ಕಲಬುರ್ಗಿ:- ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಿತು. ಜೈಕರಾವೇ ಮುಖ್ಯಸ್ಥ ಸಚಿನ್ ಫರ್ತಾಬಾದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಹಾಗು ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಇದೇವೇಳೆ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಪ್ರಸಿದ್ಧಿಯಾಗಿರುವ ವಿಜಯಪುರದ ರವಿ ಕೋರೆ ಸಾಹಸಸಿಂಹನ ನಟನೆ ಮಾಡಿ ತೋರಿಸಿದ್ದು ಸೂಪರ್ ಆಗಿತ್ತು..ವಿವಿಧ ಮಠಾಧೀಶರು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು..ಮಾಲಾಶ್ರೀ ತಳಕೇರಿ ಹಾಗು ಚನ್ನು ನಾಲವಾರ ಸಂಗೀತ ಸಂಜೆ ನಡೆಸಿಕೊಟ್ರು..