ಸ್ಮಾರ್ಟ್ ಫೋನ್‌ಗಳು ಈಗ ಎಲ್ಲರ ಬದುಕಿನ ಭಾಗವಾಗಿದೆ. ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಸ್ಮಾರ್ಟ್‌ಫೋನ್‌ಗಳೇ ಆಧಾರವಾಗಿವೆ.ನಮ್ಮ ಆಂಡ್ರಾಯ್ಡ್ ಫೋನ್‌ನನ್ನು ಫಾಸ್ಟ್ ಆಗಿಸಲು ಕೆಲವೊಂದು ಮಾರ್ಗೋಪಾಯಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಲೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಮಾರ್ಗೋಪಾಯಗಳೇನು.? ಇಲ್ಲಿದೆ ಕೆಲ ಸರಳ ಟಿಪ್ಸ್. ಕ್ಯಾಶೆಕ್ಲಿಯರ್ಮಾಡಿ : ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್‌ಗೆ > ಸ್ಟೋರೇಜ್ > ಕ್ಯಾಶೆಡ್ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್‌ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ. ಅನಗತ್ಯಆಪ್‌ಗಳು : ಸಾಕಷ್ಟು ಆಪ್‌ಗಳನ್ನು ನಾವು ಬಳಸುತ್ತೇವೆ. ಆದರೆ ಕೆಲವೊಂದು ಆಪ್‌ಗಳನ್ನು ಒಮ್ಮೆ ಬಳಸಿ ಮತ್ತೆ ಅವುಗಳತ್ತ ತಿರುಗಿಯೂ ನೋಡುವುದಿಲ್ಲ ಅಥವಾ ಅಪರೂಪಕ್ಕೊಮ್ಮೆ ಬಳಸುತ್ತೇವೆ. ಹೀಗೆ ನಿಮ್ಮ ಮೊಬೈಲ್‌ನಲ್ಲಿ ಇರುವ ಅನಗತ್ಯ…
Author: AIN Author
ಅಲ್ಲುಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹಾಗಾಗಿ ಪದೇ ಪದೇ ಸಿನಿಮಾದ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಇದೀಗ ಸ್ವತಃ ಅಲ್ಲು ಅರ್ಜುನ್ ಅವರೇ ಹೊಸದೊಂದು ಅಪ್ ಡೇಟ್ ನೀಡಿದ್ದು, ಹಾಡಿನ ಚಿತ್ರೀಕರಣವನ್ನು (Shooting) ರಾಮೋಜಿರಾವ್ ಸ್ಟುಡಿಯೋದಲ್ಲಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಮಾಡುವ ಕುರಿತು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಾನ್ಸ್ ಮಾಸ್ಟರ್ ಮತ್ತು ನಿರ್ದೇಶಕರು…
ಟೊಮೇಟೊ ಬೆಲೆ ಇಳಿಕೆಯಾಗಲು ಇನ್ನೂ ಒಂದು ತಿಂಗಳು ಕಾಯಬೇಕು ಎನ್ನಬಹುದು. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದರೆ, ಟೊಮೆಟೊ ಬೆಲೆ ಹೆಚ್ಚು ಕೈಗೆಟುಕುವ ಮಟ್ಟಕ್ಕೆ ಇಳಿಯಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಟೊಮೆಟೊ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷಿಸುವ ಮೊದಲು ತಾಳ್ಮೆಯಿಂದಿರಿ ಮತ್ತು ಈ ಅವಧಿಯವರೆಗೆ ಕಾಯುವುದು ಉತ್ತಮ. ಟೊಮ್ಯಾಟೊದಿಂದ ಮಾಡಿದ ಊಟವನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದಾಗ್ಯೂ, ಟೊಮೆಟೊ ಆಧಾರಿತ ಭಕ್ಷ್ಯಗಳ ಅತಿಯಾದ ಸೇವನೆಯು ನಮ್ಮ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಈ ಭಕ್ಷ್ಯಗಳನ್ನು ಅತಿಯಾಗಿ ತಿನ್ನುವುದು ಪ್ರತಿಕೂಲ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು, ಅವುಗಳಲ್ಲಿ ಒಂದು ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯಿದೆ. ಕಿಡ್ನಿ ಸ್ಟೋನ್ ಇರುವವರು ಟೊಮೇಟೊ ಸೇವಿಸಿದರೆ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ವೈದ್ಯರು. ಈ ಸಮಸ್ಯೆಯು ಟೊಮೆಟೊಗಳಲ್ಲಿ ಹೆಚ್ಚಿನ ಮಟ್ಟದ ಆಕ್ಸಲೇಟ್‌ನಿಂದ ಉಂಟಾಗುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕೊಡುಗೆ ನೀಡುತ್ತದೆ. ಜೊತೆಗೆ, ಟೊಮ್ಯಾಟೊ ಹೆಚ್ಚಿನ ಸೇವನೆಯು ದೇಹದಲ್ಲಿ ಕ್ಯಾಲ್ಸಿಯಂ ಉತ್ಪಾದನೆಯನ್ನು…
ಲಕ್ನೋ: ಅಯೋಧ್ಯೆಯ (Ayodhya) ಸರಯು ನದಿಯ ತಟದಲ್ಲಿ 22 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆಯಲಾಗಿದೆ. ಈ ಸ್ಮರಣೀಯ ಸಂದರ್ಭದ ಮರುದಿನವೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ದೀಪೋತ್ಸವದ (Deepotsava) ದಿನ ಕೆಲವು ಮಕ್ಕಳು ಘಾಟ್‌ನಲ್ಲಿ ದೀಪದಿಂದ ಎಣ್ಣೆಯನ್ನು, ತೆಗೆದುಕೊಂಡು ಪಾತ್ರೆಗಳಲ್ಲಿ ತುಂಬುತ್ತಿರುವ ದೃಶ್ಯದ ವೀಡಿಯೋವನ್ನು ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ದೈವಿಕತೆಯ ನಡುವೆ ಬಡತನ… ಬಡತನವು ದೀಪಗಳಿಂದ ಎಣ್ಣೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ಆಚರಣೆಯ ಬೆಳಕು ಮಂದವಾಗುತ್ತದೆ. ಘಟ್ಟ ಮಾತ್ರವಲ್ಲದೆ ಪ್ರತಿಯೊಬ್ಬ ಬಡವರ ಮನೆಯೂ ಬೆಳಗುವ ಇಂತಹ ಹಬ್ಬ ಬರಲಿ ಎಂಬುದು ನಮ್ಮ ಹಾರೈಕೆ ಎಂದು ಎಸ್‌ಪಿ ಮುಖ್ಯಸ್ಥ ಬರೆದುಕೊಂಡಿದ್ದಾರೆ. https://twitter.com/yadavakhilesh/status/1723401256113426697?ref_src=twsrc%5Etfw%7Ctwcamp%5Etweetembed%7Ctwterm%5E1723401256113426697%7Ctwgr%5Ec3770c91c37f5227f9988fdd22c64456e873017a%7Ctwcon%5Es1_&ref_url=https%3A%2F%2Fpublictv.in%2Fakhilesh-yadav-shares-video-of-children-taking-oil-from-earthen-lamps-in-ayodhya%2F 7ನೇ ಆವೃತ್ತಿಯ ದೀಪೋತ್ಸವದಂದು ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ಬರೆಯಲಾಯಿತು. ಒಟ್ಟು 22.23 ಲಕ್ಷ ಮಣ್ಣಿನ ದೀಪಗಳು ಅಯೋಧ್ಯೆಯನ್ನು ಬೆಳಗಿದವು. ಕಳೆದ…
ಬಸವನಬಾಗೇವಾಡಿ: ಬೆಳಗಾವಿ ಚಳಿಗಾಲದ ಅಧಿವೇಶನದೊಳಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಇರದೇ ಇದ್ದರೆ ವಿಕಾಸಸೌಧದವರೆಗೆ ಹೋರಾಟ ನಡೆಸಲಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಎಚ್ಚರಿಸಿದ್ದಾರೆ. 2 ಎ ಹಕ್ಕೊತ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹಿಂದಿನ ಸರಕಾರ ನಮ್ಮ ಪಾದಯಾತ್ರೆ ಹೋರಾಟಕ್ಕೆ 2 ಡಿ ಸೌಲಭ್ಯ ನೀಡಿತು. ಅಷ್ಟರಲ್ಲಿ ನೀತಿ ಸಂಹಿತೆ ಬಂತು. ಆ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ. ಕೆಲವರಂತೂ ಬಿಜೆಪಿ ಸರಕಾರವಿದ್ದಾಗ ಮಾತ್ರ ನಿಮ್ಮ ಪಾದಯಾತ್ರೆ ಹೋರಾಟಾನಾ ಕಾಂಗ್ರೆಸ್ ಸರಕಾರವಿದ್ದರೆ ಇಲ್ಲವಾ ಎಂದೇ ಪ್ರಶ್ನಿಸಿದ್ದಾರೆ. https://ainlivenews.com/b-y-vijayendra-met-former-prime-minister-hd-deve-gowda/ ಹಾಲಿ ಸರಕಾರಕ್ಕೂ ನಾವು ಒತ್ತಾಯ ಮಾಡಿದ್ದೇವೆ. ರಸ್ತೆಯಲ್ಲಿಇಷ್ಟಲಿಂಗ ಪೂಜೆ ನೆರವೇರಿಸಿ 2 ಎ ಬೇಡಿಕೆಗೆ ಒತ್ತಾಯಿಸುವುದು ಮುಂದುವರಿದಿದೆ. ಕಿತ್ತೂರು ಚನ್ನಮ್ಮ ಜಯಂತಿ ಆಚರಿಸಿ ಎಂಬ ಬೇಡಿಕೆ ಇಟ್ಟಾಗ ಅಂದಿನ ಸಚಿವೆ ಉಮಾಶ್ರೀ ಅವರು ಇಲ್ಲಿವರೆಗೆ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಆಚರಣೆ ಮಾಡಿಲ್ಲ ಎಂದು ಹೇಳಿದ್ದರು. ನಂತರ ಜಯಂತಿ ಆಚರಣೆಗೆ ಸರಕಾರ ಆದೇಶ ಮಾಡಿತು.…
ಆನೇಕಲ್:- ತಾಯಿ ಕೊಂದವನ ಮೇಲೆ ಮಗನಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಸಮಂದೂರಿನಲ್ಲಿ ಜರುಗಿದೆಷಯಯಚ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ಜರುಗಿದೆ. ನಾರಾಯಣಪ್ಪ(52) ಹಲ್ಲೆಗೊಳಗಾದ ವ್ಯಕ್ತಿ. ಮಧು (37) ಹಲ್ಲೆ ಮಾಡಿ ಪರಾರಿಯಾದ ಆರೋಪಿ ಎನ್ನಲಾಗಿದೆ. ನಿನ್ನೆ ಸಂಜೆ ಕುಡಿದು ಅವಾಚ್ಯ ಶಬ್ದಗಳಿಂದ ನಾರಾಯಣಪ್ಪ ನಿಂದನೆ ಮಾಡಿದ್ದ. ಆರೋಪಿ ಮಧು ಮನೆ ಬಳಿ ತೆರಳಿ ಅವಾಜ್ ಹಾಕಿದ್ದ.ಈ ವೇಳೆ ಮಧು ಮತ್ತು ನಾರಾಯಣಪ್ಪ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ನಡೆದಿದೆ. ನಾರಾಯಪ್ಪ ತಲೆ ಮೇಲೆ ಮಧು ಕಲ್ಲನ್ನ ಎತ್ತಿ ಹಾಕಿದ್ದು, ಗಂಭೀರವಾಗಿ ಗಾಯಗೊಂಡ ನಾರಾಯಣಪ್ಪ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆರು ವರ್ಷದ ಹಿಂದೆ ಆರೋಪಿ ಮಧು ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ಮೂರು ವರ್ಷದ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದ. ನಿನ್ನೆ ಸಂಜೆ 6:30 ರ ಸುಮಾರಿಗೆ ಸೈಜು ಕಲ್ಲು ಎತ್ತಿ ಹಾಕಿ…
ಎಸ್.ಎಸ್.ಎಲ್.ಸಿ. (SSLC) ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT – Direct Benefit Transfer) ಪದ್ಮತಿಯ ಮೂಲಕ 2022-23ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ (Scholarship) ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರವು ಅನುಮೋದನೆಯನ್ನು ನೀಡಿದೆ. ಕೋರ್ಸ್ ನ ಹೆಸರು / ವಿಧಗಳು ಹುಡುಗರು / ಪುರುಷರು ಹುಡುಗಿಯರು / ಅನ್ಯ ಲಿಂಗದವರು ಪದವಿಯ ಮುಂಚೆ ಪಿ.ಯು.ಸಿ / ಐ.ಟಿ.ಐ / ಮತ್ತು ಡಿಪ್ಲೋಮ ₹2,500 ₹3,000 ಬಿ.ಎ / ಬಿ.ಎಸ್.ಸಿ / ಬಿ.ಕಾಂ, ಇತ್ಯಾದಿ (ಎಂ.ಬಿ.ಬಿ.ಎಸ್ / ಬಿ.ಇ. / ಬಿ.ಟಿಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ) ₹5,000 ₹5,500 ಎಲ್.ಎಲ್.ಬಿ…
ರಿಪ್ಪನ್ ಪೇಟೆ :- ಮನೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ವೇಳೆ ರಿಪ್ಪನ್ ಪೇಟೆ ಪೊಲೀಸರು ದಾಳಿ ಮಾಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೂರು ಗ್ರಾಮದಲ್ಲಿ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಬಾಳೂರು ಗ್ರಾಮದ ಗಿರೀಶ್ ಕುಮಾರ್ ಎಂಬುವವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿ ಗಿರೀಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು, ಮದ್ಯ ತುಂಬಿದ 10 ಟೆಟ್ರಾ ಪ್ಯಾಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್.ಪಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಉಮೇಶ್, ಶಿವಕುಮಾರ್, ಸಂತೋಷ್ ಮತ್ತು ಮಧುಸೂಧನ್ ಇದ್ದರು.
ಬೆಂಗಳೂರು:- CM ಸಿದ್ದುಗೆ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 2.45 ಲಕ್ಷ ಕೋಟಿ ರು. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ರು. ಸಾಲ ಮಾಡಲಾಗಿತ್ತು. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರು. ಸಾಲ ಮಾಡಿದ್ದರು. ಈಗ 85,815 ಕೋಟಿ ರು. ಸಾಲ ಮಾಡಲು ಹೊರಟಿದ್ದಾರೆ. ಹಾಲಿ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರು. ಇದೆ. ಪ್ರತಿ ವರ್ಷ 56,000 ಕೋಟಿ ರು. ಬಡ್ಡಿ ಕಟ್ಟಬೇಕು ಎಂದು ಸಿಎಂ ಹೇಳಿದ್ದಾರೆ. ಸಾಲದ ಬಗ್ಗೆ ಮಾತನಾಡಲು…
ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗುತ್ತಿದ್ದು, ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ತಮ್ಮ ಸಂಪುಟದಲ್ಲಿದ್ದ ಭಾರತೀಯ ಮೂಲದವರೇ ಆದ ಸುಯೆಲ್ಲಾ ಬ್ರಾವರ್‌ಮನ್ (Suella Braverman) ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಹಾಗೆಯೇ ಬ್ರಿಟನ್ ಮಾಜಿ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಪ್ಯಾಲೇಸ್ತೀನ್ ಪರವಾದ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ ರೀತಿಯನ್ನು ಸುಯೆಲ್ಲಾ ಬ್ರಾವರ್‌ಮನ್ ಟೀಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಬ್ರಿಟನ್‌ನಲ್ಲಿ ಕಳೆದ ವಾರ ಪ್ಯಾಲೇಸ್ತೀನ್ ಪರ ಪ್ರತಿಭಟನೆ ನಡೆದಿತ್ತು. ಈ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ್ದು ಸರಿಯಾಗಿಲ್ಲ ಎಂದು ಟೀಕಿಸಿ ಸುಯೆಲ್ಲಾ ಲೇಖನವೊಂದನ್ನು ಪ್ರಕಟಿಸಿದ್ದರು. https://ainlivenews.com/b-y-vijayendra-met-former-prime-minister-hd-deve-gowda/ ಈ ಮೂಲಕ ಅವರು ಉದ್ವಿಗ್ನತೆ ಹೆಚ್ಚಿಸಿದ್ದಾರೆ. ಬಲಪಂಥೀಯರನ್ನು ಲಂಡನ್‌ನಲ್ಲಿ ಬೀದಿಗಿಳಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡುವಂತೆ ಪ್ರಧಾನಿ ರಿಷಿ ಸುನಕ್ ಮೇಲೆ ಒತ್ತಡ ಕೇಳಿ ಬಂದಿತ್ತು. ಇದಾದ ನಂತರ ಈಗ ಸುನಕ್ ಅವರ ಸಂಪುಟದಿಂದ ಸುಯೆಲ್ಲಾ ಅವರಿಗೆ ಕೊಕ್ ನೀಡಲಾಗಿದೆ.…