್​ ಟ್ವಿಸ್ಟ್​ ನೀಡಿದೆ. ಇವೆಲ್ಲದರ ಜೊತೆಗೆ ದೀಪಾವಳಿ ಖುಷಿಯಲ್ಲಿರುವ ಮನೆ ಮಂದಿಗೆ ಬಿಗ್​ ಬಾಸ್​ ಭಾವುಕ ಸರ್​ಪ್ರೈಸ್​ ನೀಡಿದೆ. ಸ್ಪರ್ಧಿಗಳಿಗೆ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸುಗಳನ್ನು ತರಿಸಿ ಕೊಡಲಾಗಿದೆ. ಬಾಕ್ಸ್​ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳುಹಿಸಿದ ಮನೆಯವರನ್ನು ನೆನೆದು ಸ್ಪರ್ಧಿಗಳು ಭಾವುಕರಾಗಿದ್ದಾರೆ. ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರು ಸಂತೋಷ್​ ಅವರ ಮನೆಯಿಂದಾಗಿತ್ತು. ನೋಡಿ ವರ್ತೂರು ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿ ಬಿಡುವ ಘಟನೆ ನಡೆಯಿತು. ಈ ಘಟನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ. ತೆರೆದ ಬಿಗ್‌…

Read More

ಚಿಕ್ಕಮಗಳೂರು:ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಅವರು ನನ್ನ ಜೊತೆ 2 ಬಾರಿ ಫೋನ್​ನಲ್ಲಿ ಮಾತನಾಡಿದ್ದಾರೆ. 15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡ್ತಿದ್ದಾರೆ. 15 ರ ರಾತ್ರಿವರೆಗೂ ಮಧ್ಯ ಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. 15ಕ್ಕೆ ನಾನು ಇರಲ್ಲ ಅಂತ ಹೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ. ನಂತರ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಸಿ ಟಿ ರವಿ ಮೌನ ವಹಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನು ಇದ್ದೀನಾ? ರಾಜ್ಯಾದ್ಯಂತ ಪ್ರವಾಸ ಮಾಡುವೆ, ರೇಣುಕಾಚಾರ್ಯ ಹೇಳಿಕೆಗೆ ನಾನೇನು ಹೇಳಲಿ. ನಾನ್ ಏನ್ ಹೇಳೋಕೆ ಆಗುತ್ತೆ. ಅದು ಅವರ ಭಾವನೆ, ಅವರು ಹೇಳಿದ್ದಾರೆ. ರಾಜ್ಯ ಸುತ್ತಬಹುದು, ಸುತ್ತುವ ಸಾಮರ್ಥ್ಯ ಇದೆ. ಸುತ್ತಲಿ…

Read More

ಬೆಂಗಳೂರು:- 600 ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹ, ಮಾರಾಟಕ್ಕೆ ಡಿಸಿ ಅವಕಾಶ ನೀಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ. ಅಲ್ಲದೆ, ಪಟಾಕಿ ಮಾರಾಟಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಫೋಟಕಗಳ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಪಟಾಕಿ ಸಂಗ್ರಹಾಗಾರಗಳು ವಸತಿ ಪ್ರದೇಶದಿಂದ ದೂರದಲ್ಲಿರಬೇಕು. ಅಗ್ನಿ ಶಾಮಕಗಳು ಲಭ್ಯ ಇರಬೇಕು. ಪಟಾಕಿ ಸಂಗ್ರಹಾಗಾರಗಳಲ್ಲಿ ನೀರಿನ ಬಕೆಟ್‍ಗಳ ಸಂಗ್ರಹವೂ ಇರಬೇಕಿದ್ದು ಪರವಾನಿಗಿ ಪಡೆದ ಅಂಗಡಿಗಳಲ್ಲಿ ನಿಯಮ ಹಾಗೂ ಸುರಕ್ಷತಾ ಕ್ರಮ ಉಲ್ಲಂಘನೆಯಾಗಿದ್ದಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅಂತಹ ಪರವಾನಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಇತ್ತೀಚೆಗೆ ಅತ್ತಿಬೆಲೆಯಲ್ಲಿ ಅಗ್ನಿ ದುರಂತ ನಡೆದು ಹಲವು ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ತಮ್ಮ ಪರವಾನಿಗೆ ರದ್ದುಪಡಿಸಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ವೀರನಹಳ್ಳಿ ಗ್ರಾಮದ ನಿವಾಸಿ ಕಲಾವತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಜೊತೆಗೆ, 600 ಕೆಜಿ ಪಟಾಕಿ…

Read More

ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಒಂದಲ್ಲ ಒಂದು ಧಾನ್ಯಗಳನ್ನು ಹೊಂದಿದ್ದಾರೆ, ಅದು ಗೋಧಿ ಅಥವಾ ಅಕ್ಕಿ ಮತ್ತು ರಾಗಿ ಇತ್ಯಾದಿ ಯಾವುದೋ ಒಂದು ಇದ್ದೇ ಇರುತ್ತೆ. ಗೋಧಿ ಮತ್ತು ಅಕ್ಕಿ ಹೆಚ್ಚಾಗಿ ಹುಳಗಳು ಅಥವಾ ಕೀಟಗಳಿಗೆ ಗುರಿಯಾಗುತ್ತವೆ. ಈ ಕೀಟಗಳು ಒಳಗಿನಿಂದ ಧಾನ್ಯಗಳನ್ನು ಟೊಳ್ಳಾಗಿಸಲು ಪ್ರಾರಂಭಿಸುತ್ತವೆ ಮತ್ತು ಅವುಗಳೊಳಗೆ ಕುಳಿತುಕೊಳ್ಳುತ್ತವೆ. ಹೀಗಿರೋವಾಗ ಅಡುಗೆ ಮಾಡೋ ಮೊದಲು ಅವುಗಳನ್ನು ತೆಗೆದು ಹಾಕೋದು ತುಂಬಾನೆ ಮುಖ್ಯ. ಧಾನ್ಯಗಳಲ್ಲಿನ ಕೀಟಗಳಿಂದ ನೀವು ತೊಂದರೆಗೀಡಾಗಿದ್ದರೆ, ಈ ಟಿಪ್ಸ್ ನಿಮ್ಮದಾಗಿಸಿ. ಬೇ ಲೀಫ್ ಅಥವಾ ಪುಲಾವ್ ಎಲೆ: ಬೇ ಎಲೆ (bay leaf) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಧಾನ್ಯಗಳಲ್ಲಿನ ಕೀಟಗಳನ್ನು ದೂರವಿರಿಸುತ್ತದೆ. ಬೇ ಎಲೆಗಳನ್ನು ಧಾನ್ಯದ ಡಬ್ಬದಲ್ಲಿ ಹಾಕಿ ಇರಿಸಿ. ಬೇ ಎಲೆಯನ್ನು ಇಡುವುದರಿಂದ ಧಾನ್ಯ ಹಾಳಾಗುವುದಿಲ್ಲ ಮತ್ತು ಕೀಟಗಳು ಬೆಳೆಯೋದಿಲ್ಲವಂತೆ. ಬೇವಿನ ಎಲೆಗಳು: ಬೇವಿನ ಎಲೆಗಳು (neem leaves) ಕೀಟಗಳಿಂದ ಧಾನ್ಯಗಳನ್ನು ರಕ್ಷಿಸುವಲ್ಲಿ ಪರಿಣಾಮ ಬೀರುತ್ತವೆ. ಬೇವಿನ ಎಲೆಗಳ ಔಷಧೀಯ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೀಟಗಳನ್ನು ದೂರವಿರಿಸುತ್ತದೆ.…

Read More

ವರ್ತೂರ್‌ ಸಂತೋಷ್‌ ಅವರ ವಿಚಾರವಾಗಿ ಸುದೀಪ್‌ ಬೇಸರಗೊಂಡಿದ್ದಾರೆ. ಈ ವಾರ ವರ್ತೂರ್‌ ಸಂತೋಷ್‌ ಅವರು ನಾಮಿನೇಟ್‌ ಕೂಡ ಆಗಿದ್ದರು. ಆದರೆ ಬರೋಬ್ಬರಿ 34,15, 472 ಮತಗಳು ಬಂದು ಸೇಫ್‌ ಆಗಿದ್ದಾರೆ. ಆದರೆ ವರ್ತೂರ್‌ ಅವರು ಕಿಚ್ಚನ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ. ಕಿಚ್ಚ ಸುದೀಪ್‌ ಅವರು ಎಷ್ಟೇ ಕನ್ವಿನ್ಸ್‌ ಮಾಡಿದರೂ ವರ್ತೂರ್‌ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ವರ್ತೂರ್‌ ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದಾರೆ. ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಷೋದಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಯಿತು. ಕಿಚ್ಚ ಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು.…

Read More

ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ದೀಪಾವಳಿ ಗೀಫ್ಟ್ ಸಿಕ್ಕಿದ್ದು, ಪ್ರಕರಣದಿಂದ ಬಿಗ್ ರಿಲೀಫ್ ಸಿಕ್ಕಿದೆ. ಚುನಾವಣೆ ವೇಳೆ ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರೆ ಎಂದು ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಕರಣದ ದೂರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿದ್ದ ಎಸ್.ಆನಂದ ಎಂಬುವವರು ಕುಮಾರಸ್ವಾಮಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಅವರ ದೂರನ್ನು ನ್ಯಾಯಾಲಯ ರದ್ದುಗೊಳಿಸುವ ಮೂಲಕ ಬಿಗ್ ರಿಲಿಫ್ ನೀಡಿದೆ. ಚುನಾವಣಾಧಿಕಾರಿಗಳಿಗೆ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ಪತ್ನಿ ವಿವರಗಳನ್ನು ಮತ್ತು ಮಕ್ಕಳ ಮಾಹಿತಿಯನ್ನು ಚುನಾವಣಾ ಪ್ರಮಾಣದಲ್ಲಿ ಪತ್ರದಲ್ಲಿ ತಿಳಿಸಿಲ್ಲವೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

Read More

ಬೆಳಗಾವಿ:- ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಧಿವೇಶನದ ವೇಳೆ ಚರ್ಚೆ ಮಾಡಲಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಸೆಂಬರ್ 4ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಮಟ್ಟದ ನಾಯಕರೆಲ್ಲ ಬೆಳಗಾವಿಯಲ್ಲೇ ಹಾಜರಿರುತ್ತಾರೆ. ಆಗ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಸಂಬಂಧ ಚರ್ಚಿಸಲಾಗುವುದು. 2024ರ ಜನವರಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದರೆ, ಅವರೂ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿ ಮತ್ತು ಚಿಕ್ಕೋಡಿಯಿಂದ ಕುರುಬ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದೇವೆ. ಟಿಕೆಟ್‌ ಪಡೆಯಲು ಇಚ್ಛಿಸುವ ಅಭ್ಯರ್ಥಿ ತಮ್ಮ ಸಮುದಾಯದಲ್ಲಿ ಜನಪ್ರಿಯತೆ ಗಳಿಸಬೇಕು. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವನ್ನೂ ಹೊಂದಿರಬೇಕು. ಈ ಅಂಶಗಳನ್ನು ಆಧರಿಸಿ ಟಿಕೆಟ್‌ ಕೊಡುತ್ತೇವೆ. ಪಕ್ಷದ ಹೈಕಮಾಂಡ್‌ ಅಭ್ಯರ್ಥಿಗಳನ್ನು ಘೋಷಿಸಲಿದೆ’ ಎಂದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸುತ್ತೇವೆ. ಬೇರೆ ರಾಜಕೀಯ ಪಕ್ಷಗಳಲ್ಲಿ ಇದ್ದವರು, ಕಾಂಗ್ರೆಸ್‌…

Read More

ಬೆಂಗಳೂರು:- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ಹಿರಿಯ ನಾಯಕರು ಇಂದು ಭೇಟಿ ಮಾಡಿದ್ದಾರೆ. ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿವೈ ವಿಜಯೇಂದ್ರ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಮಾಜಿ ಸಚಿವರಾದ ಸುರೇಶ್ ಕುಮಾರ್ ಹಾಗು ಗೋವಿಂದ ಕಾರಜೋಳ್ ಅವರು ವಿಜಯೇಂದ್ರ ಅವರನ್ನು ಅಭಿನಂದಿಸಿದರು ಕೆಲವು ಸಮಯ ಪಕ್ಷದ ಸಂಘಟನೆ ಕುರಿತು ವಿಜಯೇಂದ್ರ ಅವರು, ಹಿರಿಯರಿಂದ ಕೆಲವು ಸಲಹೆ ಸೂಚನೆ ಪಡೆದಿದ್ದಾರೆ.

Read More

ಬೆಂಗಳೂರು:- ಹುಡುಗಿಯರಿಗೆ ಬೆಂಗಳೂರು ಸೇಫ್ ಅಲ್ವಾ!? ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆಯಿಂದ ಈ ಪ್ರಶ್ನೆ ಸಹಜವಾಗಿ ಮೂಡಿದೆ. ದುಷ್ಕರ್ಮಿಯೋರ್ವ ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದಾಡಿ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ನ.6 ರಂದು ಸೌತ್ ಎಂಡ್ ಸರ್ಕಲ್ ನ ಡಿಸಿಪಿ ಕಚೇರಿ ಎದುರು ಈ ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಯೋರ್ವ ಸೌತ್ ಎಂಡ್ ಸರ್ಕಲ್ ಬಳಿ ಯುವತಿಯ ಬಟ್ಟೆ ಎಳೆದು ಕಿರುಕುಳ ನೀಡಿ ಬಳಿಕ ಅಶ್ಲೀಲ ಪದಗಳಿಂದ ಬೈದಿದ್ದಾನೆ. ನಂತರ ಆರೋಪಿ ಯೂ ಟರ್ನ್ ತೆಗೆದುಕೊಂಡು ವಾಪಸ್ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ರಾತ್ರಿ 10:40 ರ ವೇಳೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಯುವತಿ ಜಯನಗರ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಿಸಿದ್ದು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.

Read More