Author: AIN Author

ಬೆಂಗಳೂರು:- ಜೆಡಿಎಸ್‌ ಮತ್ತು ಬಿಜೆಪಿ ಜತೆಯಾಗಿ ಲೋಕಸಭಾ ಚುನಾವಣೆ ಎದುರಿಸಲಿವೆ’ ಎಂದು ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಮಾಡುವುದಕ್ಕಾಗಿ ಬೆಂಬಲ ನೀಡುತ್ತಿದ್ದೇವೆ. ಈ ಕಾರಣಕ್ಕಾಗಿ ಜೆಡಿಎಸ್‌ ಮತ್ತು ಬಿಜೆಪಿ ಜತೆಯಾಗಿ ಲೋಕಸಭಾ ಚುನಾವಣೆ ಎದುರಿಸಲಿವೆ ಎಂದರು. ಜಂಟಿ ಹೋರಾಟದಿಂದ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿನ ಲಾಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾವು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವುದರಿಂದ 22ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಮೈತ್ರಿಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದೊಳಗೆ ಅದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದರು. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಉತ್ತಮ ಆಯ್ಕೆ. ಯುವ ಸಮೂಹದಲ್ಲಿ ಸಂಚಲನ ಸೃಷ್ಟಿಸಿರುವ ನಾಯಕನಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್‌ ಒಳ್ಳೆಯ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದರು.

Read More

ಬೆಂಗಳೂರು:- ನಿಗದಿತ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನು ನಿರಾಕರಿಸುವುದು ಸರಿಯಲ್ಲ ಎಂದು ಬೆಂಗಳೂರು ಹೈಕೋರ್ಟ್ ಹೇಳಿದೆ. ಬೆಂಗಳೂರಿನ ನಿವಾಸಿ ಪಿ.ಆರ್. ದೇವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರ ಸಲ್ಲಿಸಬೇಕಾದ ಮೂಲ ಜಾತಿ ಪ್ರಮಾಣಪತ್ರ ಸ್ವೀಕರಿಸಿ, ಸೂಪರ್ ನ್ಯೂಮರರಿ ಹುದ್ದೆಗೆ ಮೀಸಲಾತಿ ಅಡಿ ಲೆಕ್ಕ ಸಹಾಯಕ ಗ್ರೇಡ್ 1ಗೆ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಜೊತೆಗೆ, ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ತಳ್ಳಿರುವ ಮೂಲಕ ಕರ್ನಾಟಕ ಹಾಲು ಮಹಾ ಮಂಡಳಿ ತಪ್ಪು ಮಾಡಿದೆ. ಸಣ್ಣ ಸೂಚನೆಯಲ್ಲಿ ಸರಿಪಡಿಸಿ ನೈಸರ್ಗಿಕ ನ್ಯಾಯ ಒದಗಿಸಬಹುದಾಗಿತ್ತು. ಆ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಕಾರಣ ನೀಡಿಲ್ಲ. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರ ವಾದಿಸಿರುವಂತೆ ಅನ್ಯಾಯದ ಪರಮಾವಧಿಯಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೇ, ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಕೆಎಂಎಫ್ ವಾದಿಸುತ್ತಿಲ್ಲ.…

Read More

ನವದೆಹಲಿ;- ಯುವಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಹೊಸಕಿ ಹಾಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯುವಜನರ ಆಶೋತ್ತರಗಳನ್ನು ಹೊಸಕಿಹಾಕಿದೆ ಎಂದರು. ಯುವಜನರು ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಆದರೆ, ಮೋದಿ ನೇತೃತ್ವದ ಸರ್ಕಾರವು ಕಳೆದ 45 ವರ್ಷಗಳ ಅತಿಹೆಚ್ಚಿನ ನಿರುದ್ಯೋಗ ‍ಪ್ರಮಾಣವನ್ನು ಕರುಣಿಸಿತು’ ಎಂದು ಖರ್ಗೆ ಅವರು ‘ಎಕ್ಸ್‌’ನ ಪೋಸ್ಟ್‌ ಮೂಲಕ ವ್ಯಂಗ್ಯವಾಡಿದ್ದಾರೆ. ಯುವಜನರು ಆರ್ಥಿಕ ಸಬಲೀಕರಣವನ್ನು ಎದುರು ನೋಡುತ್ತಿದ್ದರು. ಅದಕ್ಕೆ ಬದಲಾಗಿ ಸರ್ಕಾರವು ಬೆಲೆ ಏರಿಕೆಯ ಬಿಸಿ ಮುಟ್ಟಿಸಿತು. ಇದರಿಂದಾಗಿ ಜನರ ಉಳಿತಾಯವು 47 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಅವರು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಬಯಸಿದ್ದರು. ಆದರೆ ಮೋದಿ ನೇತೃತ್ವದ ಸರ್ಕಾರವು ದೇಶ ಹಿಂದೆಂದೂ ಕಾಣದ ಆರ್ಥಿಕ ಅಸಮಾನತೆ ಸೃಷ್ಟಿಸಿತು. ಮಧ್ಯಮ ವರ್ಗ ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ, ದೇಶದ ಒಟ್ಟು ಆಸ್ತಿಯಲ್ಲಿ ಶೇ 60ರಷ್ಟು ಆಸ್ತಿಯು ಶೇ 5ರಷ್ಟು ಮಂದಿ ಶ್ರೀಮಂತರ ಬಳಿ ಇದೆ ಎಂದು ಹೇಳಿದ್ದಾರೆ.

Read More

ತುಮಕೂರು:-ಹೈಕಮಾಂಡ್‌ ಒಪ್ಪಿ ಟಿಕೆಟ್‌ ನೀಡಿದರೆ ಸ್ಪರ್ಧಿಸುವುದಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. ಈ ಸಂಬಂಧ ಮಾತನಾಡಿದ ಅವರು,ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇದೆ. ಹೈಕಮಾಂಡ್‌ ಒಪ್ಪಿ ಟಿಕೆಟ್‌ ನೀಡಿದರೆ ಸ್ಪರ್ಧಿಸುವುದಾಗಿ ಹೇಳಿದರು. ಲೋಕಸಭೆಯನ್ನೂ ಒಮ್ಮೆ ನೋಡುವ ಆಸೆಯಿದೆ. ಹೈಕಮಾಂಡ್‌ ಒಪ್ಪಿ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ. ಎಸ್‌.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚೆ ನಡೆಸಿದ್ದಾರೆ. ಡಾ.ಜಿ.ಪರಮೇಶ್ವರ್‌ ಹತ್ತಿರವೂ ಕೆಲವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ಕಾಂಗ್ರೆಸ್‌ ಸೇರುವ ವಿಚಾರ ಗೊತ್ತಿಲ್ಲ ಎಂದರು. ಶೀಘ್ರದಲ್ಲೇ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ. ಅದನ್ನು ಸಾರ್ವಜನಿಕರ ಚರ್ಚೆಗೆ ಬಿಡಲಾಗುವುದು. ಅಲ್ಲಿ ಬರುವ ಅಭಿಪ್ರಾಯವನ್ನು ಪರಿಗಣಿಸಿ, ಯಾವುದನ್ನು ಬಿಡಬೇಕು, ತೆಗೆದುಕೊಳ್ಳಬೇಕು ಎಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.ವರದಿ ಬಂದಾಕ್ಷಣ ಒಪ್ಪಬೇಕೆಂಬ ನಿಯಮವಿಲ್ಲ ಎಂದು ಹೇಳಿದರು. ಮಾಸ್‌ ಲೀಡರ್‌ ಆಗಲು ಸಾಧ್ಯವಿಲ್ಲ: ಸರ್ಕಾರ ಇದ್ದಾಗ ಉಪ ಚುನಾವಣೆಗಳಲ್ಲಿ ಎರಡು ಸ್ಥಾನ ಗೆದ್ದಾಕ್ಷಣ ಮಾಸ್‌ ಲೀಡರ್‌ ಆಗಲು ಸಾಧ್ಯವಿಲ್ಲ, ಜನರ…

Read More

ಬುಧವಾರ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೋಹಿತ್ ಶರ್ಮಾ ಅವರಿಗೆ ಅಗ್ನಿಪರೀಕ್ಷೆಯಾಗಿದೆ. ರೋಹಿತ್ ನಾಯಕತ್ವದ ಬಳಗವು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಡಲಿದೆ. 2019ರ ಸೆಮಿಫೈನಲ್‌ನಲ್ಲಿ ಕಿವೀಸ್ ಬಳಗದ ಎದುರು ಸೋತಿದ್ದ ಭಾರತ ತಂಡವು ಪ್ರಶಸ್ತಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು. ಆಗ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಈಗ ಆ ಸೋಲಿನ ಮುಯ್ಯಿ ತೀರಿಸಿಕೊಳ್ಳುವುದರ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಡುವ ಛಲ ಭಾರತ ತಂಡದಲ್ಲಿದೆ. ತಮ್ಮ ತವರೂರಿನ ಅಂಗಳದಲ್ಲಿ ಗೆಲುವಿನ ಸಂಭ್ರಮ ಆಚರಿಸುವ ಆತ್ಮವಿಶ್ವಾಸ 36 ವರ್ಷದ ಶರ್ಮಾಗೂ ಇದೆ. ಟೂರ್ನಿಯ ಲೀಗ್ ಸುತ್ತಿನಲ್ಲಿ ಎಲ್ಲ ಒಂಬತ್ತು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಆತಿಥೇಯರು ಲಗ್ಗೆ ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಗುರಿ ಬೆನ್ನಟ್ಟಿದ್ದ ಸಂದರ್ಭದಲ್ಲಿ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ಪಂದ್ಯದಲ್ಲಿ ವಿರಾಟ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಜೊತೆಯಾಟದಿಂದಾಗಿ ತಂಡ…

Read More

ಬಿಗ್​ ಬಾಸ್​ ಮನೆಯಿಂದ ಹೊರಗೆ ಹೋಗಬೇಕು ಎಂದು ವರ್ತೂರು ಸಂತೋಷ್ ಅವರು ತೀರ್ಮಾನಿಸಿದ್ದಾರೆ. ಆದರೆ ಅವರ ಮನವೊಲಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ವರ್ತೂರು ಸಂತೋಷ್​ ಅವರು ದೊಡ್ಮನೆ ತೊರೆಯಲು ಏನೇನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ‘ಎರಡು ದೊಡ್ಡ ಡ್ರೋನ್​ ತರಿಸು. ಅದರ ಮೇಲೆ ಕಾಲಿಟ್ಟುಕೊಂಡು ಹಾರಿ ಹೋಗ್ತೀನಿ’ ಎಂದು ಪ್ರತಾಪ್​ಗೆ ವರ್ತೂರು ಸಂತೋಷ್​ ಹೇಳಿದ್ದಾರೆ. ಅವರಿಗೆ ತುಕಾಲಿ ಸಂತೋಷ್​ ಕೂಡ ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ‘ನಿಮ್ಮನ್ನೆಲ್ಲ ಹೊಡೆದರೆ ಸಾಕು. ಅವರೇ ನನ್ನನ್ನು ಹೊರಗೆ ಕಳಿಸುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ. ಈ ಮೂವರ ಸಂಭಾಷಣೆ ಇರುವ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ.

Read More

ಬೆಂಗಳೂರು:- ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ ಬೆಳೆಸಿದವರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ. ಒಟ್ಟು 3350 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಟಿಕೆಟನ್ನು ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಮಹಿಳೆಯ ಆಸನದಲ್ಲಿ ಕುಳಿತು ಪ್ರಯಾಣಿಸುವ ಪುರುಷರನ್ನು ಪತ್ತೆ ಹಚ್ಚಿ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 6,99,325 ರೂ.ಗಳನ್ನು ವಸೂಲಿ ಮಾಡಲಾಗಿದೆ. ಟಿಕೆಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾ ತಂಡಗಳು ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 15,165 ಟ್ರಿಪ್‍ಗಳನ್ನು ತಪಾಸಣೆ ನಡೆಸಿವೆ. 3350 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ 6,72,125 ರೂ.ದಂಡ ವಸೂಲಿ ಮಾಡಿ, ಸಂಸ್ಥೆಯ ನಿರ್ವಾಹಕರ ವಿರುದ್ಧ 953 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 272 ಪುರುಷ ಪ್ರಯಾಣಿಕರಿಂದ ಒಟ್ಟು 27,200 ರೂ.ದಂಡ ವಿಧಿಸಲಾಗಿರುತ್ತದೆ. ಪ್ರಯಾಣಿಕರು ಬಿಎಂಟಿಸಿ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ…

Read More

ವಿಜಯಪುರ:- ದಲಿತರಿಗೆ ಯಾರೂ ಬೆಂಬಲಿಸಲ್ಲ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ 75 ವರ್ಷಗಳಿಂದ “ದೊಡ್ಡ ದೊಡ್ಡ ಗೌಡರು-ಸಾಹುಕಾರರಿಗೆ ’ ಕೈ ಎತ್ತಿಕೊಂಡೇ ಬಂದಿದ್ದೇವೆ. ಆದರೆ ಅಧಿಕಾರ ನೀಡುವ ಹಂತದಲ್ಲಿ ದಲಿತರಿಗೆ ಯಾರೂ ಬೆಂಬಲಿಸಲ್ಲ ಎಂದರು. ಯಡಿಯೂರಪ್ಪ ಅವರ ಮಗನನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ಪಕ್ಷ ನಿರ್ಣಯಿಸಿದೆ. ಇದರಿಂದಾಗಿ ನಮಗೇನೂ ಹೊಟ್ಟೆಯುರಿ ಇಲ್ಲ. ನಾನೇನು ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕೆಂದು ಅಂದುಕೊಂಡು ಕನಸು ಕಂಡವನಲ್ಲ. ದಲಿತರಾದ ನಾವು ಅಂಥ ಕನಸು ಕಾಣಲ್ಲ ಎಂದು ಹೇಳಿದರು. ಅಸೆಂಬ್ಲಿಯಲ್ಲಿ, ಲೋಕಸಭೆಯಲ್ಲಿ ಕಳೆದ 75 ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಶ್ರೀಮಂತರು, ಗೌಡರಿಗಾಗಿ ದಲಿತರು ಕೈ ಎತ್ತುತ್ತಲೇ ಬಂದಿದ್ದೇವೆ. ದಲಿತರಾದ ನಮ್ಮ ಪರ ಯಾರಿದ್ದಾರೆ, ನಮಗಾಗಿ ಯಾರೂ ಕೈ ಎತ್ತಲು ಸಿದ್ಧರಿಲ್ಲ ಎಂದರು.

Read More

ಬೆಂಗಳೂರು :- ಕುಮಾರಸ್ವಾಮಿ ಅವರೇ ಬಡವರ ಹೊಟ್ಟೆ ಮೇಲೆ ಹೊಡೆಯುವ ಕಿಚ್ಚು ನಿಮಗ್ಯಾಕೆ!? ಎಂದು ಪ್ರಶ್ನಿಸುವ ಮೂಲಕ CM ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರೇ, ನಿಮಗೆ ಯಾಕೆ ರಾಜ್ಯದ ಬಡವರ ಮೇಲೆ ಈ ಪರಿಯ ದ್ವೇಷ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ದಿನದಿಂದ ಅದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ನಿಮ್ಮ ದಿನಚರಿಯಾಗಿ ಬಿಟ್ಟಿದೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದೆಂದರೆ ಕೋಟ್ಯಂತರ ಸಂಖ್ಯೆಯಲ್ಲಿರುವ ಬಡ ಫಲಾನುಭವಿಗಳನ್ನು ವಿರೋಧಿಸುವುದೆಂದೇ ಅರ್ಥ. ಯಾಕೆ ಬಡವರ ಹೊಟ್ಟೆಗೆ ಹೊಡೆಯುವ ಕಿಚ್ಚು? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಕೋಟ್ಯಂತರ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮತದಾರರೂ ಸೇರಿದ್ದಾರೆ. ಗ್ಯಾರಂಟಿ ಯೋಜನೆಗಳ ಫಲಿತಾಂಶವನ್ನು ತಿಳಿದುಕೊಳ‍್ಳಬೇಕಾದ ಪ್ರಾಮಾಣಿಕ ಉದ್ದೇಶ ನಿಮಗಿದ್ದರೆ ಬೆಂಗಳೂರಿನಲ್ಲಿ ಕೂತು ಪತ್ರಿಕಾಗೋಷ್ಠಿ ನಡೆಸುವುದಲ್ಲ, ಹಳ್ಳಿಗಳಿಗೆ ಹೋಗಿ ಅಲ್ಲಿರುವ ಫಲಾನುಭವಿಗಳನ್ನು ಮಾತನಾಡಿಸಿ. ಗ್ಯಾರಂಟಿ ಯೋಜನೆಗಳನ್ನು ಬಹಳ ಮುಖ್ಯವಾಗಿ…

Read More

ಬೆಂಗಳೂರು:- 2023 ರ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 47,100 ಮನೆಗಳು ಮಾರಾಟವಾಗಿದೆ. 2022ರಲ್ಲಿ ಇದೇ ಅವಧಿಯಲ್ಲಿ 49,500 ಮನೆಗಳು ಮಾರಾಟವಾಗಿದ್ದವು, 2023ರ ಮೂರನೇ ತ್ರೈಮಾಸಿಕದಲ್ಲಿ 16,400 ಮನೆಗಳು ಮಾರಾಟವಾಗಿವೆ. ಆಸ್ತಿ ಸಲಹಾ ಸಂಸ್ಥೆಯಾದ ಅನರಾಕ್‌ನ ಮಾಹಿತಿಯ ಪ್ರಕಾರ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ, ಮಾರಾಟವು 15,000 ಯುನಿಟ್‌ಗಳಿಂದ ಸುಮಾರು 10% ಹೆಚ್ಚಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ. ಇತ್ತೀಚಿನ ತ್ರೈಮಾಸಿಕದಲ್ಲಿ 14,800 ಮನೆಗಳು ಮಾರಾಟವಾಗಿದೆ. ಅದರಲ್ಲಿ ಕೇವಲ 1% ಮನೆಗಳು ರೂ 40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವೆಚ್ಚದವಾಗಿದ್ದರೆ, ಶೇಕಡ 64 ರಷ್ಟು ಮನೆಗಳ ಬೆಲೆ 80 ಲಕ್ಷದಿಂದ 1.5 ಕೋಟಿ ರೂ.ಗಳಷ್ಟಿತ್ತು, ಶೇ.23ರಷ್ಟು ಮನೆಗಳು 40 ಲಕ್ಷದಿಂದ 80 ಲಕ್ಷ ರೂ. ಬೆಲೆಯವು ಎಂದು ಹೇಳಿದೆ. ಎರಡನೇ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದಲ್ಲಿ 30% ರಷ್ಟು ಹೆಚ್ಚಾಗಿದೆ, ಮೊದಲನೇ ತ್ರಮಾಸಿಕ ಮಾರಾಟಕ್ಕೆ ಹೋಲಿಕೆ ಮಾಡಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. “40 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ…

Read More